ಗಗನಕ್ಕೇರುತ್ತಿರುವ ಚಿಕನ್ ಬೆಲೆ.?

0
163

ಚಿಕನ್ ಪ್ರಿಯರು ನೀವಾಗಿದ್ದರೆ ಶೀಘ್ರವೇ ನಿಮ್ಮ ಕೈ ಸುಡಲಿದೆ . ಚಿಕನ್ ಬೆಲೆ ಶೀಘ್ರವೇ ಹೆಚ್ಚಾಗುವ ಸಾಧ್ಯತೆಯಿದೆ . ಮೆಕ್ಕೆ ಜೋಳದ ಬೆಲೆ ಹೆಚ್ಚಾಗಿರುವ ಕಾರಣ ಚಿಕನ್ ಬೆಲೆ ಏರಿಕೆಯಾಗಲಿದೆ . ಕಂಪನಿಗಳು ಶೀಘ್ರವೇ ಮೊಟ್ಟೆ ಹಾಗೂ ಚಿಕನ್ ಬೆಲೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿವೆ .

 

 

ಕೋಳಿ ಉದ್ಯಮದಲ್ಲಿ ಮೆಕ್ಕೆ ಜೋಳ ಪ್ರಮುಖ ಪಾತ್ರವಹಿಸುತ್ತವೆ . ಕೋಳಿಗಳಿಗೆ ಆಹಾರವಾಗಿ ಇದನ್ನು ನೀಡಲಾಗುತ್ತದೆ . ಕಳೆದ ಒಂದು ತಿಂಗಳಿಂದ ಮೆಕ್ಕೆ ಜೋಳದ ಬೆಲೆ ಶೇಕಡಾ 17 ರಷ್ಟು ಹೆಚ್ಚಾಗಿದೆ . ಮಳೆಯಿಂದಾಗಿ ಬೆಳೆ ಹಾಳಾಗಿದೆ . ಇದ್ರಿಂದ ಬೇಡಿಕೆಗೆ ತಕ್ಕಷ್ಟು ಮೆಕ್ಕೆಜೋಳ ಸಿಗ್ತಿಲ್ಲ . ಹಾಗಾಗಿ ಬೆಲೆ ಏರಿಕೆಯಾಗಿದೆ .

 

 

ಮೆಕ್ಕೆ ಜೋಳದ ಬೆಲೆ ನಿಯಂತ್ರಣಕ್ಕೆ ಬರುವ ಸಾಧ್ಯತೆ ಕಡಿಮೆಯಿದೆ . ಮೆಕ್ಕೆ ಜೋಳದ ಬೆಳೆಗೆ ಹುಳು ಹಿಡಿದಿದ್ದು, ಬೆಳೆ ಮತ್ತಷ್ಟು ಕಡಿಮೆಯಾಗಿದೆ . ಈ ವರ್ಷ 7 ಲಕ್ಷ ಹೆಕ್ಟೇರ್ ಗೂ ಹೆಚ್ಚು ಜೋಳ ನಾಶವಾಗಿದೆ . ಕರ್ನಾಟಕದಲ್ಲಿ 2,63 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ . ಅದೇ ಸಮಯದಲ್ಲಿ ಮಹಾರಾಷ್ಟ್ರದಲ್ಲಿ 232 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ . ಕಳೆದ ಎರಡು ತಿಂಗಳಲ್ಲಿ ಮೆಕ್ಕೆ ಜೋಳದ ಬೆಲೆ ಕ್ವಿಂಟಲ್ ‌ ಗೆ 1700 ರೂಪಾಯಿಗಳಿಂದ ಕ್ವಿಂಟಲ್ ‌ ಗೆ 2000 ರೂಪಾಯಿಯಾಗಿದೆ .

LEAVE A REPLY

Please enter your comment!
Please enter your name here