ಕೊನೆಗೂ ರಿವೀಲ್ ಆಯ್ತು ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಡೇಟ್ !

0
291

ಕಿರುತರೆಯ ಬಿಗ್ ಬಾಸ್ ಸೀಸನ್- 5 ರಿಯಾಲಿಟಿ ಶೋನಲ್ಲಿ ಹೊಸ ಹವಾ ಕ್ರಿಯೇಟ್ ಮಾಡಿದ್ದ ವಿನ್ನರ್ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಬಾರ್ಬಿ ಡಾಲ್ ಎಂದೇ ಹೆಸರಾದ ನಿವೇದಿತಾ ಗೌಡ ಈಗ ತಮ್ಮ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

 

 

Rapper ಚಂದನ್ ಹಾಗೂ ನಿವೇದಿತಾ ಗೌಡ 2020ರ ಮುಂದಿನ ವರ್ಷ ಫೆಬ್ರವರಿ ತಿಂಗಳ ಕೊನೆ ವಾರದಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಮದುವೆಯ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಮೂಲಗಳು ತಿಳಿಸಿದೆ.

 

 

ಇದೇ ವರ್ಷ ಅಕ್ಟೋಬರ್ 21ರಂದು ರ್ಯಾಪರ್ ಹಾಗೂ ಸಿಂಗರ್ ಚಂದನ್ ಶೆಟ್ಟಿ ತಮ್ಮ ಬಿಗ್ ಬಾಸ್ ನ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಅಲ್ಲದೇ ಈ ಅದ್ಧೂರಿ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು.

 


ಇದೇ ವರ್ಷ ನಡೆದ ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡು ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರು.

LEAVE A REPLY

Please enter your comment!
Please enter your name here