ಕಲರ್ಸ್ ಕನ್ನಡದ ಹೆಸರಾಂತ ಸೀರಿಯಲ್ ಗಳಿಗೆ ಬಿದ್ದಿದೆ ಬ್ರೇಕ್ !

0
161

ಧಾರಾವಾಹಿ, ಮನೆ ಮಂದಿಯೆಲ್ಲ ಕುಳಿತು ಕೊಂಡು ತಮ್ಮ ನೆಚ್ಚಿನ ಕಿರುತೆರೆ ನಟರ ಧಾರಾವಾಹಿಯನ್ನು ನೋಡಿಕೊಂಡು ಕಾಲವನ್ನು ಕಳೆಯುತ್ತಾರೆ .. ಹೆಣ್ಣು ಮಕ್ಕಳಿಗಂತೂ ಧಾರಾವಾಹಿ ಎಂದರೆ ಅಚ್ಚುಮೆಚ್ಚು.. ಗ್ರಾಮಗಳಲ್ಲಿ ಬೆಳ್ಳಿತೆರೆ ನೋಡುವವರಿಗಿಂತ ಕಿರುತೆರೆ ನೋಡುವವರೇ ಹೆಚ್ಚು ..

ಇತ್ತೀಚೆಗೆ ಬೇರೆ ಬೇರೆ ಚಾನೆಲ್ಗಳಲ್ಲಿ ಧಾರಾವಾಹಿಗಳ ಟ್ರೆಂಡ್ ಸೆಟ್ ಮಾಡುತ್ತಿವೆ.. ದಿನನಿತ್ಯದ ಯಾವುದೇ ಕೆಲಸ ಬಿಟ್ಟರೂ, ಕೆಲವು ಹೆಸರಾಂತ ಧಾರಾವಾಹಿಯನ್ನು ಮಿಸ್ ಮಾಡದೇ ನೋಡುತ್ತಾರೆ…

ಈ ಸಾಲಿಗೆ ಪ್ರೇಕ್ಷಕರಿಗೆ ರಸದೌತಣ ನೀಡಲು ಕಲರ್ಸ ವಾಹಿನಿಯದ್ದೆ ಮೇಲುಗೈ .
ಪುಟ್ಟಗೌರಿ ಮದುವೆ, ಅಗ್ನಿಸಾಕ್ಷಿ, ರಾಧಾ ರಮಣ, ಕುಲವಧು, ಕಿನ್ನರಿ, ಲಕ್ಷ್ಮೀ ಬಾರಮ್ಮ ಹೀಗೆ ವಿಭಿನ್ನವಾದ ಧಾರಾವಾಹಿಗಳನ್ನು ಕಲರ್ಸ್ ವಾಹಿನಿ ಕನ್ನಡ ಪ್ರೇಕ್ಷಕರಿಗೆ ಕೊಡುತ್ತಲೇ ಬಂದಿದೆ !

ಕನ್ನಡದ ಟಾಪ್ 5 ಧಾರಾವಾಹಿಗಳಲ್ಲಿ ಕಲರ್ಸ್ ವಾಹಿನಿಯ ಕಿನ್ನರಿ ಮತ್ತು ಕುಲವದು ಸಹ ಇದೆ.. ಅನೇಕ ವರ್ಷಗಳಿಂದ ಮನರಂಜನೆ ನೀಡುತ್ತಿರುವ ಕಿನ್ನರಿ ಮತ್ತು ಕುಲವಧು ಮುಗಿಯುವ ಹಂತ ತಲುಪಿದೆ!

ಸ್ವಲ್ಪ ತಿಂಗಳುಗಳ ಹಿಂದೆಯಷ್ಟೇ ಈ ಧಾರಾವಾಹಿಗಳು ತಮ್ಮ ಸಮಯವನ್ನು ಬದಲಾಯಿಸಿಕೊಂಡಿತು .. ಆದರೆ ಧಾರಾವಾಹಿಯನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ !

ಇಗಾಗಲೇ ಕುಲವಧು 1500, ಮತ್ತು ಕಿನ್ನರಿ 1100 ಸಂಚಿಕೆಗಳನ್ನು ಮುಗಿಸಿವೆ ..
ಇದೆ ಆಗಸ್ಟ್ 24ರಂದು ತನ್ನ ಕೊನೆಯ ಸಂಚಿಕೆಯನ್ನು ಪ್ರಸಾರ ಮಾಡುತ್ತ ತಮ್ಮ ಪ್ರಯಾಣವನ್ನು ಮುಗಿಸುತ್ತಿವೆ

LEAVE A REPLY

Please enter your comment!
Please enter your name here