ಭಾರತದ ಹೆಮ್ಮಯ ಕಿರೀಟ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ಇಸ್ರೋ’, ಚಂದ್ರಯಾನ-2 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಚಂದ್ರನ ಮಡಿಲು ಸೇರಿಸಿದೆ. ಹೌದು, 30 ದಿನಗಳ ಪಯಣ ಬೆಳೆಸಿದ ಚಂದ್ರಯಾನ-2 ಯಶಸ್ವಿಯಾಗಿ ಮಂಗಳವಾರ ಬೆಳ್ಳಗ್ಗೆ 9:02ಕ್ಕೆ ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಮೇಲುಗೈ ಸಾಧಿಸಿದೆ.
ಉಪಗ್ರಹದಲ್ಲಿರುವ ದ್ರವ ಇಂಧನ ಚಾಲಿತ ಇಂಜಿನ್ ಬಳಸಿ ಚಾಲನೆ ಮಾಡುವ ಮೂಲಕ ಚಂದ್ರಯಾನ-2ರನ್ನು ಚಂದ್ರನ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದ್ದು, ಭಾರತೀಯರಿಗೆ ಹೆಮ್ಮ ಹಾಗೂ ಸಂತಸದ ದಿನ ಎಂದೇ ಹೇಳಬಹುದು. ಜುಲೈ 22 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಉಪಗ್ರಹ ಉಡಾವಣಾ ನೆಲೆಯಿಂದ ಚಂದ್ರಯಾನ-2 ಉಪಗ್ರಹವನ್ನು ಜಿಎಸ್ಎಲ್ವಿ ಮಾರ್ಕ್ 3 ಮೂಲಕ ಉಡಾವಣೆ ಮಾಡಿತ್ತು ಇಸ್ರೋ ಸಂಸ್ಥೆ. ಚಂದ್ರ ಕಕ್ಷೆಗೆ ಸೇರ್ಪಡೆಗೊಂಡಿರುವ ಚಂದ್ರಯಾನ-2 ಚಂದ್ರನ ಧ್ರುವ ಪ್ರದೇಶಕ್ಕೆ 100 ಕಿ.ಮೀ ದೂರದಲ್ಲಿರುವ ಕಕ್ಷೆಗೆ ಪ್ರವೇಶಿಸಿತು.

ಸೆ.2 ರಂದು ವಿಕ್ರಮ್ ಲ್ಯಾಂಡರ್ ನೌಕೆಯಿಂದ ಬೇರ್ಪಡಲಿದೆ, ಹಾಗೂ ಸೆ.7 ರಂದು ಮೊದಲು ಚಂದ್ರನ ಮೇಲೆ ಕಾಲಿಡಲಿದೆ. ಎರಡು ಹಂತದ ಕಾರ್ಯಚರಣೆಗಳ ಮೂಲಕ ಚಂದ್ರನ ಮೇಲೆ ಇಳಿಸಲಾಗುವುದು ಎಂದು ಇಸ್ರೋ ತಿಳಿಸಿದೆ. ಚಂದ್ರಯಾನ-2 ವಿಶೇಷಗಳ ಬಗ್ಗೆ ಇಸ್ರೋ ಸಂಸ್ಥೆ ಈಗಾಗಲೇ ಹಲವು ವಿಚಾರಗಳನ್ನು ಹಂಚಿಕೊಂಡಿತ್ತು. ಜೊತೆಗೆ ತನ್ನ ಟ್ಟಿಟರ್ ಖಾತೆ ಹಾಗೂ ಇನ್ಸ್ಟಾಂಗ್ರಾಂನಲ್ಲಿ ಆಗಸ್ಟ್ 17ರಂದು `ಚಂದ್ರಯಾನ-2′ ಛಾಯಚಿತ್ರದ ಜೊತೆಗೆ ಶೀರ್ಷಿಕೆ ನೀಡುವ ಮೂಲಕ ಆಧಿಕೃತವಾಗಿ ಪೋಸ್ಟ್ ಮಾಡಿತ್ತು.