ಡಿಕೆಶಿ ಬಗ್ಗೆ ಹೀಗೊಂದು ಮಾತು ಆಡಿದ್ರಾ ಕುಮಾರಣ್ಣ..?! ಇದು ಚೆಲುವನ ಬಾಂಬ್..!

0
223

ರಾಜ್ಯ ರಾಜಕೀಯದಲ್ಲಿ ಹೊಸ ಕಿಚ್ಚು ಹೊತ್ತಿಸಿದೆ ಮಾಜಿ ಸಂಸದ ಚೆಲುವರಾಯಸ್ವಾಮಿ ಸಿಡಿಸಿದ ಹೊಸ ಬಾಂಬ್. ಚೆಲುವರಾಯಸ್ವಾಮಿ ಸಿಡಿಸಿದ ಈ ಬಾಂಬ್ ಇದೀಗ ಒಕ್ಕಲಿಗ ಕೋಟೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಒಕ್ಕಲಿಗರ ಒಗ್ಗಟ್ಟು ಮುರಿದು ಬೀಳುವಷ್ಟು ಸಂಚಲನ ಮೂಡಿಸಿದೆ. ಅಷ್ಟಕ್ಕೂ ಚೆಲುವರಾಯಸ್ವಾಮಿ ರಾಜಕೀಯ ಉದ್ದೇಶಕ್ಕಾಗಿ ಈ ಬಾಂಬ್ ಸಿಡಿಸಿದ್ರಾ..? ಅಥವಾ ಕುಮಾರಸ್ವಾಮಿ ಅವರ ಮೇಲಿನ ದ್ವೇಷವಾ..? ಎನ್ನುವ ಸತ್ಯಕ್ಕಿಂತ ಕುಮಾರಣ್ಣ ಆ ಮಾತು ಆಡಿ ಬಿಟ್ರಾ..? ಎಂಬ ಪ್ರಶ್ನೆಯೇ ಎಲ್ಲರ ಮನದಲ್ಲೂ ಸುಳಿದಾಡುತ್ತಿದೆ.

ಹೌದು, ಇತ್ತೀಚೆಗೆ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗರ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬೆಂಬಲಿಸಲಿಲ್ಲ. ಆ ಹೋರಾಟದಲ್ಲಿ ಪಾಲ್ಗೊಳ್ಳದೇ, ಅಂತರ ಕಾಯ್ದುಕೊಂಡರು. ನಂತರ ಹೋರಾಟಕ್ಕೆ ಯಾಕೆ ಆಗಮಿಸಲಿಲ್ಲ..? ಎಂಬ ಮಾದ್ಯಮಗಳ ಪ್ರಶ್ನೆಗೆ ನನಗೆ ಆಹ್ವಾನ ಇರಲಿಲ್ಲ ಎಂಬ ಮಾತು ಹೇಳಿ ಅಲ್ಲಿಂದ ಜಾರಿಕೊಂಡರು. ಕುಮಾರಣ್ಣ ಆಡಿದ ಈ ಮಾತು ಒಕ್ಕಲಿಗರ ಕೋಟೆಯಲ್ಲಿ ಸಂಚಲನವನ್ನೇ ಹುಟ್ಟುಹಾಕಿತು. ಎಚ್.ಡಿ. ಕುಮಾರಸ್ವಾಮಿ ಅವರು ಮಾದ್ಯಮಗಳ ಮುಂದೆ ಈ ರೀತಿಯಾಗಿ ಹೇಳಿಕೆ ನೀಡಿದ್ರೆ, ಜೆಡಿಎಸ್ ಕಾರ್ಯಕರ್ತರ ಮುಂದೆ ಹೇಳಿದ್ದೇ ಬೇರೆ ಎನ್ನಲಾಗಿದೆ.

ಅಷ್ಟಕ್ಕೂ ಕುಮಾರಣ್ಣ ಜೆಡಿಎಸ್ ಕಾರ್ಯಕರ್ತರ ಹೇಳಿದ ಆ ಮಾತನ್ನು ಸ್ಪೋಟಿಸಿದ್ದಾರೆ ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ. ಹೌದು, ಇತ್ತೀಚೆಗೆ ಮಂಡ್ಯದಲ್ಲಿ ಮಾತನಾಡಿದ ಚೆಲುವರಾಯಸ್ವಾಮಿ, ಒಂದು ವೇಳೆ ಎಚ್.ಡಿ. ಕುಮಾರಸ್ವಾಮಿಯೇ ಬಂಧನ ಆಗಿದ್ದರೇ, ಡಿಕೆ ಶಿವಕುಮಾರ್ ಪೊಲೀಸ್ ಸ್ಟೇಷನ್ ಮುಂದೆ ಧರಣಿ ಕೂರುತ್ತಿದ್ದರು. ಕುಮಾರಸ್ವಾಮಿಯವರಿಗೆ ಮಾನವೀಯತೆ ಇದ್ದರೇ, ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾನಸಿಕ ಧೈರ್ಯ ತುಂಬಬಹುದಾಗಿತ್ತು. ಆದರೇ ಆ ಕೆಲಸವನ್ನು ಅವರು ಮಾಡಲಿಲ್ಲ.

ಇನ್ನು ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಎಚ್ಡಿಕೆ, ಡಿಕೆ ಶಿವಕುಮಾರ್ ದರೋಡೆ ಮಾಡಲು ನಾವು ಹೇಳಿದ್ವಾ..? ಇದಕ್ಕೆ ನಾನು ಹೊಣೆನಾ.? ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರನ್ನು ಕುಟುಕಿದ್ರು ಎಂದು ಚೆಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಡಿಕೆಶಿಗೆ ದರೋಡೆ ಮಾಡಲು ನಾವು ಹೇಳಿದ್ವಾ..? ಎನ್ನುವ ಮಾತನ್ನು ಕುಮಾರಣ್ಣ ಹೇಳಿದ್ರಾ..? ಅಥವಾ ಚೆಲುವರಾಯಸ್ವಾಮಿ ಸುಳ್ಳು ಬಾಂಬ್ ಸಿಡಿಸಿದ್ರಾ..? ಗೊತ್ತಿಲ್ಲ. ಒಟ್ಟಾರೆಯಾಗಿ ಚೆಲುವರಾಯಸ್ವಾಮಿ ಸಿಡಿಸಿದ ಬಾಂಬ್ ಮಾತ್ರ ಒಕ್ಕಲಿಗರ ಕೋಟೆಯಲ್ಲಿ ದೊಡ್ಡ ಬಿರುಕನ್ನೇ ಸೃಷ್ಟಿಸಿರುವುದಂತು ಸತ್ಯ.

LEAVE A REPLY

Please enter your comment!
Please enter your name here