ಮುಖ್ಯಮಂತ್ರಿ ಪತ್ನಿಗೆ ಬರೋಬ್ಬರಿ 23 ಲಕ್ಷ ರೂಪಾಯಿ ಟೋಪಿ ಹಾಕಿದ ಕಳ್ಳ .!!

0
116

ಆನ್ ಲೈನ್ ಶಾಪಿಂಗ್, ಆನ್ಲೈನ್ ವ್ಯವಹಾರ ಹೆಚ್ಚುತ್ತಿರುವ ನಡುವೆಯೇ ಆನ್ ಲೈನ್ ವಂಚನೆ ಪ್ರಕರಣ ಕೂಡಾ ಅಧಿಕವಾಗತೊಡಗಿದ್ದು, ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪತ್ನಿ, ಸಂಸದೆ ಪ್ರಣೀತ್ ಕೌರ್ ಸೈಬರ್ ವಂಚನೆಗೆ ಒಳಗಾಗಿದ್ದು, ಬರೋಬ್ಬರಿ 23 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಲೋಕಸಭೆ ಕಲಾಪದಲ್ಲಿ ಭಾಗವಹಿಸಲು ಕೌರ್ ಆಗಮಿಸಿದ್ದ ವೇಳೆ ಮೊಬೈಲ್ ಕರೆಯೊಂದು ಬಂದಿತ್ತು. ನಾನು ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಮಾತನಾಡುತ್ತಿದ್ದೇನೆ..ನಿಮ್ಮ ಬ್ಯಾಂಕ್ ಖಾತೆ ವಿವರ ಕೊಡಿ, ಸಂಬಳ ಡೆಪಾಸಿಟ್ ಮಾಡಬೇಕಾಗಿದೆ ಎಂದು ಹೇಳಿದ್ದ!

ಸಂಸದೆ ಕೌರ್ ಅವರ ಬ್ಯಾಂಕ್ ಖಾತೆ ವಿವರ, ಎಟಿಎಂ ಪಿನ್, ಸಿವಿಸಿ ನಂಬರ್ ಜೊತೆಗೆ ಒಟಿಪಿ(ಒನ್ ಟೈಮ್ ಪಾಸ್ ವರ್ಡ್) ಇದರ ಪರಿಣಾಮ ಕೌರ್ ಖಾತೆಯಲ್ಲಿದ್ದ 23 ಲಕ್ಷ ಹಣ ಡ್ರಾ ಮಾಡಿಬಿಟ್ಟಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದರು. ಜಾರ್ಖಂಡ್ ನ ರಾಂಚಿಯಿಂದ ದೂರವಾಣಿ ಕರೆ ಮಾಡಿದ್ದ ಆರೋಪಿ ಈಗ ಪೊಲೀಸರ ಬಂಧನದಲ್ಲಿರುವುದಾಗಿ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here