ಚಿರಂಜೀವಿ ಸರ್ಜಾನಿಗೆ ಭಾವನಾತ್ಮಕ ಶುಭಾಶಯಗಳ ಸುರಿಮಳೆ

0
136

ಬೆಂಗಳೂರು: ಚಿರಂಜೀವಿ ಸರ್ಜಾ ಇನ್ನಿಲ್ಲ.. ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ಹೊರಟುಬಿಟ್ಟಿದ್ದಾನೆ ಎಂದ ತಕ್ಷಣ ಆ ಕುಟುಂಬದವರಿಗೆ ಆದ ಆ ಸಂಕಟ ಯಾರಿಗೂ ಬೇಡ.. ಎಂಥಾ ಸಮಯದಲ್ಲಿ ಇಹ ಲೋಕ ತ್ಯಜಿಸಿಬಿಟ್ಟ ಚಿರು ಎಂಬ ಬೇಸರ ಛಾಯೆ ಎಲ್ಲೆಲ್ಲೂ.. ಇಂದು ಸ್ಯಾಂಡಲ್ ವುಡ್ ನಟ ದಿವಂಗತ ಚಿರಂಜೀವಿ ಸರ್ಜಾ ಗೆ 36ನೇ ವರ್ಷದ ಹುಟ್ಟಿದ ದಿನ.. ಹೀಗಾಗಿ ಚಿರು ಕುಟುಂಬಸ್ಥರು ಬಹಳ ಭಾವನಾತ್ಮಕವಾಗಿಯೇ ಹುಟ್ಟಿದ ದಿನವನ್ನು ಆಚರಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿ ಪತ್ನಿ ಮೇಘನಾ ರಾಜ್ ಪತಿ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಖಂಡಿತವಾಗಿ ಚಿರು ಮತ್ತೆ ಮಗುವಿನ ರೂಪದಲ್ಲಿ ಜನ್ಮ ತಾಳುತ್ತಾರೆ ಎಂದರು.

ದಿವಂಗತ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ ದಿನದಂದೇ ಸಹೋದರ ಧ್ರುವ ಸರ್ಜಾ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿರೋ ಗಣಪತಿ ದೇವಸ್ಥಾನದಲ್ಲಿ ನೆರೆವೇರಿಸಿದ್ದಾರೆ.

“ವಿಧಿಯ ಕ್ರೌರ್ಯವನ್ನು ನಾನು ನಂಬಿರಲಿಲ್ಲ”

ಚಿರು ಬಗ್ಗೆ ತಮ್ಮ ಇನ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ನಟ ಅರ್ಜುನ್ ಸರ್ಜಾ, 36 ವರ್ಷಗಳ ಹಿಂದೆ ನೀನು ಹುಟ್ಟಿದಾಗ ಸಂತಸದಿಂದ ಕುಣಿದು ಕುಪ್ಪಳಿಸಿದ್ದೆ. ವಿಧಿಯ ಕ್ರೌರ್ಯವನ್ನು ನಾನು ನಂಬಿರಲಿಲ್ಲ. ನಿನ್ನ ಹುಟ್ಟುಹಬ್ಬದಂದು ಈ ರೀತಿಯ ಪದಗಳನ್ನು ಬರೆಯುತ್ತೇನೆಂದು ನನ್ನ ಹುಚ್ಚು ಕನಸುಗಳಲ್ಲಿಯೂ ಯೋಚಿಸಿರಲಿಲ್ಲ. ನನ್ನ ಸಂದೇಶದಲ್ಲಿ ಯಾವಾಗಲೂ ನೀನು ಜೊತೆಗಿರುತ್ತೀಯ ಮಗನೆ. ಲವ್ ಯು ಸೋ ಮಚ್ ಮೈ ಬೇಬಿ ಎಂದು ಬೇಸರ ವ್ಯಕ್ತಪಡಿಸಿ ಶುಭ ಕೋರಿದ್ದಾರೆ.

 

View this post on Instagram

 

@shalinismakeupprofile @makeover_by_raghu_nagaraj_n @classycaptures_official

A post shared by Meghana Raj Sarja (@megsraj) on

ನಟ ದರ್ಶನ್ ಚಿರು ಜೊತೆ ನಾಯಿ ಹಿಡಿದು ನಿಂತಿರುವ ಫೋಟೋ ಹಾಕಿ ಶುಭ ಕೋರಿದ್ದಾರೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಚಿರು ಎಂದು ತಿಳಿಸಿದ್ದಾರೆ.

ಕಿಚ್ಚ ಸುದೀಪ್ ಟ್ವೀಟ್ ಮಾಡಿ, ಅವನನ್ನು ಕಳೆದುಕೊಂಡ, ಅವನನ್ನು ತಿಳಿದಿದ್ದ ಹಾಗೂ ಪ್ರೀತಿಸಿದ್ದ ಎಲ್ಲರಿಂದಲೂ ಅವನು ತಪ್ಪಿಸಿಕೊಂಡಂತಾಗಿದೆ. ಯಾವಾಗಲೂ ನಗುವುದು ಹಾಗೂ ವಿಷಯಗಳನ್ನು ಬಂದ ರೀತಿಯಲ್ಲೇ ತೆಗೆದುಕೊಳ್ಳುವುದನ್ನು ಅವನಲ್ಲಿ ನೋಡಿದೆ. ಅವನು ಶಾಂತಿ ಹಾಗೂ ಸ್ವರ್ಗದಲ್ಲಿ ಸ್ಥಾನ ಪಡೆದಿದ್ದಾನೆ ಎಂಬುದು ನನಗೆ ಖಾತ್ರಿ ಇದೆ. ಲವ್ ಯು ಮೈ ಬ್ರದರ್ ಚಿರು, ಚೀಯರ್ಸ್ ಆನ್ ಯುವರ್ ಬರ್ಥ್ ಡೇ ಎಂದು ಬರೆದು ಹಾರ್ಟ್ ಸಿಂಬಾಲ್ ಹಾಕಿ ವಿಶ್ ಮಾಡಿದ್ದಾರೆ

LEAVE A REPLY

Please enter your comment!
Please enter your name here