ಕುರುಕ್ಷೇತ್ರ ಚಿತ್ರಕ್ಕೆ ಕ್ಷಣಗಣನೆ : ಕಟೌಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಜೊತೆ ರೆಬೆಲ್ ಸ್ಟಾರ್ !

0
111

ಕುರುಕ್ಷೇತ್ರ ದೊಡ್ಡ ತಾರಾಬಳಗವನ್ನು ಹೊಂದಿರುವ ಕನ್ನಡದ ಹೆಮ್ಮೆಯ ಚಿತ್ರ.. ಸದ್ಯ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.. ಇದೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.. ಮತ್ತೊಮ್ಮೆ ಕನ್ನಡಿಗರಿಗೆ ಐತಿಹಾಸಿಕ ಚಿತ್ರಗಳಲ್ಲಿ ಒಲವು ಜಾಸ್ತಿ, ಎಂಬುದು ಕುರುಕ್ಷೇತ್ರ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.. ಭಾರತೀಯ ಶ್ರೇಷ್ಠ ಮಹಾಕಾವ್ಯವನ್ನು ತೆರೆಯ ಮೇಲೆ ನೋಡಲು ಸಿನಿರಸಿಕರು ಕಾದು ಕುಳಿತಿದ್ದಾರೆ …

ಇನ್ನು ಈಗಾಗಲೇ ಬುಕ್ಕಿಂಗ್ ಓಪನ್ ಆಗಿದ್ದು , ಮೊದಲನೇ ದಿನದ ಶೋಗಳು ಬಹುತೇಕ ಹೌಸ್ಫುಲ್ ಆಗಿದೆ. ಹಾಗೆಯೇ ಎರಡು ಮತ್ತು ಮೂರನೇ ದಿನದ ಶೋಗಳ ಬುಕ್ಕಿಂಗ್ ವೇಗ ಕೂಡಾ ಜೋರಾಗಿದೆ…

ದೊಡ್ಡ ತಾರಾ ಬಳಗವೇ ಹೊಂದಿರುವ ಕುರುಕ್ಷೇತ್ರ, ಸಿನಿಮಾಗೆ ಥಿಯೇಟರ್ ಗಳ ಮುಂದೆ ಕಟೌಟ್ ನಲ್ಲಿ ಯಾರು ರಾರಾಜಿಸುತ್ತಾರೆ ಎಂದು ಅಭಿಮಾನಿಗಳಲ್ಲಿ ಗೊಂದಲಗಳಿತ್ತು !
ಇತ್ತೀಚೆಗಷ್ಟೇ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ ಬಾಸ್, ಅಂಬಿ ಅವರ ಕಟೌಟ್ ಮಾತ್ರ ಸಾಕು, ನಮ್ಮದ್ಯಾರದ್ದು ಬೇಡ.. ಎಂದು ಹೇಳಿದ್ದರು ! ಈ ಮೂಲಕ ಪ್ರೀತಿಯ ಅಂಬಿ ಅವರ ಕೊನೆಯ ಚಿತ್ರಕ್ಕೆ, ದೊಡ್ಡ ಗೌರವ ಕೂಡಬೇಕೆಂಬುದು ದರ್ಶನ್ ಅವರ ಆಸೆಯಾಗಿತ್ತು !ಆದರೆ ಚಿತ್ರತಂಡ ದರ್ಶನ್ ಅವರ ಅಭಿಮಾನಿಗಳಿಗೆ ಬೇಸರ ಮಾಡಬಾರದೆಂದು ಅಂಬಿ ಅವರ ಜೊತೆ ದರ್ಶನ್ ಅವರನ್ನು ನಿಲ್ಲಿಸಿದ್ದಾರೆ ..

ಇನ್ನು ಚಿತ್ರದಲ್ಲಿ ದುರ್ಯೋಧನನಾಗಿ ಡಿ ಬಾಸ್ ಭೀಷ್ಮನಾಗಿ ಅಂಬಿ, ಅರ್ಜುನನಾಗಿ ಸೋನು ಸೂದ್, ಕರ್ಣನ ಪಾತ್ರದಲ್ಲಿ ಅರ್ಜುನ್,_ ಸರ್ಜಾ, ಶಕುನಿಯ ಪಾತ್ರದಲ್ಲಿ ರವಿಶಂಕರ್ ಹಾಗೂ ಧರ್ಮರಾಯನಾಗಿ ಶಶಿಕುಮಾರ್ ಅಭಿನಯಿಸಿದ್ದಾರೆ. ಚಿತ್ರಮಂದಿರದಲ್ಲಿ ಕಟೌಟ್ ರಾರಾಜಿಸುತ್ತಿದೆ.. ಅಂಬಿ ಅವರನ್ನು ಎತ್ತರದಲ್ಲಿ ನಿಲ್ಲಿಸಿ ದರ್ಶನ್ ಅವರು ಚಿತ್ರರಂಗದ ಭೀಷ್ಮನಿಗೆ ಗೌರವ ಸಲ್ಲಿಸಿದ್ದಾರೆ.
ಇನ್ನು ಕುರುಕ್ಷೇತ್ರದ ಕಧನವನ್ನು ತೆರೆಯ ಮೇಲೆ ನೋಡಲು ಉಳಿದಿರುವುದು ಎರಡು ದಿನಗಳು ಮಾತ್ರ ಎ.ಲ್ಲರಿಗೂ ವರಮಹಾಲಕ್ಷ್ಮಿ ಹಬ್ಬ ಜೋರಾದರೆ ಸಿನಿಪ್ರಿಯರಿಗೆ ಕುರುಕ್ಷೇತ್ರವೇ ದೊಡ್ಡ ಹಬ್ಬ ಆಗಲಿದೆ !

LEAVE A REPLY

Please enter your comment!
Please enter your name here