ಪೈಲ್ವಾನ್ ಟ್ರೈಲರ್ ಗೆ ಕ್ಷಣಗಣನೆ !

0
159

ಪೈಲ್ವಾನ್ ,ಅಭಿನಯ ಚಕ್ರವರ್ತಿ ಬಾದ್ ಶಾ ಕಿಚ್ಚ ಸುದೀಪ್, ಅಭಿನಯದ ಕನ್ನಡದ ಬಹು ನಿರೀಕ್ಷಿತ ಚಿತ್ರ ! ಸದ್ಯ ಟೀಸರ್, ಟ್ರೇಲರ್ ಮತ್ತು ಸಾಂಗ್‍ಗಳಿಂದ ಕನ್ನಡದಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದೆ.

ಇನ್ನು ಪೈಲ್ವಾನ್ ಕನ್ನಡ ಮಾತ್ರವಲ್ಲದೆ ತೆಲುಗು ,ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಐದು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ..
ಇನ್ನು ಚಿತ್ರಕ್ಕೆ ಕೃಷ್ಣ ಅವರು ಆಕ್ಷನ್ ಕಟ್ ಹೇಳಿದ್ದು, ಸುದೀಪ್ ಅವರ ಬಾಕ್ಸಿಂಗ್ ಲುಕ್ಕಿಗೆ ಸಿನಿ ಪ್ರಿಯರು ಫಿದಾ ಆಗಿದ್ದಾರೆ.! ಇನ್ನು ಸಿನಿಮಾದ ‘ಕನ್ಯಾಮಣಿಯೆ ಕಣ್ಣು ಹೊಡಿಯೇ’ ಸಾಂಗ್ ಈಗಾಗಲೇ ಪಡ್ಡೆ ಹುಡುಗರ ಬಾಯಲ್ಲಿ ಸದಾ ಗುನುಗುವಂತೆ ಮಾಡಿದೆ…
ಇನ್ನು ಚಿತ್ರದಲ್ಲಿ `ಬಿ’ ಟೌನ್ನ ಸುನೀಲ್ ಶೆಟ್ಟಿ, ನಟಿಸುತ್ತಿರುವುದು ವಿಶೇಷ !.
ಸದ್ಯ ಚಿತ್ರತಂಡ ಆಡಿಯೋ ಇಗಷ್ಟೆ ರಿಲೀಸ್ ಮಾಡಿದೆ..

ಇನ್ನು ಈ ಸಮಾರಂಭಕ್ಕೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಮಿಸಿ, ಪೈಲ್ವಾನ್ ಆಡಿಯೋ ಬಿಡುಗಡೆ ಮಾಡುವ ಮುಖಾಂತರ ಕಿಚ್ಚನಿಗೆ ಆಲ್ ದ ಬೆಸ್ಟ್ ಹೇಳಿದ್ದಾರೆ! ಜೊತೆಗೆ ಪೈಲ್ವಾನ್ ಮೂಲಕ ಕನ್ನಡಕ್ಕೆ ಸುನೀಲ್ ಪಾದಾರ್ಪಣೆ ಮಾಡುತ್ತಿದ್ದಾರೆ …

ಸದ್ಯ ಚಿತ್ರತಂಡ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ,ಹಿಂದಿ ಸೇರಿದಂತೆ ಐದು ಭಾಷೆಯಲ್ಲಿಯೂ ಟ್ರೈಲರ್ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ! ಸದ್ಯ ಚಿತ್ರ ತಂಡ ಟ್ರೈಲರ್ ಬಿಡುಗಡೆ ಮಾಡುತ್ತೇವೆ ಎಂಬುವ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ ಕಂಡ ಕಿಚ್ಚ ಸುದೀಪ್ ಅಭಿಮಾನಿಗಳು ಕಾತುರದಿಂದ ಕಾದು ಕುಳಿತ್ತಿದ್ದಾರೆ!
ಹಾಡು ಹಾಗೂ ಟ್ರೈಲರ್‍ಗಳಿಂದ ಸದ್ದು ಮಾಡುತ್ತಿದ್ದ ಪೈಲ್ವಾನ್, ನಾಳೆ ಟ್ರೈಲರ್ ಬಿಡುಗಡೆಯಾದ ಮೇಲೆ ಮತ್ತ್ಯಾವ ದಾಖಲೆ ಬರೆಯುತ್ತದೆಯೋ ಕಾದು ನೋಡಬೇಕಾಗಿದೆ ! ಇಷ್ಟೆಲ್ಲ ವಿಶೇಷತೆ ತುಂಬಿಕೊಂಡಿರುವ ಪೈಲ್ವಾನ್ ಸೆಪ್ಟೆಂಬರ್ 15 ರಂದು ಥಿಯೇಟರ್ಗೆ ಲಗ್ಗೆ ಇಡಲಿದೆ. !

LEAVE A REPLY

Please enter your comment!
Please enter your name here