ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ದೈಹಿಕ ಸಂಪರ್ಕ ಬೆಳೆಸಿದ ನಂತರ 500 ರೂಪಾಯಿ ಕೇಳಿದ್ದಕ್ಕೆ ಆಕೆಯನ್ನು ಕೊಂದಿರುವ ದುರ್ಘಟನೆಯೊಂದು ಛತ್ತಿಸ್ಗಢದ ಕೊರ್ಬಾದಲ್ಲಿ ನಡೆದಿದೆ. ಚಂದ್ರ ವಿಜಯ್ ಎಂಬ ಯುವಕ ತನ್ನ ಪ್ರೇಯಸಿಯನ್ನು ಹತ್ಯೆಗೈದಿರುವ ಆರೋಪಿ. ಇಂದ್ರ ದೇವಿ ಭಾರದ್ವಾಜ್ ಎಂಬ ಮಹಿಳೆ ಜೊತೆ ಆನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಕಳೆದ ಡಿಸೆಂಬರ್ 09 ಸೋಮವಾರದಂದು ರಾತ್ರಿ ಸಮಯದಲ್ಲಿ ಇಂದ್ರ ದೇವಿಯ ಶವ ಆಕೆಯ ಜಮೀನಿನಲ್ಲಿ ಪತ್ತಯಾಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ಪೊಲೀಸರು ಶೋಧಿಸಿ ನೋಡಿದಾಗ ತಿಳಿದುಬಂದದ್ದು, ಇಂದ್ರ ಭಾರದ್ವಾಜ್ ಹಾಗೂ ಆರೋಪಿ ಚಂದ್ರ ವಿಜಯ್ ಹಲವು ದಿನಗಳಿಂದ ಆನೈತಿಕ ಸಂಬಂಧ ಬೆಳೆಸಿಕೊಂಡಿದ್ದರು ಎಂಬುದು.
ಈ ಕುರಿತು ಆರೋಪಿ ಚಂದ್ರನನ್ನು ಕೇಳಿದಾಗ, ಆಕೆ ನನ್ನನ್ನು ಸೋಮವಾರ ರಾತ್ರಿ ಅವರ ಜಮೀನಿಗೆ ಬರಲು ಹೇಳಿದ್ದಳು. ನಾವಿಬ್ಬರು ಜಮೀನಿಗೆ ಹೋಗಿ ದೈಹಿಕ ಸಂಪರ್ಕ ಬೆಳೆಸಿದ್ದೆವು. ಆ ನಂತರ ಆಕೆ ನನ್ನ ಬಳಿ 500 ರೂಪಾಯಿ ಕೊಡು ಎಂದು ಕೇಳಿದಳು. ನಾನು ಅದಕ್ಕೆ ಇಲ್ಲ ಎಂದೇ, ಆದರೆ ಆಕೆ ನಾನು 500 ರೂ. ಕೊಡಲು ನಿರಾಕರಿಸಿದಕ್ಕೆ ಅವಳು ಜೋರಾಗಿ ಚಿರಾಡಲು ಶುರು ಮಾಡಿದಳು. ಇದಲ್ಲದೇ ನಮ್ಮಿಬ್ಬರ ಆಕ್ರಮ ಸಂಬಂಧವನ್ನು ಪೋಷಕರಿಗೆ ತಿಳಿಸುತ್ತೇನೆ ಎಂದು ಹೇಳಿದಳು.
ನಾನು ಎಷ್ಟು ಹೇಳಿದರು ಕೂಡ ಅವಳು ಕಿರುಚಾಡುವುದನ್ನು ಮತ್ತಷ್ಟು ಜೋರು ಮಾಡಿದಳು. ಆಕೆಯ ಕಿರುಚಾಟಕ್ಕೆ ನಾನು ಕೋಪದಿಂದ ಕತ್ತು ಹಿಸುಕಿ, ಬಳಿಕ ಕಲ್ಲು ಎತ್ತಿ ಹಾಕಿ ಸಾಯಿಸಿದೆ ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮಹಿಳೆಯ ಶವ ಆಕೆಯ ಮನೆಯಿಂದ 70 ಮೀ. ದೂರದಲ್ಲಿರುವ ಜಮೀನಿನಲ್ಲಿ ಸಿಕ್ಕಿದ್ದು, ಮಹಿಳೆಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ಸ್ಥಳಕ್ಕೆ ವಿಧಿವಿಜಾÐನ ಪ್ರಯೋಗಾಲಯದ ತಂಡವನ್ನು ಕೂಡ ಪರಿಶೀಲನೆ ನಡೆಸಲು ಕರೆಸಲಾಗಿತ್ತು ಎಂಬುದು ವರದಿಯಲ್ಲಿ ತಿಳಿದುಬಂದಿದೆ.