ರಸ್ಗುಲ್ಲಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.!ಸಿಹಿ ಪಾಕದ ತಿಂಡಿ ತಿನಿಸುಗಳಲ್ಲಿ ನಾವು ಇಷ್ಟಪಡುವ ಸ್ವೀಟ್ ಗುಂಡು ಗುಂಡಗಿರುವ ರಸಗುಲ್ಲ, ರಸಗುಲ್ಲ ಸ್ವೀಟ್’ಗಳಲ್ಲಿ ನಾವು ಬಿಳಿ ರಸ್ಗುಲ್ಲಾ ಸಾಮಾನ್ಯವಾಗಿ ನೋಡಿರುತ್ತೀವಿ.ಆದರೆ ಅದರ ಜೊತೆ ಇತ್ತೀಚೆಗೆ ಕಲರ್ ಕಲರ್, ರಸ್ಗುಲ್ಲಾ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.!
ರಸಗುಲ್ಲ ಬಗ್ಗೆ ನಾವು ಇಷ್ಟೆಲ್ಲಾ ಹೇಳುತ್ತಿದ್ದೀವಿ, ಆದರೆ ರಸಗುಲ್ಲ ತಿನ್ನುವುದಕ್ಕೆ ಇಲ್ಲಿ ಎರಡು ರಾಜ್ಯಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ ಎಂದೇ ಹೇಳಬಹುದು. ಹೌದು, ರಸ್ಗುಲ್ಲಾ ಬಂಗಾಳಿಯ ಸ್ವೀಟ್ ಎಂದು ಮುಂಚಿತವಾಗಿ ಕರೆಯಲ್ಪಡುವ ಸಿಹಿ ತಿಂಡಿ.! ಅದು ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವ ವಿಚಾರ.ಹಾಗಾಗಿ ಎಲ್ಲರ ತಲೆಯಲ್ಲೂ ಕುಳಿತಿದ್ದ ಪ್ರಶ್ನೆ.? ರಸಗುಲ್ಲ ಬಂಗಾಳಿಯರ ಸ್ವೀಟ್, ಬಂಗಾಳಿಗರ ಫೇಮಸ್ ಸಿಹಿ ತಿಂಡಿ ಎಂದು.! ಆದರೆ ಈ ವಿಚಾರ ಈಗ ತಲೆಕೆಳಗೆ ಮಾಡುವಂತಿದೆ. ಬಂಗಾಳಿಯರಿಗೆ ಒಡಿಶಾ ಸರ್ಕಾರ ಶಾಕ್ ನೀಡಿದೆ.ಹೌದು, ರಸಗುಲ್ಲಾ ಒಡಿಶಾ ಮೂಲದ ಸ್ವೀಟ್ ಇದು ಒಡಿಶಾದ ಫೇಮಸ್ ಎಂದು ಪ್ರಕಟ ಮಾಡಿದೆ.
ಪ್ರಾದೇಶಿಕ ಗುರುತಾದ ಜಿಯೋಗ್ರಾಫಿಕಲ್ ಟ್ಯಾಗ್(ಜಿಐ)ಪಡೆದುಕೊಳ್ಳುವ ಮೂಲಕ ಅಧಿಕೃತವಾಗಿ ರಸಗುಲ್ಲಾ ಒಡಿಶಾ ರಾಜ್ಯದ ಎಂಬುದನ್ನು ಜಿಐ ಆಫ್ ಗೂಡ್ಸ್ ಆ್ಯಕ್ಟ್’ನ ಅಡಿ ಸಾಬೀತು ಪಡಿಸಿಕೊಂಡಿದೆ. ಈ ಟ್ಯಾಗ್ ಒಡಿಶಾಗೆ ಸುಮಾರು ಮುಂದಿನ ಒಂಬತ್ತು ವರ್ಷಗಳ ಕಾಲ ಉಳಿದುಕೊಳ್ಳಲಿದೆ, ಅಂದರೆ ಫೆಬ್ರವರಿ ೨೨, ೨೦೩೮ ರವರೆಗೂ ಜಾರಿಯಲ್ಲಿರಲಿದೆ ಎನ್ನಲಾಗಿದೆ. ಈ ಹಿಂದೆ ವೆಸ್ಟ್ ಬೆಂಗಾಲ್ ಹಾಗೂ ಒಡಿಶಾ ರಾಜ್ಯಗಳ ಮಧ್ಯೆ ರಸಗುಲ್ಲಾ ಸ್ವೀಟ್’ಗಾಗಿ ಬಹಳ ವಾದ-ಪ್ರತಿವಾದಗಳು ನಡೆದಿದ್ದು, ಜೊತೆಗೆ ಜಿಐ ಟ್ಯಾಗ್ಗೋಸ್ಕರ ಕಾನೂನು ರೀತಿಯಲ್ಲಿ ಹೋರಾಟಗಳನ್ನು ನಡೆಸಿತ್ತು ಎನ್ನಲಾಗಿದೆ.