ನಾಡಹಬ್ಬ ದಸರಾಗೆ ಕ್ಷಣಗಣನೆ ಆರಂಭ.!

0
115

ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಕ್ಷಣಗಣನೆ ಆರಂಭವಾಗುತ್ತಿದೆ, ಮೈಸೂರು ಜಿಲ್ಲೆಯಲ್ಲಿ ದಸರಾಗೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎನ್ನಬಹುದು. ದಸರಾ ಸಾಂಸ್ಕೃತಿಕ, ರಾಜ ಮನೆತನದ ವೈಭೋಗ ಸಂಭ್ರಮದ ಹಬ್ಬ ಎಂದೇ ಹೇಳಬಹುದು.

ನಾಡಹಬ್ಬ ದಸರಾ ವೀಕ್ಷಣೆಗೆ ನಮ್ಮ ರಾಜ್ಯದವರು ಮಾತ್ರವಲ್ಲ.! ದೇಶ ವಿದೇಶದಿಂದ ಜನರು ಆಗಮಿಸುತ್ತಾರೆ. ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗುವ ದಸರಾ ಮಹೋತ್ಸವ ಹತ್ತು ಹಲವು ವಿಶೇಷತೆಗಳನ್ನು ಹೊತ್ತು ಭರ್ಜರಿಯಿಂದ ಸಾಗುತ್ತದೆ. ಯುವ ದಸರಾ, ಯುವ ಸಂಭ್ರಮ, ವಸ್ತು ಪ್ರದರ್ಶನ, ಆಹಾರ ಮೇಳ ಇನ್ನು ಮುಂತಾದ ಕಾರ್ಯಕ್ರಮಗಳು ದಸರಾ ವಿಶೇಷವಾಗಿ ಜನರಿಗೆ ರಸದೌತಣ ನೀಡಲಿದೆ ಎನ್ನಬಹುದು. ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ನಾಡಹಬ್ಬ ದಸರಾ ವಿಶೇಷ ಕುರಿತು ಕೆಲ ಕೆಲಸಗಳು ಪ್ರಾರಂಭಗೊಂಡಿದೆ ಜೊತೆಗೆ ದಸರಾ ಹೈಪವರ್ ಕಮಿಟಿ ಸಭೆ ಇದೇ ಆಗಸ್ಟ್ ೯ ರಂದು ನಡೆಯಲಿದೆ. ಇದರ ಬಗ್ಗೆ ಅಧಿಕೃತವಾಗಿ ಸಿಎಂ ಕಚೇರಿಯಿಂದ ಮಾಹಿತಿ ರವಾನೆಯಾಗಿದ್ದು. ಆಗಸ್ಟ್ ೦೯ ರಂದು ಮೈಸೂರು ಜಿಲ್ಲಾಧಿಕಾರಿಗಳ ಜೊತೆ ದಸರಾ ಹಬ್ಬಕ್ಕೆ ಸಂಬಂಧಪಟ್ಟಂತೆ ಮಾತನಾಡಲಿದ್ದಾರೆ.

ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಕಚೇರಿಯಿಂದ ಮಾಹಿತಿ ಬಂದಿದೆ ಎನ್ನಲಾಗಿದೆ. ದಸರಾ ಸಂಭ್ರಮಾಚರಣೆ ಕುರಿತು ನಡೆಸಲಿರುವ ಸಭೆಯಲ್ಲಿ ದಸರಾಗೆ ಯಾರು ಚಾಲನೆ ನೀಡಲಿದ್ದಾರೆ ಹಾಗೂ ಹಣಕಾಸಿನ ವಿಚಾರ ಚರ್ಚೆಯಾಗಲಿದೆ. ೨೦೧೯ರ ದಸರಾ ಹಬ್ಬವನ್ನು ಭಾರಿ ವಿಜೃಂಭಣೆಯಿಂದ ನಡೆಸಲು ಸರ್ಕಾರ ಸಾಕಷ್ಟು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎನ್ನಬಹುದು.

LEAVE A REPLY

Please enter your comment!
Please enter your name here