ಮುಂದುವರೆದ ಹುಚ್ಚವೆಂಕಟ್ ಹುಚ್ಚಾಟ! ಮಡಿಕೇರಿ ಆಯ್ತು ಈಗ ಮೈಸೂರಿನಲ್ಲಿ ಕಪಾಳ ಮೋಕ್ಷ !

0
589

ನಟ ನಿರ್ದೇಶಕ ಹುಚ್ಚ ವೆಂಕಟ್ ಅವರ ಹುಚ್ಚಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ… ಎರಡು ಮೂರು ತಿಂಗಳಿಂದ ಕಣ್ಮರೆಯಾದ ಹುಚ್ಚ ವೆಂಕಟ್ ಅವರು ಚೆನ್ನೈ ಬೀದಿಯಲ್ಲಿ ಕಾಣಿಸಿಕೊಂಡಿದ್ದರು.. ರಾಂಧವ ಚಿತ್ರತಂಡ ಇವರನ್ನು ಕರ್ನಾಟಕಕ್ಕೆ ಕರೆದು ತಂದಿದ್ದರು. ನಂತರ ಬುಧವಾರ ಹುಚ್ಚ ವೆಂಕಟ್ ಅವರು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಕಾಣಿಸಿಕೊಂಡಿದ್ದರು..ನೀಲಿ ಶರ್ಟ್, ಕಪ್ಪು ನೀಲಿ ಬಣ್ಣ ಪ್ಯಾಂಟ್ ಹಾಗೂ ಶೂ ಹಾಕಿಕೊಂಡು ರಸ್ತೆಯಲ್ಲಿ ಅಲೆಮಾರಿಯಂತೆ ಓಡಾಡುತ್ತಿದ್ದರು. ಇದನ್ನು ಕಂಡ ಕೆಲವು ಯುವಕರು ಅವರ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಲು ಬಿಟ್ಟಿದ್ದರು.

ಇದಾದ ಬಳಿಕ ಅಂದರೆ ಗುರುವಾರ ಮಡಿಕೇರಿಯಲ್ಲಿ ರಂಪಾಟ ಮಾಡಿಕೊಂಡು ಪೊಲೀಸ್ ಮೆಟ್ಟಿಲನ್ನು ಸಹ ಏರಿದ್ದಾರೆ… ಮಡಿಕೇರಿಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕಾರಿನ ಗಾಜಿಗೆ ಕಲ್ಲಿನಲ್ಲಿ ಹೊಡೆದು ದೊಡ್ಡದಾಗಿ ಗಲಾಟಿ ಮಾಡಿದ್ದಾರೆ ಹಾಗೂ ಅಲ್ಲಿ ಸಾರ್ವಜನಿಕನೊಬ್ಬನ ಕಪಾಳಕ್ಕೂ ಸಹ ಹೊಡೆದಿದ್ದಾರೆ. ಇದನ್ನು ಕಂಡ ಸ್ಥಳೀಯರು ಹುಚ್ಚ ವೆಂಕಟ್ ಅವರಿಗೆ ಹಿಗ್ಗಾಮುಗ್ಗಾ ಹೊಡೆದು ಪೊಲೀಸ್ ಠಾಣೆಗೆ ದೂರು ನೀಡಿದ್ದರು..

ಈಗಾ ಹುಚ್ಚ ವೆಂಕಟ್ ಮೈಸೂರಿನ ಪಿರಿಯಾಪಟ್ಟಣದಲ್ಲಿ ಮತ್ತೆ ತನ್ನ ಹುಚ್ಚಾಟ ಮುಂದುವರೆಸಿದ್ದಾರೆ..

ಹೌದು ಪಿರಿಯಾಪಟ್ಟಣದ ಪೆಟ್ರೋಲ್ ಬಂಕ್ ನಲ್ಲಿ ಪಿರಿಯಾಪಟ್ಟಣವನ್ನು ಕೂರ್ಗ್ ಎಂದು ಕರೆಯಬೇಕು ಅಂತ ಪೆಟ್ರೋಲ್ ಬಂಕ್ ಬಳಿ ಗಲಾಟೆ ಮಾಡಿದ್ದಾರೆ, ಇನ್ನು ಪೆಟ್ರೋಲ್ ಬಂಕ್ ಬಳಿ ಗಲಾಟೆ ಮಾಡುವುದನ್ನು ಕಂಡ ಅಲ್ಲಿನ ಸ್ಥಳಿಯರು ವೆಂಕಟ್ ಗೆ ಕಪಾಳಕ್ಕೆ ಭಾರಿಸಿದ್ದಾರೆ, ಇನ್ನು ಇಲ್ಲಿ ಸಾರ್ವಜನಿಕರು ಕೂಡ ವೆಂಕಟ್ ನನ್ನು ಪ್ರಚೋಧಿಸುತ್ತಿದ್ದಾರೆ ಈ ಕಾರಣಕ್ಕೆ ಹುಚ್ಚಾವೆಂಕಟ್ ಈ‌ ರೀತಿಯಲ್ಲ ಮಾಡುತ್ತಿದ್ದಾನೆ ಹಾಗಾಗಿ ಆ ವ್ಯಕ್ತಿಗೆ ಉತ್ತಮವಾದ ಚಿಕಿತ್ಸೆ ನೀಡಿ‌ ಮತ್ತು ಸಾರ್ವಜನಿಕರು ಆತನನ್ನು ಪ್ರಚೋಧಿಸುವುದನ್ನು ನಿಲ್ಲಿಸಿ ಅಂತ ಹಿರಿಯರು ತಿಳಿದವರು ಹೇಳುತ್ತಾ ಇದ್ದಾರೆ..

LEAVE A REPLY

Please enter your comment!
Please enter your name here