ಮಂತ್ರಾಲಯ ಶ್ರೀಗಳ ವಿರುದ್ಧ ದೂರು ದಾಖಲು, ಕಾರಣ ಗೊತ್ತಾ..?!

0
277

ಶ್ರೀಕ್ಷೇತ್ರ ಮಂತ್ರಾಲಯದ ಶ್ರೀಗಳ ವಿರುದ್ಧ ಭಕ್ತರೊಬ್ಬರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಅಚ್ಚರಿ ಎಂದರೆ ದೂರು ನೀಡಲು ಕಾರಣವೆಂದರೆ, ಮಂತ್ರಾಲಯದ ಮಹಾ ರಥೋತ್ಸವದ ವೇಳೆ ಭಕ್ತರ ಮೇಲೆ ಶ್ರೀಗಳು 100 ರೂಪಾಯಿ ನೋಟುಗಳನ್ನು ತೂರಿದ್ದರು ಎಂದು ಭಕ್ತರೊಬ್ಬರು ಶ್ರೀಗಳ ವಿರುದ್ದ ದೂರು ದಾಖಲಿಸಿದ್ದಾರೆ.

ಮಹಾರಥೋತ್ಸವದ ವೇಳೆ ಶ್ರೀಗಳು ನೋಟುಗಳನ್ನು ತೂರಿದಾಗ ಇದನ್ನು ಪಡೆಯಲು ನೂಕು ನುಗ್ಗಲು ಉಂಟಾಗಿತ್ತು. ಭಾರೀ ನೂಕುನುಗ್ಗಲು ಉಂಟಾಗಿ ಶಾಸಕ ಬಾಲ ನಾಗರೆಡ್ಡಿ ಮತ್ತು ಅವರ ಕುಟುಂಬದವರು ನೂಕುನುಗ್ಗಲಿನಲ್ಲಿ ಸಿಲುಕಿ ಪರದಾಡಿದರು. ಬಳಿಕ ಪೊಲೀಸರು ಶಾಸಕರನ್ನು ಮತ್ತು ಅವರ ಕುಟುಂಬದವರನ್ನು ರಕ್ಷಿಸಿದ್ದರು. ಹೀಗಾಗಿ ಭಾರಿ ಅವಘಡ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸುವಂತೆ ಮಂತ್ರಾಲಯ ಶ್ರೀಗಳ ವಿರುದ್ಧ ಭಕ್ತರೊಬ್ಬರು ದೂರು ನೀಡಿದ್ದು, ಇದೀಗ ಭಾರೀ ಸುದ್ದಿಯಾಗಿದೆ.

LEAVE A REPLY

Please enter your comment!
Please enter your name here