ಸಾರಿಗೆ ಸಿಬ್ಬಂದಿಯ 3 ತಿಂಗಳ ಸಂಬಳ ಬಿಡುಗಡೆಗೆ ಸಿಎಂ ಗ್ರೀನ್ ಸಿಗ್ನಲ್

0
59

ಬೆಂಗಳೂರು: ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಅಕ್ಟೋಬರ್, ನವಂಬರ್ ಹಾಗೂ ಡಿಸೇಂಬರ್ ಈ 3 ತಿಂಗಳುಗಳ ಸಂಬಳದ ಒಟ್ಟು ಮೊತ್ತವಾದ 634 ಕೋಟಿ 50 ಲಕ್ಷ ರೂ. ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಸಂತದ ಹಂಚಿಕೊಂಡಿರುವ ಡಿಸಿಎಂ, ಸಾರಿಗೆ ಸಚಿವ ಸವದಿ, ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ 3 ತಿಂಗಳುಗಳ ವೇತನಗಳ ಮೊತ್ತ 634 ಕೋಟಿ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದೆ. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ಅಕ್ಟೋಬರ್, ನವಂಬರ್ ಹಾಗೂ ಡಿಸೇಂಬರ್ ಈ 3 ತಿಂಗಳುಗಳ ಸಂಬಳದ ಒಟ್ಟು ಮೊತ್ತವಾದ 634 ಕೋಟಿ 50 ಲಕ್ಷ ರೂ. ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು ತಿಳಿಸಿದ್ದಾರೆ.

ಇದರಿಂದಾಗಿ ಸಾರಿಗೆ ಸಿಬ್ಬಂದಿಗಳ ಒಟ್ಟು ಮೂರು ತಿಂಗಳುಗಳ ಶೇಕಡ 75 ರಷ್ಟು ವೇತನದ ಮೊತ್ತ 634.50 ರೂಪಾಯಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಕ್ರಮ ಕೈಗೊಂಡಂತಾಗಿದೆ. ಉಳಿದ ಶೇಕಡ 25 ರಷ್ಟು ವೇತನಗಳನ್ನು ಸಾರಿಗೆ ಸಂಸ್ಥೆಗಳೇ ತಮ್ಮ ಸಂಪನ್ಮೂಲಗಳಿಂದ ಭರಿಸಲಿವೆ. ಇದರಿಂದಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳ ಸುಮಾರು 1,30,000 ಸಿಬ್ಬಂದಿಗಳಿಗೆ ವೇತನ ಪಾವತಿಗೆ ಸಾಧ್ಯವಾದಂತಾಗಿದೆ ಎಂದು‌ ತಿಳಿಸಿದರು.

ಕೋವಿಡ್ ನಂತರದಲ್ಲೂ ಸಾರಿಗೆ ಸಂಸ್ಥೆಗಳ ಆದಾಯ ಶೇಕಡ 30 ರಷ್ಟನ್ನು ಮೀರದಿರುವುದರಿಂದ ಸಾರಿಗೆ ಸಂಸ್ಥೆಗಳ ಸಂಪನ್ಮೂಲಕ್ಕೆ ತೀವ್ರನಷ್ಟ ಉಂಟಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲೂ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ನೌಕರರಿಗೆ ಸಾರಿಗೆ ಇಲಾಖೆ ಸಂಬಳ ಪಾವತಿಸಿಲ್ಲ. ಕಳೆದ ಮೂರು ತಿಂಗಳಿಂದಲೂ ವೇತನವಿಲ್ಲದೇ ಸಾರಿಗೆ ನೌಕರರು ಪರದಾಡುತ್ತಿದ್ದರು.

ಸಾರಿಗೆ‌ ಸಚಿವ ಲಕ್ಷ್ಮಣ್ ಸವದಿ ತಮ್ಮ‌ ಜಿಲ್ಲೆಯ ಪಾಲಿಟಿಕ್ಸ್ ನಲ್ಲಿ ಬ್ಯುಸಿ ಇದ್ದಾರೆ‌. ಹಬ್ಬ ಇರುವುದು ಗೊತ್ತಿದ್ದು, ಮುಂಚೆ ಅಧಿಕಾರಿಗಳು ಮುತುವರ್ಜಿ ವಹಿಸಿದ್ದರೆ ಸಾರಿಗೆ ಸಿಬ್ಬಂದಿಗೆ ವೇತನ ಕೊಡಿಸಬಹುದಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಹಬ್ಬ ಇದ್ರೂ ಇನ್ನೂ ಸಂಬಳದ ಭಾಗ್ಯ ಕರುಣಿಸದ ಸಾರಿಗೆ ನಿಗಮಗಳ ನಿರ್ಲಕ್ಷ್ಯದ ಬಗ್ಗೆ ಸಿಬ್ಬಂದಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಮಕ್ಕಳ ಜ್ಞಾಪಕ ಶಕ್ತಿ, ಏಕಾಗ್ರತೆ, ಚುರುಕುತನ ಮತ್ತು ಕೌಶಲ್ಯ ಅಭಿವೃದ್ಧಿ ವೃದ್ಧಿಸಲು ಆಯುರ್ವೇದದ ಉತ್ಪನ್ನವಾದ ‘ಬ್ರಹ್ಮ ಶಂಕರ ‘ ಪರಿಹಾರ ಒದಗಿಸುತ್ತದೆ . ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ನುರಿತ ಮತ್ತು ಅನುಭವಿ ಆಯುರ್ವೇದದ ತಜ್ಞ ವೈದ್ಯರ ಸಹಾಯದಿಂದ ನಿರಂತರ ಸಂಶೋಧನೆಗೆ ಪ್ರೋತ್ಸಾಹ ನೀಡಿದ ಪರಿಣಾಮವಾಗಿ ನೈಸರ್ಗಿಕವಾಗಿ ಬ್ರಹ್ಮ ಶಂಕರ ರೂಪುಗೊಂಡಿದೆ.

ಬ್ರಹ್ಮ ಶಂಕರದಲ್ಲಿ ಪ್ರಧಾನವಾಗಿ ಬ್ರಾಹ್ಮೀ ಎಲೆ, ಮಂಡೂಕ ಪರಿಣಿ,ಶಂಖ ಪುಷ್ಟಿ, ಅಶ್ವಗಂಧ,ಮಾಲ್ಕಂಗನಿ,ಜಟಮಾನಸಿ,ತಗರ್ ಅಥವಾ ಸುಗಂಧ ಬಾಲಾ, ಅಮೃತ ಬಳ್ಳಿ,ಸಂಜೆ,ವೀಟ್ ಜರ್ಮ್ ಅಥವಾ ಗೋಧಿ ಭ್ರೂಣವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಸಂಪೂರ್ಣ ನೈಸರ್ಗಿಕವಾಗಿ ಬ್ರಹ್ಮಶಂಕರದಲ್ಲಿ ಸೇರಿಸಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ.ಬ್ರಾಹ್ಮೀ ಎಂದರೆ ಸರಸ್ವತಿ . ಮಕ್ಕಳು ಬ್ರಾಹ್ಮೀ ಮುಹೂರ್ತದಲ್ಲಿ ಓದಿದರೆ ಮರೆಯುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.ಮಕ್ಕಳ ದೇಹ ಬಹಳ ಸೂಕ್ಷ್ಮವಾಗಿದ್ದು ಬಹುಬೇಗ ಜ್ವರ,ಕೆಮ್ಮು,ಸೋಂಕುಗಳಿಗೆ ತುತ್ತಾಗುತ್ತಾರೆ.ಬ್ರಹ್ಮಶಂಕರ ನಿಮ್ಮ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅವರನ್ನು ಸಧೃಡ ರನ್ನಾಗಿ ಮಾಡುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು.

ಒಂದು ಆರೋಗ್ಯವಂತ, ಜ್ಞಾನವಂತ , ಬುದ್ಧಿವಂತ ಸಮಾಜಕ್ಕಾಗಿ ‘ಬ್ರಹ್ಮ ಶಂಕರ ‘ ನಿಮ್ಮ ಮಕ್ಕಳಿಗೆ ಅತ್ಯವಶ್ಯಕವಾಗಿದೆ

BUY NOW

LEAVE A REPLY

Please enter your comment!
Please enter your name here