ಚಿಕ್ಕಮಂಗಳೂರು ಜಿಲ್ಲೆಯ ಅವಧೂತ ವಿನಯ್ ಗುರೂಜಿ ತಮ್ಮ ಆಧ್ಯಾತ್ಮಿಕ ಜ್ಞಾನದಿಂದ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಸದ್ಯ ಕರ್ನಾಟಕದಲ್ಲಿ ಅವರು ಅಪಾರ ಶಿಶ್ಯವರ್ಗವನ್ನು ಹೊಂದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಖ್ಯಾತಿ ಪಡೆದಿರುವ ವಿನಯ್ ಗುರೂಜಿ ಅವರಿಗೆ ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವಾರು ರಾಜಕಾರಣಿಗಳು ಇವರ ಆಶೀರ್ವಾದ, ಸಲಹೆಗಳನ್ನ ಪಡೆಯುತ್ತಿರುತ್ತಾರೆ. ಕರಾವಳಿ ಭಾಗದಲ್ಲಿ ವಿನಯ್ ಗುರೂಜಿ ಈಗ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಆದರೆ ಈಗ ವಿನಯ್ ಗುರೂಜಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಹೌದು, ಈಜು ಕೊಳವೊಂದರಲ್ಲಿ ವಿನಯ್ ಗುರೂಜಿ ಬಲಿಚಕ್ರವರ್ತಿ ರೀತಿಯಲ್ಲಿ ತನ್ನ ಅನುಯಾಯಿಯೊಬ್ಬರ ತಲೆ ಮೇಲೆ ಕಾಲಿಟ್ಟು ನಿಂತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಈಗ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಧಾರ್ಮಿಕ ವ್ಯಕ್ತಿಯೊಬ್ಬರು ಈ ರೀತಿ ಮಾಡಬಹುದಾ..? ಎಂಬ ಪ್ರಶ್ನೆ ಎಲ್ಲೆಡೆ ಎದ್ದಿದೆ. ಇನ್ನು ಈ ವಿಡಿಯೋ ಬಗ್ಗೆ ವಿನಯ್ ಗುರೂಜಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.