ನಡು ರಸ್ತೆಯಲ್ಲೇ ಮೊಟ್ಟೆ ಇಟ್ಟ ನಾಗರಹಾವು..! ವಿಡಿಯೋ ವೈರಲ್

0
512

ರಸ್ತೆ ಮಧ್ಯೆಯೇ ನಾಗರಹಾವೊಂದು 14 ಮೊಟ್ಟೆ ಇಟ್ಟ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಶಿಕ್ಷಕರ ಬಡಾವಣೆಯಲ್ಲಿರುವ ರವಿ ಎಂಬುವರ ಮನೆಯ ಬಳಿ ನಾಗರ ಹಾವು ಕಾಣಿಸಿಕೊಂಡಿತ್ತು. ಈ ವೇಳೆ ಮಂಡ್ಯದ ಉರಗತಜ್ಞ ಪ್ರಸನ್ನಕುಮಾರ್ ಗೆ ಮಾಹಿತಿ ನೀಡಲಾಗಿತ್ತು. ಈ ವೇಳೆ ರವಿ ಮನೆಗೆ ಬಂದ ಉರಗ ತಜ್ಞ ಪ್ರಸನ್ನ ಕುಮಾರ್ ಹಾವನ್ನಿಡಿಯುವಲ್ಲಿ ಯಶಸ್ವಿಯಾದ್ರು. ಇದೇ ವೇಳೆ ಹಾವು ಒಂದೊಂದಾಗಿಯೇ ಮೊಟ್ಟೆಯಿಡಲು ಶುರು ಮಾಡಿದೆ.

ಒಟ್ಟು 14 ಮೊಟ್ಟೆ ಇಟ್ಟ ನಾಗರಹಾವನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಇನ್ನು ಮೊಟ್ಟೆಯನ್ನು ಕೂಡ ಪ್ರಸನ್ನ ಕುಮಾರ್ ರಕ್ಷಣೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here