ರಾಜ್ಯದ 9 ಜಿಲ್ಲೆಗಳಿಗೆ ಹೊಸ ಅಧ್ಯಕ್ಷರ ಹುಡುಕಾಟಕ್ಕಿಳಿದ ಕಾಂಗ್ರೆಸ್

0
227

ಸಂಘಟನಾತ್ಮಕವಾಗಿ ಕುಸಿದಿರುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ಸದೃಡಗೊಳಿಸಲು ರಾಜ್ಯ ಕಾಂಗ್ರೆಸ್ ಮುಂದಾಗಿದ್ದು, ಇದೀಗ ಜಿಲ್ಲಾ ಕಾಂಗ್ರೆಸ್ ಸಮತಿಯ ಅಧ್ಯಕ್ಷರನ್ನು ಬದಲಾವಣೆ ಮಾಡಲು, ವಿವಿಧ ಜಿಲ್ಲೆಗಳಿಗೆ ವೀಕ್ಷಕರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸುವ ಸಲುವಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಮುಂದಾಗಿದೆ. ಹೀಗಾಗಿ ಎಐಸಿಸಿ ಸೂಚನೆಯ ಮೇರೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನು ಬದಲಾವಣೆ ಮಾಡಲು, 9 ಜಿಲ್ಲೆಗಳಿಗೆ ವೀಕ್ಷಕರನ್ನು ರಾಜ್ಯ ಕಾಂಗ್ರೆಸ್ ನೇಮಕ ಮಾಡಿದೆ.

ಹೀಗೆ ವೀಕ್ಷಕರಾಗಿ ನೇಮಕಗೊಂಡಿರುವವರು, ಜಿಲ್ಲೆಗಳ ಮುಖಂಡರೊಂದಿಗೆ ಚರ್ಚೆ ನಡೆಸಿ, 10-9-2019ರ ಒಳಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಲು ಸೂಚಿಸಿದೆ. ಈ ಮೂಲಕ ನೂತನ ಜಿಲ್ಲಾಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಮುಂದಾಗಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಬದಲಾವಣೆಗೆ ನೇಮಕಗೊಂಡಿರುವ ವೀಕ್ಷಕರು

ಚಿತ್ರದುರ್ಗ – ಎಂ ಸಿ ವೇಣುಗೋಪಾಲ್, ಎಂಎಲ್ ಸಿ
ದಾವಣಗೆರೆ – ಪಿಎಂ ಅಶೋಕ್, ಮಾಜಿ ಎಂ ಎಲ್ ಸಿ
ಬಾಗಲಕೋಟೆ – ಅಬ್ದುಲ್ ಜಬ್ಬರ್, ಎಂ ಎಲ್ ಸಿ
ರಾಯಚೂರು – ಆರ್ ಬಿ ತಿಮ್ಮಾಪುರ್, ಶಾಸಕರು ಹಾಗೂ ಮಾಜಿ ಸಚಿವರು

ಬಿಜಾಪುರ – ಡಿ ಆರ್ ಪಾಟೀಲ್, ಮಾಜಿ ಶಾಸಕರು
ಕೋಲಾರ – ಎಂ ನಾರಾಯಣಸ್ವಾಮಿ, ಎಂ ಎಲ್ ಸಿ
ಚಿಕ್ಕಮಗಳೂರು – ಎಂ ಎ ಗೋಪಾಲಸ್ವಾಮಿ, ಎಂ ಎಲ್ ಸಿ
ಬೆಳಗಾವಿ ನಗರ ಮತ್ತು ಗ್ರಾಮೀಣ – ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಸಚಿವರು

LEAVE A REPLY

Please enter your comment!
Please enter your name here