ಕೆಜಿಎಫ್ ೨ ಚಿತ್ರೀಕರಣ ನಿಲ್ಲಿಸುವಂತೆ ಕೋರ್ಟ್ ನಿಂದ ತಡೆಯಾಜ್ಞೆ !

0
341

ಕೆಜಿಎಫ್ ಕನ್ನಡದ ಹೆಮ್ಮೆ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುವೆಚ್ಚದ ಸಿನಿಮಾ.. ಕಳೆದ ವರ್ಷ ಬಿಡುಗಡೆಯಾದ ಕೆಜಿಎಫ್, ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ದೊಡ್ಡ ಮಟ್ಟಿನ ಹೆಸರು ಮಾಡಿತ್ತು..

ಪ್ರಶಾಂತ್ ನೀಲ್ ಅವರ ಚಿತ್ರಕಥಾ ಶೈಲಿಗೆ ಕನ್ನಡ ಸಿನಿ ಪ್ರೇಕ್ಷಕರಲ್ಲದೆ ನೆರೆಹೊರೆಯ ನಟ ನಟಿಯರು, ಸಿನಿರಸಿಕರು ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದವರು ನಿರ್ದೇಶಕ ಪ್ರಶಾಂತ್ ನೀಲ್ !

ಚಿತ್ರವೇನೋ ಬಿಡುಗಡೆಯಾಗಿ ದೊಡ್ಡ ಮಟ್ಟಿನ ಹೆಸರು ಮಾಡಿ ಗಲ್ಲಾಪೆಟ್ಟಿಗೆಯನ್ನು ತುಂಬಿಸಿ ಕೊಳ್ಳುವುದರಲ್ಲಿ ಯಶಸ್ವಿಯಾಗಿತ್ತು..

ಇನ್ನು ಅಧೀರನ ಪಾತ್ರದಲ್ಲಿ ಬಾಲಿವುಡ್ ವಿಲನ್ ಸಂಜಯ್ ದತ್ ಅಭಿನಯಿಸುತ್ತಿರುವುದು ಎಲ್ಲೆಡೆ ಕುತೂಹಲ ಹೆಚ್ಚಿಸಿದೆ..

ಇದರ ನಡುವೆ ಈಗ ಕೆಜಿಎಫ್ ತಂಡದಿಂದ ಅಭಿಮಾನಿಗಳಿಗೆ ಬಿಗ್ ಶಾಕ್ ಬಂದಿದೆ.. ಹೌದು ಚಿತ್ರೀಕರಣ ನಿಲ್ಲಿಸಬೇಕೆಂದು JMFC ನ್ಯಾಯಾಲಯ ತಡೆ ನೀಡಿದೆ. ಚಿತ್ರೀಕರಣದಿಂದ ಪರಿಸರಕ್ಕೆ ಹಾನಿ ಎಂದು ಕೆಜಿಎಫ್ ನ ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ್ಯ ಶ್ರೀನಿವಾಸ್ ದೂರು ದಾಖಲಿಸಿದ್ರು. ಈ ಹಿನ್ನೆಲೆ ಚಿತ್ರೀಕರಣಕ್ಕೆ ತಡೆ ನೀಡಿ ನಿರ್ಮಾಪಕ ವಿಜಯ್ ಕಿರಗಂದೂರಿಗೆ ನೋಟಿಸ್ ಜಾರಿ ಮಾಡಿದೆ.! ನ್ಯಾಯಾಲಯದಿಂದ ಚಿತ್ರೀಕರಣಕ್ಕೆ ತಡೆ ಹಿನ್ನಲೆ ಚಿತ್ರತಂಡ ಸ್ಥಳ ಖಾಲಿ ಮಾಡುತ್ತಿದ್ದೆ! ಚಿತ್ರೀಕರಣಕ್ಕೆ ಕೋರ್ಟ್ ತಡೆ ನೀಡಿರೋದು ಅಭಿಮಾನಿಗಳಲ್ಲಿ ಬಾರಿ ನಿರಾಸೆ ಮೂಡಿಸಿದೆ!

LEAVE A REPLY

Please enter your comment!
Please enter your name here