ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಶುರುವಾಯ್ತು ಕೌಂಟ್ಡೌನ್..!!

0
171

‘ಮೈಸೂರು ದಸರಾ ಎಷ್ಟೊಂದು ಸುಂದರ’ ಎಂಬ ವಾಕ್ಯವೇ ನಮಗೆ ತಿಳಿಸುತ್ತದೆ ಮೈಸೂರು ದಸರಾ ಎಷ್ಟು ವಿಶೇಷತೆ, ವೈಭೋಗದಿಂದ ಕೂಡಿರಲಿದೆ ಎಂಬುದು. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಆಯುಧ ಪೂಜೆಯಂದು ದಸರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಮೈಸೂರು ಅರಸರು ಪೂರ್ವ ಕಾಲದಿಂದ ನಡೆಸಿಕೊಂಡು ಬಂದಿರುವ ನಾಡಹಬ್ಬ ದಸರಾ ಬಹಳ ಮಹತ್ವದಿಂದ ನಡೆಯುವ ಹಬ್ಬವಾಗಿದ್ದು, ಮೈಸೂರಿನ ಜನತೆಗೆ ಸೆಪ್ಟೆಂಬರ್ ತಿಂಗಳಿಂದ ಆಯುಧ ಪೂಜೆಯವರೆಗೂ ಬಹಳ ಖುಷಿ,ಸಂತಸದ ತಿಂಗಳಾಗಲಿದೆ. ದಸರಾಗೆ ಈಗಾಗಲೇ ಮೈಸೂರಿನಲ್ಲಿ ಸಕಲ ಸಿದ್ಧತೆಗಳು ಏರ್ಪಡುತ್ತಿದ್ದು, ರಾಜ್ಯ ಸರ್ಕಾರ ನಾಡ ಹಬ್ಬ ದಸರಾಗೆ ಬೇಕಾದ ಹಲವು ರೂಪುರೇಷೆಗಳನ್ನು ಅಧಿಕಾರಿಗಳಿಗೆ ರವಾನಿಸಿದೆ.

ದಸರಾ ಮಹೋತ್ಸವದ ಹಿನ್ನೆಲೆ ಗಜಪಡೆಯ ಆಗಮನವಾಗಿದ್ದು, ಇಂದು ಬೆಳಗ್ಗೆ ಹನ್ನೊಂದು ಗಂಟೆಗೆ ಹುಣಸೂರು ತಾಲ್ಲೂಕಿನ ವೀರನ ಹೊಸಹಳ್ಳಿ ಗ್ರಾಮದ ಗ್ರಾಮದಿಂದ ಆರಂಭಗೊಂಡಿದೆ. ನೂತನ ಸಚಿವ ಆರ್. ಅಶೋಕ್ ಗಜಪಯಣಕ್ಕೆ ಚಾಲನೆ ನೀಡುವ ಮೂಲಕ ಸ್ಥಳದಲ್ಲಿ ಉಪಸ್ಥಿತರಿದ್ದರು. ಈ ಬಾರಿ ದಸರಾ ಮಹೋತ್ಸವದಲ್ಲಿ ನಾಗರಹೊಳೆಯ ವಿಭಾಗದ ಬಳ್ಳೆ ಆನೆ ಶಿಬಿರದ ನಾಯಕ ಅರ್ಜುನ, ಮತ್ತಿಗೋಡು ಆನೆ ಶಿಬಿರದ ಬಲರಾಮ,ಅಭಿಮನ್ಯು ವರಲಕ್ಷ್ಮಿ ಮತ್ತು ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ ಕಾವೇರಿ, ವಿಕ್ರಮ, ವಿಜಯ ಸೇರಿದಂತೆ ಹಲವು ಗಜಪಡೆ ಈ ಬಾರಿ ದಸರಾದಲ್ಲಿ ಭಾಗವಹಿಸಲಿದೆ. ಜೊತೆಗೆ ಬಂಡೀಪುರದ ರಾಮಪುರ ಶಿಬಿರದ ಆನೆ ೧೭ ವರ್ಷದ ಲಕ್ಷ್ಮಿ ಮತ್ತು ೧೯ ವರ್ಷದ ರೋಹಿತ್ ಸೇರಿ ಒಟ್ಟು ಹದಿನಾಲ್ಕು ಆನೆಗಳು ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದೆ.

LEAVE A REPLY

Please enter your comment!
Please enter your name here