ಹೊಸ ವರ್ಷದ ಪಾರ್ಟಿಗಾಗಿ ‘ಚಿಕನ್ ಲಿವರ್ ಮಸಾಲೆ’

0
166

ನ್ಯೂ ಇಯರ್ ಪಾರ್ಟಿ ಎಂದರೆ ಅಲ್ಲಿ ಸಾಮಾನ್ಯವಾಗಿ ನಾನ್‍ವೆಜ್ ಇದ್ದೇ ಇರುತ್ತದೆ. ವೆರೈಟಿ ಚಿಕನ್ ಡಿಶ್‍ಗಳ ರುಚಿ ನೋಡಲು ಆಹಾರಪ್ರಿಯರು ಕಾಯುತ್ತಿರುತ್ತಾರೆ. ಅಂತವರಿಗಾಗಿ ಚಿಕನ್ ಲಿವರ್ ಮಸಾಲೆ ರೆಸಿಪಿ.

ಬೇಕಾಗುವ ಸಾಮಗ್ರಿಗಳು

ಚಿಕನ್ ಲಿವರ್ – 1/2 ಕೆಜಿ
ಸಣ್ಣಗೆ ಹೆಚ್ಚಿದ ಈರುಳ್ಳಿ – 1/2 ಕಪ್
ಗರಂ ಮಸಾಲ ಪುಡಿ – 2 ಸ್ಪೂನ್
ಕೆಂಪುಮೆಣಸಿನ ಪುಡಿ – 1/2 ಕಪ್
ನಿಂಬೆರಸ – 2 ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಸ್ಪೂನ್
ಕೊತ್ತಂಬರಿ ಸೊಪ್ಪು – 1/2 ಕಪ್
ಎಣ್ಣೆ – 1/2 ಕಪ್
ಧನಿಯಾ ಪುಡಿ – 2 ಸ್ಪೂನ್
ಅರಿಶಿನ – 1/2 ಸ್ಪೂನ್
ಕೊಬ್ಬರಿ ತುರಿ – 1/2 ಕಪ್
ಉಪ್ಪು – ರುಚಿಗೆ

 

 

ತಯಾರಿಸುವ ವಿಧಾನ

1. ಚಿಕನ್ ಲಿವರ್ 2-3 ಬಾರಿ ತೊಳೆದು ನೀರು ಸೋರಿಸಿ, ಅದರೊಂದಿಗೆ ಸ್ವಲ್ಪ ಕೆಂಪುಮೆಣಸಿನ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಸ್ಪೂನ್ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ ಅರ್ಧ ಗಂಟೆ ಬಿಡಿ.

2. ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಮ್ಯಾರಿನೇಟ್ ಮಾಡಿದ ಲಿವರ್ ಸೇರಿಸಿ 10 ನಿಮಿಷ ಕಡಿಮೆ ಉರಿಯಲ್ಲಿ ಫ್ರೈ ಮಾಡಿ ತೆಗೆದಿಡಿ.

3. ಅದೇ ಪ್ಯಾನಿಗೆ ಮತ್ತಷ್ಟು ಎಣ್ಣೆ ಸೇರಿಸಿ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಕೆಂಪುಮೆಣಸಿನ ಪುಡಿ, ಗರಂಮಸಾಲೆ ಪುಡಿ, ಉಪ್ಪು ಸೇರಿಸಿ ಹುರಿದುಕೊಳ್ಳಿ.

 

4. ಕೊಬ್ಬರಿತುರಿಯನ್ನು ಪುಡಿ ಮಾಡಿಕೊಂಡು ಸ್ಟೌ ಮೇಲಿನ ಮಿಶ್ರಣದೊಂದಿಗೆ ಸೇರಿಸಿ ಸ್ವಲ್ಪ ನೀರು ಸೇರಿಸಿ 10 ನಿಮಿಷ ಮತ್ತೆ ಕುಕ್ ಮಾಡಿಕೊಳ್ಳಿ.

5. ಈ ಮಸಾಲೆಯೊಂದಿಗೆ ಫ್ರೈ ಮಾಡಿಕೊಂಡ ಲಿವರ್ ಸೇರಿಸಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ, ಸ್ಟೌ ಆಫ್ ಮಾಡಿ ನಿಂಬೆರಸ ಸೇರಿಸಿ.

ಅನ್ನ, ಚಪಾತಿ, ರೊಟ್ಟಿಯೊಂದಿಗೆ ಸ್ಪೈಸಿ ಲಿವರ್ ಮಸಾಲೆಯನ್ನು ಎಂಜಾಯ್ ಮಾಡಿ.

LEAVE A REPLY

Please enter your comment!
Please enter your name here