ಚರ್ಚ್‍ಗೆ ಬರುತ್ತಿದ್ದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿ ಫಾದರ್ ಪರಾರಿ..!

0
261

ಧಾರ್ಮಿಕ ಕೇಂದ್ರಗಳಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿದ್ದು ಇದೀಗ ವಿವಾದದ ಸುಳಿಗೆ ಸಿಲುಕಿ ಪರಾರಿಯಾಗಿದ್ದಾನೆ ಚರ್ಚ್ ಒಂದರ ಫಾದರ್. ಹೌದು, ಚರ್ಚ್‍ಗೆ ಬರುತ್ತಿದ್ದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ ಫಾದರ್ ಆ ಮಹಿಳೆಗೆ ಕೈಕೊಟ್ಟು ಪರಾರಿಯಾದ ಆರೋಪ ಕೇಳಿಬಂದಿದೆ.

ಶಿವಮೊಗ್ಗದ ರಾಗಿಗುಡ್ಡ ಬಡಾವಣೆಯಲ್ಲಿರುವ ಚರ್ಚ್ ಒಂದರ ಫಾದರ್ ಮಹಿಳೆಗೆ ಮೋಸ ಮಾಡಿ ವಿದೇಶಕ್ಕೆ ಹೋಗಿರುವ ಆರೋಪ ಮಾಡಲಾಗಿದೆ. ಚರ್ಚ್ ಗೆ ಬರುತ್ತಿದ್ದ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ ಫಾದರ್ ಆಕೆಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೇ ನೆಲೆಸುತ್ತೇವೆ ಎಂದು ನಂಬಿಸಿದ್ದಾನೆ. ನಂತರ ದೈಹಿಕವಾಗಿ ಬಳಸಿಕೊಂಡು ಇದೀಗ ಪರಾರಿಯಾಗಿದ್ದಾರೆ. ಇದರಿಂದ ಮನನೊಂದು ಮಹಿಳೆಯ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here