ಕುರುಕ್ಷೇತ್ರ ಸಿನಿಮಾ ನೋಡಲು ಬಂತು ಮಕ್ಕಳ ಸೈನ್ಯ!

0
162

ಸದ್ಯ ಈಗ ಎಲ್ಲೆಡೆ ‘ಮುನಿರತ್ನ ಕುರುಕ್ಷೇತ್ರ’ದೇ ಹವಾ! ಸದ್ಯ ಕುರುಕ್ಷೇತ್ರ ಸಿನಿಮಾ ದಿನದಿಂದ ದಿನಕ್ಕೆ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಲೆ ಇದೆ.ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ,ಹಿಂದಿ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಿದ್ದು ,ಎಲ್ಲ ಚಿತ್ರರಂಗದವರು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ !

ಮಹಾಭಾರತದ ಕಥೆಯನ್ನ, ಸಿನಿಮಾ ಮೂಲಕ ತೆರೆಯಮೇಲೆ ತಂದು, ಇಂದಿನ ಯುವ ಪೀಳಿಗೆಯ ಮುಂದಿಟ್ಟಿರುವ ಮುನಿರತ್ನರವರಿಗೆ ಪ್ರೇಕ್ಷಕರು ತಲೆಬಾಗಿದ್ದಾರೆ. ಎಲ್ಲಾ ವರ್ಗದ ಜನರಿಗೆ ಈ ಸಿನಿಮಾ ಇಷ್ಟವಾಗುತ್ತಿದೆ.. ಎಲ್ಲಾ ವರ್ಗದವರು ಅಂದರೆ ಮಕ್ಕಳು ಸಹ ಸೇರುತ್ತಾರೆ.! ಇತ್ತೀಚಿನ ದಿನಗಳಲ್ಲಿ ಪೌರಾಣಿಕ ಸಿನಿಮಾಗಳನ್ನು ಮಾಡುವುದು ಅಪರೂಪ.. ವಿಶೇಷವಾಗಿ ಬಂದ ಈ ಸಿನಿಮಾವನ್ನು ಮಕ್ಕಳಿಗೆ ತೋರಿಸಲಾಗುತ್ತಿದೆ.

ಕತೆಯನ್ನು ಮಾತ್ರ ಕೇಳುತ್ತಿದ್ದ ಮಕ್ಕಳು ಈಗ ತರೆಯ ಮೇಲೆ ನೋಡುತ್ತಿದ್ದಾರೆ..ಈ ಹಿಂದೆ ದರ್ಶನ್ ಅವರ ಸಂಗೊಳ್ಳಿ ರಾಯಣ್ಣ ಸಿನಿಮಾ ಬಿಡುಗಡೆಯಾದಾಗಲೂ ಶಾಲಾ ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಲಾಗಿತ್ತು!

ಇನ್ನು ಈಗ ಬಳ್ಳಾರಿಯಲ್ಲಿ ದುರ್ಯೋಧನ ದರ್ಶನ್ ಅವರನ್ನು ನೋಡಲು ಮಕ್ಕಳ ಸೈನ್ಯವೇ ಹರಿದು ಬಂದಿದೆ ..
ಇನ್ನು ಮೊನ್ನೆ ಮೊನ್ನೆಯಷ್ಟೇ ಮುನಿರತ್ನ ಅವರು ಸಿಎಂ ಯಡಿಯೂರಪ್ಪರವರ ಬಳಿ ಮಕ್ಕಳಿಗೆ ಸಿನಿಮಾ ತೋರಿಸುವುದಕ್ಕಾಗಿ ಟ್ಯಾಕ್ಸ್ ಫ್ರೀ ಮಾಡಿಕೊಡಿ ಎಂದು ಕೇಳಿಕೊಂಡಿದ್ದರು … ಆದರೆ ಇದಕ್ಕೂ ಮುನ್ನವೇ ಮಕ್ಕಳಿಗೆ ಈ ಸಿನಿಮಾವನ್ನು ತೋರಿಸಲಾಗುತ್ತಿದೆ ..

ಒಟ್ಟಾರೆ ಇದು ಕುರುಕ್ಷೇತ್ರ ಸಿನಿಮಾದ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹಾಗೂ ಮಹಾಭಾರತದ ಕಥೆಯನ್ನು ತೆರೆಯ ಮೇಲೆ ಮಕ್ಕಳುಗಳು ನೋಡಿ ಬಹಳ ಖುಷಿ ಪಡುತ್ತಿದ್ದಾರೆ !

LEAVE A REPLY

Please enter your comment!
Please enter your name here