ರೆಟ್ರೋ ಲುಕ್ ನಲ್ಲಿ ಚಾಕ್ಲೇಟ್ ಬಾಯ್ ‘ಚಂದನ್’!

0
170

ಚಂದನ್ ಕಿರುತೆರೆ ದಾರವಾಹಿಯಲ್ಲಿ ಸಾಕಷ್ಟು ಹೆಸರು ಮಾಡಿದ ನಟ, ರಾಧಾ ಕಲ್ಯಾಣ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಪಾದಾರ್ಪಣೆ ಮಾಡಿದ ಚಂದನ,2012 ರಲ್ಲಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ, ಚಂದು ಎಂಬ ಪಾತ್ರವನ್ನು ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು..ಈ ಸಮಯದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಚಂದನ್ ರವರು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದರು.. ಹಾಗೂ ಕಿರುತೆರೆ ಧಾರಾವಾಹಿಯಲ್ಲಿ ಅಭಿನಯ ಮಾಡುವುದು ನಿಲ್ಲಿಸಿ, ಬೆಳ್ಳಿ ತೆರೆಗೆ ಬನ್ನಿ ಎಂದು ಸಾಕಷ್ಟು ಪ್ರಾಜೆಕ್ಟ್ ಗಳು ಅವರ ಕೈ ಸೇರುತ್ತಿದ್ದವು.

ನಂತರ 2014 ರಲ್ಲಿ ಪರಿಣಾಮ ಎಂಬುವ ಚಿತ್ರದ ಮುಖಾಂತರ ಬೆಳ್ಳಿತೆರೆಗೆ ಕಾಲಿಟ್ಟರು.ಮತ್ತು

ಇಂದ್ರಜಿತ್ ಲಂಕೇಶ್ ನಿರ್ದೇಶನದ ಮಲ್ಟಿ-ಸ್ಟಾರ್ ಚಿತ್ರ ಲವ್ ಯು ಅಲಿಯಾ (2015) ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.ಎರಡೊಂದ್ಲಾ ಮೂರು’ ‘ಪ್ರೇಮ ಬರಹ’, ಸಿನಿಮಾಗಳಲ್ಲೂ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಈಗ ಚಂದನ್ ಅವರು ಬೆಳ್ಳಿತೆರೆಯನ್ನು ಬಿಟ್ಟು ಮತ್ತೆ ಕಿರುತೆರೆಗೆ ಹಿಂತಿರುಗಿದ್ದಾರೆ.. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ’ ಸರ್ವಮಂಗಳ ಮಾಂಗಲ್ಯೆ’ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಮುಖಾಂತರ ರೀ ಎಂಟ್ರಿ ತೆಗೆದುಕೊಂಡಿದ್ದಾರೆ ..

ಈಗ ಚಂದನ್ ಕುಮಾರ್ ಅವರು ಬ್ಲಾಕ್ ಅಂಡ್ ವೈಟ್ ರೆಟ್ರೋ ಸ್ಟೈಲಿನಲ್ಲಿ ಫೋಟೊಗಳನ್ನು ತೆಗೆಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಲು ಬಿಟ್ಟಿದ್ದಾರೆ.. ಇವುಗಳು ಇಗ ಸಕ್ಕತ್ ವೈರಲ್ ಆಗಿವೆ !

ರೆಟ್ರೋ ಸ್ಟೈಲ್ ನಲ್ಲಿ ಸಖತ್ ಆಗಿ ಮಿಂಚಿದ್ದು ಕಟ್ಟು ಮಸ್ತಾದ ದೇಹ ಹಾಗೂ ಕ್ಯೂಟ್ ಎಕ್ಸ್ ಪ್ರೆಶನ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಡಿಫರೆಂಟ್ ಪೋಸ್ ಕೊಟ್ಟಿದ್ದು, ಮಾಧುರಿ ಇಟಗಿ ಫೊಟೋಗ್ರಾಫಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here