ಇಂದು ನಡೆದ ನಿರ್ದೇಶಕರ ಸಭೆಯಲ್ಲಿ ‘ಕೆಫೆ ಕಾಫಿ ಡೇ’ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ! ಯಾರೇ ಹೇಳಿದರೂ ಕೂಡ ಸಂಸ್ಥೆ ಮುಚ್ಚುವ ಬಗ್ಗೆ ಯೋಚಿಸುವುದಿಲ್ಲ ಎಂದು ಕಾಫಿ ಡೇ ನಿರ್ದೇಶಕರು ತೀರ್ಮಾನಿಸಿದ್ದಾರೆ. ಕಾಫಿ ಡೇ ಸಂಸ್ಥೆಯನ್ನು ಹುಟ್ಟು ಹಾಕಿ ಅದನ್ನು ಶಿಖರದೆತ್ತರಕ್ಕೆ ಬೆಳೆಸಿದ ಸಿದ್ಧಾರ್ಥ್ ಅವರು ಇಂದು ಅನುಮಾನಾಸ್ಪದ ಸಾವನ್ನಪ್ಪಿದ ಕಾರಣ ಕೆಲವರು ಕಂಪನಿಯನ್ನು ಮುಚ್ಚುವುದರ ಬಗ್ಗೆ ಯೋಚಿಸಿ ಬೆಂಗಳೂರಿನ ಮಲ್ಯ ಆಸ್ಪತ್ರೆ ಸಮೀಪದಲ್ಲಿರುವ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಸಂಸ್ಥೆಯ ನಿರ್ದೇಶಕರಾದ ಬಾಗ್ಮನೆ,ಎಸ್.ಎನ್. ರಂಗನಾಥ್ ಅವರ ನೇತೃತ್ವದಲ್ಲಿ ಇಂದು ತುರ್ತು ಸಭೆ ನಡೆಸಲಾಯಿತು.
ಈಗಾಗಲೇ ಬ್ಯಾಂಕ್ ಗಳಲ್ಲಿ ಭಾರಿ ಮೊತ್ತದ ಸಾಲದ ಹೊರೆ ಹೊತ್ತಿದ್ದ, ಸಿದ್ಧಾರ್ಥ್ ಅವರಿಗೆ ಬ್ಯಾಂಕುಗಳು ಹಲವು ನೋಟಿಸ್ ಜಾರಿಗೊಳಿಸಿತ್ತು ಎನ್ನಲಾಗಿದೆ. ಇದರ ಮಧ್ಯೆಯೂ ಕೂಡ ಕಂಪನಿಯನ್ನು ನಡೆಸಬೇಕಾ.? ಎಂಬ ಹಲವರ ಪ್ರಶ್ನೆಗೆ ಉತ್ತರ ನೀಡಿದ ನಿರ್ದೇಶಕರು, ಎಂತಹ ಬಿಕ್ಕಟ್ಟಿನ ಪರಿಸ್ಥಿತಿ ಒದಗಿದರೂ ಕೂಡ ಸಂಸ್ಥೆಯನ್ನು ಮುಚ್ಚದೆ ಮುನ್ನಡೆಸಿಕೊಂಡು ಹೋಗುತ್ತಿವಿ ಎಂದು ಸಂಸ್ಥೆಯ ನಿರ್ದೇಶಕರು ಸಿದ್ಧಾರ್ಥ್ ಅವರ ಆಶಯದಂತೆ ಕಾಫಿ ಡೇ ಸಂಸ್ಥೆಯನ್ನು ಮುಚ್ಚುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ.