ಕುಮಾರಣ್ಣ ಮತ್ತೊಮ್ಮೆ ಸಿಎಂ ಆಗ್ತಾರೆ: ನಿಖಿಲ್‍ ಕುಮಾರಸ್ವಾಮಿ

0
316

ರಾಮನಗರದಲ್ಲಿ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ನಟ ದರ್ಶನ್‍ ಮತ್ತು ಯಶ್‍ ನಟಿಸಿದ ಚಿತ್ರಗಳನ್ನು ನಿಷೇಧ ಮಾಡಿದ್ದರ ಕುರಿತು ಮಾತನಾಡಿ, ಕುಮಾರಸ್ವಾಮಿ ಅವರು ರಾಜಕೀಯ ಕ್ಷೇತ್ರಕ್ಕೆ ಬರುವ ಮುನ್ನಾ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು.

ಮೈಸೂರಿನಲ್ಲಿ ಒಂದು ಕಚೇರಿಯನ್ನು ಹೊಂದಿದ್ದರು. ಸುಮಾರು 200-300 ಸಿನಿಮಾಗಳನ್ನು ವಿತರಣೆ ಮಾಡಿದ ಅನುಭವ ಅವರಿಗಿದೆ. ಆದರೆ ಅವರು ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದರ್ಶನ್‍ ಮತ್ತು ಯಶ್‍ ನಟಿಸಿದ ಚಿತ್ರಗಳ ಹಾಡನ್ನು ಹಾಡಬೇಡಿ ಎಂದು ಎಂದಿಗೂ ಹೇಳಿಲ್ಲ. ಅದಕ್ಕೂ ಅವರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಕನ್ನಡ ಚಿತ್ರರಂಗಕ್ಕೆ ಕುಮಾರಸ್ವಾಮಿ ಅವರ ಕೊಡುಗೆಯೂ ಇದೆ ಎಂಬುದನ್ನು ಯಾರೂ ಮರೆಯಬಾರದು ಎಂದಿದ್ದಾರೆ.

ರೆಬೆಲ್ ಸ್ಟಾರ್‍ ಅಂಬರೀಶ್‍ ಅವರು ಬಹಳ ಹಿರಿಯ ಹಾಗೂ ಅನುಭವೀ ನಟರು. ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ನಾನೊಬ್ಬನೇ ಅಲ್ಲ ಚಿತ್ರರಂಗದ ಬಹುತೇಕ ಜನರು ಅವರಿಗೆ ಸಾಕಷ್ಟು ವಿಚಾರಗಳನ್ನು ಕಲಿತಿದ್ದಾರೆ. ಮತ್ತಷ್ಟು ದಿನಗಳು ಅವರು ಜೀವಂತವಾಗಿ ಇರಬೇಕಿತ್ತು ಎಂಬುದು ನಮ್ಮೆಲ್ಲರ ಆಶಯವಾಗಿತ್ತು ಎಂದಿದ್ದಾರೆ.
ಅನಿರೀಕ್ಷಿತವಾಗಿ ಚಿತ್ರವನ್ನು ನೋಡಲು ಒಂದು ಅವಕಾಶ ಸಿಕ್ಕಿತು. ಮುನಿರತ್ನಂ, ನಾಗಣ್ಣ ಮತ್ತು ತಂಡದವರು ಬಂದು ಕುರುಕ್ಷೇತ್ರ ಚಿತ್ರದಲ್ಲಿ ನಟನೆ ಮಾಡುವಂತೆ ಒಂದು ಅವಕಾಶ ನೀಡಿದರು. ಇದಕ್ಕೆ ನಮ್ಮ ತಂದೆಯವರು ಪ್ರೋತ್ಸಾಹ ನೀಡಿದರು. ಹಾಗಾಗಿ ಆ ಚಿತ್ರದಲ್ಲಿ ನಾನು ಬಣ್ಣ ಹಚ್ಚಿದೆ. ಅಷ್ಟನ್ನು ಬಿಟ್ಟು ಬೇರೇನೂ ವಿಶೇಷತೆ ಇಲ್ಲ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ, ಕಳೆದ 14 ವರ್ಷಗಳಿಂದ ಕುಮಾರಣ್ಣ ಅವರು ಭ್ರಷ್ಟಾಚಾರರಹಿತ ಆಡಳಿತವನ್ನು ನೀಡಿದರು. ಕೇವಲ 37 ಎಂಎಲ್‍ಎಗಳನ್ನು ಇಟ್ಟುಕೊಂಡು ಸರ್ಕಾರ ರಚನೆ ಮಾಡಿದ್ದು ನಿಜಕ್ಕೂ ಸಾಹಸದ ಕೆಲಸವೇ ಆಗಿತ್ತು. ಅದಕ್ಕೆ ಜನರ ಬೆಂಬಲ ಮತ್ತು ಆಶೀರ್ವಾದವೂ ಇತ್ತು. 14 ತಿಂಗಳ ಆಡಳಿತದಲ್ಲಿ ಅವರು ಸಾಕಷ್ಟು ಸಾಧನೆಗಳನ್ನು ಮಾಡಿದರು. ಆದರೆ ಅದಾವುದೂ ಹೊರಗೆ ಬರಲಿಲ್ಲ. ಆದರೆ ನಾನೊಬ್ಬ ಜೆಡಿಎಸ್‍ ನ ಕಾರ್ಯಕರ್ತನಾಗಿ ಮುಂದಿನ ದಿನಗಳಲ್ಲಿ ಅವರ ಸಾಧನೆಯನ್ನು ಮುಂದೆ ಇಟ್ಟುಕೊಂಡು ಜನರ ಮುಂದೆ ಹೋಗುತ್ತೇನೆ ಮತ್ತು ಸಶಕ್ತವಾಗಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ ಎಂದರು.

ರಾಜಕಾರಣ ಎಂಬುದು ಒಂದು ಜವಾಬ್ದಾರಿ. ಸಿನಿಮಾ ಎಂಬುದು ನನ್ನ ಕನಸು. ಹಾಗಾಗಿ ಎರಡೂ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ ಎಂದು ಹೇಳುವ ಮೂಲಕ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲೂ ಮುಂದುವರೆಯುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here