ಬೆಂಗಳೂರು: ಕಾಂಗ್ರೆಸ್ ಗೆ ಮಸ್ಕಿಯಲ್ಲಿ ಅಭ್ಯರ್ಥಿ ಸಿಕ್ಕಿಲ್ಲ ಅಂದ್ರೆ ನಾಚಿಕೆಗೇಡು. ಕಾಂಗ್ರೆಸ್ ಅಭ್ಯರ್ಥಿ ಯಾರೇ ಇದ್ರೂ ಹೇಗೆ ಗೆಲ್ಲಬೇಕೆಂಬ ತಂತ್ರವನ್ನು ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ಮಾಡ್ತಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಮಸ್ಕಿ, ಬಸವಕಲ್ಯಾಣ ಬೈ ಎಲೆಕ್ಷನ್ ಕುರತು ಮಾತನಾಡಿದ ಅವರು, ನನಗೆ ಬಸವಕಲ್ಯಾಣ ಕಡೆ ಓಡಾಡಲು ರಾಜ್ಯಾಧ್ಯಕ್ಷರು ಸೂಚಿಸಿದ್ದಾರೆ. ಈಗ ಕಾಂಗ್ರೆಸ್ ದಿವಾಳಿಯಾಗಿದೆ. ಕಾಂಗ್ರೆಸ್ ಗೆ ಮಸ್ಕಿಯಲ್ಲಿ ಅಭ್ಯರ್ಥಿ ಸಿಕ್ಕಿಲ್ಲ ಅಂದ್ರೆ ನಾಚಿಕೆಗೇಡು. ಕಾಂಗ್ರೆಸ್ ಅಭ್ಯರ್ಥಿ ಯಾರೇ ಇದ್ರೂ ಹೇಗೆ ಗೆಲ್ಲಬೇಕೆಂಬ ತಂತ್ರವನ್ನು ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ಮಾಡ್ತಾರೆ ಎಂದು ವಿಜಯೇಂದ್ರ ತಿರುಗೇಟು ನೀಡಿದರು.
“ನಾನು ದೆಹಲಿಗೆ ಹೋಗಿದ್ದು ಖಾಸಗಿ ಕಾರಣಕ್ಕೆ”
ದೆಹಲಿಗೆ ಹೋಗಿ ಬಂದ ವಿಚಾರದ ಕುರಿತು ಮಾತನಾಡಿದ ಅವರು, ನಾನು ದೆಹಲಿಗೆ ಹೋಗಿದ್ದು ಖಾಸಗಿ ಕಾರಣಕ್ಕೆ. ರಾಜಕಾರಣಕ್ಕೆ ದೆಹಲಿಗೆ ಹೋಗಿರಲಿಲ್ಲ. ವೈಯಕ್ತಿಕ ಕಾರ್ಯ ನಿಮಿತ್ತ ಹೋಗಿದ್ದೆ. ಬೇರೆ ನಾಯಕರನ್ನು ಭೇಟಿ ಮಾಡಲು ಹೋಗಿರಲಿಲ್ಲ ಎಂದು ತಿಳಿಸಿದರು.
“ಎಲ್ಲವನ್ನೂ ವಿವಾದಕ್ಕೆ ಲಿಂಕ್ ಮಾಡೋದು ಸರಿಯಲ್ಲ”
ಡಿ.5 ರಂದು ಬಂದ್ ಗೆ ಕರೆ ಕೊಟ್ಟ ವಿಚಾರದ ಕುರಿತು ಮಾತನಾಡಿದ ಅವರು, ರಾಜ್ಯದ ಮರಾಠಿಗರ ಅಭಿವೃದ್ಧಿಗೆ ನಿಗಮ ಮಾಡಲಾಗಿದೆ. ಇದನ್ನು ಭಾಷೆಗೆ ಕನೆಕ್ಟ್ ಮಾಡೋದು ಎಷ್ಟು ಸರಿ?. ಮರಾಠಿಗರೂ ಸಹ ರಾಜ್ಯದಲ್ಲಿ ಹುಟ್ಟಿ ವಾಸವಿರೋರು. ಎಲ್ಲವನ್ನೂ ವಿವಾದಕ್ಕೆ ಲಿಂಕ್ ಮಾಡೋದು ಸರಿಯಲ್ಲ. ತಿರುವಳ್ಳುವರ್ ಮತ್ತು ಸರ್ವಜ್ಞರ ಪ್ರತಿಮೆಗಳನ್ನು ನಿರ್ಮಿಸಿದರು. ದಶಕಗಳ ವಿವಾದವನ್ನು ಮುಖ್ಯಮಂತ್ರಿಗಳು ಸೌಹಾರ್ದಯುತವಾಗಿ ತಮಿಳುನಾಡಿನ ಜೊತೆ ಮಾತಾಡಿ ಬಗೆಹರಿಸಿದರು. ಈಗ ಕೆಲವು ತಪ್ಪು ಕಲ್ಪನೆ ಮೂಡಿದೆ, ಅದು ಸರಿಯಲ್ಲ. ಮರಾಠ ನಿಗಮವನ್ನು ಭಾಷಾಧಾರಿತವಾಗಿ ಮಾಡಿಲ್ಲ. ಮಾರಾಠಿಗರು ಕರ್ನಾಟಕದಲ್ಲಿ ಬಹಳ ವರ್ಷಗಳಿಂದ ವಾಸವಿದ್ದಾರೆ. ಎಲ್ಲರನ್ನೂ ಒಟ್ಟಿಗೇ ಕರೆದೊಯ್ಯುವ ಕೆಲಸವನ್ನು ಬಿಜೆಪಿ ಮಾಡ್ತಿದೆ. ಇದರಲ್ಲಿ ಯಾವುದೇ ತಪ್ಪು ಕಲ್ಪನೆಗಳು ಬೇಡ ಎಂದು ಸಮಜಾಯಿಸಿ ನೀಡಿದರು.
ಸಂಪುಟ ವಿಸ್ತರಣೆ ವಿಳಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಕುರಿತು ರಾಷ್ಟ್ರೀಯ ಅಧ್ಯಕ್ಷರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ವರಿಷ್ಠರು ಯಾವಾಗ ನಿರ್ಧಾರ ಮಾಡ್ತಾರೋ ನೋಡಬೇಕು. ವರಿಷ್ಠರ ನಿರ್ಧಾರ ಹೊರಬಿದ್ದಾಗ ಮುಖ್ಯಮಂತ್ರಿಗಳು ವಿಸ್ತರಣೆ ಮಾಡ್ತಾರೆ ಎಂದು ತಿಳಿಸಿದರು.