ಕೈ ಉಪ ಕದನಕ್ಕೆ ಬಿರುಸಿನ ಸಿದ್ದತೆ

0
102

ಬೆಂಗಳೂರು: ಆರ್.ಆರ್.ನಗರ ಹಾಗೂ ಶಿರಾ ಕ್ಷೇತ್ರಗಳ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜೆಡಿಎಸ್,ಬಿಜೆಪಿಗಿಂತ ಮೊದಲೇ ಕಾಂಗ್ರೆಸ್ ಅಭ್ಯರ್ಥಿಗಳನ್ನ ಘೋಷಿಸಿದ್ದು, ನಾಮಿನೇಷನ್ ಫೈಲ್ ಮಾಡೋಕೆ ಅಗತ್ಯ ಸಿದ್ಧತೆಗಳನ್ನ ನಡೆಸಿದೆ. ಜೊತೆ ಜೊತೆಗೇ ತಮ್ಮ ಅಭ್ಯರ್ಥಿಗಳನ್ನ‌ಗೆಲ್ಲಿಸಿಕೊಳ್ಳೋಕೆ ರಣತಂತ್ರಗಳನ್ನೂ ರೂಪಿಸ್ತಿದೆ.

14 ರಂದು ಕುಸುಮ ನಾಮಪತ್ರ ಸಲ್ಲಿಕೆ

ಆರ್.ಆರ್.ನಗರಕ್ಕೆ ಐಎಎಸ್ ಅಧಿಕಾರಿ ಡಿ.ಕೆ.ರವಿಯವರ ಪತ್ನಿ ಕುಸುಮಾಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಇದೇ ೧೪ ರಂದು ಕುಸುಮ ನಾಮಪತ್ರ ಸಲ್ಲಿಸೋಕೆ ನಿರ್ಧರಿಸಿದ್ದಾರೆ. ನಾಮಿನೇಷನ್ ಫೈಲ್ ಮಾಡೋಕೆ ಬೇಕಾದ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗ್ತಿದೆ. ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಪಕ್ಷ ಹಿರಿಯ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಪರಮೇಶ್ವರ್ ಸೇರಿದಂತೆ ಬೆಂಗಳೂರು ಭಾಗದ ನಾಯಕರು ಭಾಗಿಯಾಗಲಿದ್ದಾರೆ. ಇನ್ನು ಅಕ್ಟೋಬರ್ ೧೪ ರಂದು ಆರ್.ಆರ್.ನಗರದಲ್ಲಿ ಕುಸುಮಾ ನಾಮಿನೇಷನ್ ಮಾಡಿದ್ರೆ,೧೫ ರಂದು ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಶಿರಾದಲ್ಲಿ ಕೈ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

ಇನ್ನು ಎರಡೂ ಕ್ಷೇತ್ರಗಳ ಬೈ ಎಲೆಕ್ಷನ್ ಗೆಲ್ಲೋಕೆ ಹಿರಿಯ ನಾಯಕರು ಹಲವು ತಂತ್ರಗಳನ್ನ‌ ಹೆಣೆಯುತ್ತಿದ್ದಾರೆ. ಜಾತಿವಾರು ಲೆಕ್ಕಾಚಾರ ಹಾಕುವ ಮೂಲಕ ಅಖಾಡಕ್ಕೆ ಇಳಿಯೋದಕ್ಕೆ ಸಿದ್ದರಾಗ್ತಿದ್ದಾರೆ.
ಆರ್.ಆರ್.ನಗರದಲ್ಲಿ ವಾರ್ಡ್ ಮಟ್ಡದಲ್ಲಿ ನಾಯಕರಿಗೆ ಹೊಣೆ ನೀಡಿದ್ದಾರೆ. ಶಿರಾದಲ್ಲಿ ಬೂತ್ ಮಟ್ಟದಲ್ಲಿ ಕೆಲವು ನಾಯಕರಿಗೆ ಉಸ್ತುವಾರಿ ನೀಡಲಾಗಿದೆ. ಇದ್ರ ಜೊತೆಗೆ ಈ‌ ಬಾರಿ ಯುವ ಕಾಂಗ್ರೆಸ್, ಕಿಸಾನ್ ಘಟಕ, ಎನ್ ಎಸ್ ಯುಐ, ಸೇವಾದಳದ ಕಾರ್ಯಕರ್ತರನ್ನು ಚುನಾವಣೆಯಲ್ಲಿ ಬಳಸಿಕೊಳ್ಳೋಕೆ ನಿರ್ಧರಿಸಲಾಗಿದೆ. ಕಾಂಗ್ರೆಸ್ ಭವನದಲ್ಲಿ ಅಭ್ಯರ್ಥಿ ಕುಸುಮ ಜೊತೆಗೂಡಿ ಯೂತ್ ಕಾಂಗ್ರೆಸ್,ಮಹಿಳಾ ಮುಖಂಡರ ಜೊತೆಯೂ ಡಿಕೆಶಿ ಸಭೆ ನಡೆಸಿದ್ದು, ಚುನಾವಣಾ ಟ್ರಿಕ್ಸ್ ಗಳನ್ನ ಕುಸುಮಾಗೆ ಕೊಟ್ಟಿದ್ದಾರಂತೆ. ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಜೊತೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಚುನಾವಣಾ ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆಸಿದ್ದು, ಅಖಾಡಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಎರಡೂ ಕ್ಷೇತ್ರದ ಜಾತಿವಾರಿ ಲೆಕ್ಕಾಚಾರ ನೋಡುವುದಾದ್ರೆ

ಆರ್.ಆರ್.ನಗರದ ಜಾತಿ ಲೆಕ್ಕಾಚಾರವೇನು..?

೧)ಕ್ಷೇತ್ರದ ಒಟ್ಟು ಮತದಾರರು- ೪,೮೦,೦೦೦
೨)ಒಟ್ಟು ಬೂತ್ ಗಳ ಸಂಖ್ಯೆ- ೩೮೧
೩) ಒಕ್ಕಲಿಗ – ೧,೦೦,೦೦೦
೪) ಲಿಂಗಾಯತ ೪೫,೦೦೦
೫)ಕುರುಬ -೫೦,೦೦೦
೬) ದಲಿತ -೭೧,೦೦೦
೭) ಒಬಿಸಿ- ೭೦,೦೦೦
೮)ಮುಸ್ಲಿಂ -೨೫,೦೦೦
೯)ಇತರೆ ಮತಗಳು- ೩೫,೦೦೦

ಶಿರಾ ಕ್ಷೇತ್ರದ ಜಾತಿ ಲೆಕ್ಕಾಚಾರವೇನು..?

೧) ಕ್ಷೇತ್ರದ ಒಟ್ಟು ಮತದಾರರು- ೨,೧೦,೮೧೪
೨) ಕುಂಚಿಟಿಗ ಒಕ್ಕಲಿಗ- ೪೦,೦೦೦
೩) ಎಸ್ಸಿ,ಎಸ್ಟಿ- ೮೦,೦೦೦
೩) ಯಾದವ- ೨೫,೦೦೦
೪)ಕುರುಬ-೨೩,೦೦೦
೫) ಮುಸಲ್ಮಾನ್- ೧೫,೦೦೦
೬) ಬಲಿಜಿಗ -೧೬,೦೦೦
೭) ಲಿಂಗಾಯತ-೨,೦೦೦
೮) ಇತರೆ ೯,೦೦೦

ಶಿರಾ ಹಾಗೂ ರಾಜರಾಜೇಶ್ವರಿನಗರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿದೆ. ಅಕ್ಟೋಬರ್ ೧೪/೧೫ ರಂದು ನಾಮಪತ್ರ ಸಲ್ಲಿಕೆಗೂ ಡೇಟ್ ಫಿಕ್ಸ್ ಆಗಿದೆ.ಅಲ್ಲದೆ ಚುನಾವಣೆ ಗೆಲ್ಲೋಕೆ ರಣತಂತ್ರಗಳನ್ನೂ ಮಾಡಿಕೊಳ್ಳಲಾಗ್ತಿದೆ.

LEAVE A REPLY

Please enter your comment!
Please enter your name here