ಗಾರೆ ಕೆಲಸ ಮಾಡುತ್ತಿದ್ದ ಹುಡುಗ ಈಗ ಕನ್ನಡದ ಬೇಡಿಕೆಯ ಹಾಸ್ಯ ನಟ…

0
282

ಶ್ರೀರಂಗಪಟ್ಟಣದ ದೊಡ್ಡೇಗೌಡನ ಕೊಪ್ಪಲಿನಲ್ಲಿ ಹುಟ್ಟಿದ ಈ ಹುಡುಗನಿಗೆ ಓದು ತಲೆಗತ್ತದೆ SSLC ಫೇಲ್ ಆದಾಗ ಇನ್ನೇನು ಮಾಡುವುದು ಎಂದು ಗಾರೆ ಕೆಲಸ ಮತ್ತು ಕಬ್ಬು ಕಡಿಯುವ ಕೆಲಸ ಮಾಡಿಕೊಂಡಿದ್ದ ಹಾಗೆ ರೆಸಾರ್ಟ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೂಡ ಕೆಲಸ ಮಾಡಿದ್ದ. ಹೀಗೆ ಒಂದು ದಿನ ಸ್ನೇಹಿತರೊಂದಿಗೆ ಕುಕ್ಕರಹಳ್ಳಿ ಕೆರೆಯ ಏರಿಯಲ್ಲಿ ಕುಳಿತ್ತಿದ್ದಾಗ ಪಕ್ಕದಲ್ಲೇ ಇರುವ ರಂಗಾಯಣ ಚಿಣ್ಣರ ಮೇಳದ ಸದ್ದಾಗುತ್ತದೆ, ಏನು ನಡೆಯುತ್ತಿದೆ ಎಂದು ನೋಡಲು ಹೋದ ಈ ಹುಡುಗ ನಾಟಕದ ಹುಚ್ಚು ಹಚ್ಚಿಕೊಂಡು ಇಂದು ಬೇಡಿಕೆಯ ಹಾಸ್ಯನಟನಾಗಿದ್ದಾನೆ.

ಮಜಾ ಭಾರತ, ಕಾಮಿಡಿ ಟಾಕೀಸ್, ಮಜಾ ಟಾಕೀಸ್, ಮಜಾ ವೀಕೆಂಡ್ ಕಾರ್ಯಕ್ರಮಗಳನ್ನ ನೋಡಿದವರಿಗೆ ಚಂದ್ರಪ್ರಭಾ ಜಿ. ಯಾರೆಂಬುದು ಗೊತ್ತೇ ಇರುತ್ತೆ, ಗ್ರಾಮೀಣ ಶೈಲಿಯ ಡೈಲಾಗ್, ಒಳ್ಳೆಯ ಬಾಡಿ ಲ್ಯಾಂಗ್ವೆಜ್ ನೊಂದಿಗೆ ನೋಡುಗರು ನಗುವಂತೆ ಮಾಡುತ್ತಾನೆ ಈ ಹುಡುಗ. ಸ್ನೇಹಿತರ ರೂಮ್ ನಲ್ಲಿ ರಾತ್ರಿ ಕಳೆದು ನಾಟಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಜೀವನದಲ್ಲಿ ಹಲವು ರೋಚಕ ತಿರುವುಗಳನ್ನ ನೋಡಿ ಇಂದು ಒಬ್ಬ ಹಾಸ್ಯನಟನಾಗಿ ಹೊರಹೊಮ್ಮಿದ್ದಾರೆ ಚಂದ್ರಪ್ರಭಾ ಅವರು.

‘ನಮ ಏರಿಯಾದಲ್ಲಿ ಒಂದು ದಿನ’ , ‘ತರ್ಲೆ ವಿಲೇಜ್ ‘, ‘ಐರಾವತ”, ‘ಪರಸಂಗ’ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಚಂದ್ರಪ್ರಭಾ ಅವರು ಈಗ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಹಾಸ್ಯನಟ.

LEAVE A REPLY

Please enter your comment!
Please enter your name here