ಮಹದೇಶ್ವರನನ್ನು ನಿಂದಿಸಿದ್ದಾನೆ ಎಂದು ಚಂದನ್ ಶೆಟ್ಟಿ ವಿರುದ್ಧ ಆಕ್ರೋಶದ ಸುರಿಮಳೆ !

0
150

ಚಂದನ್ ಶೆಟ್ಟಿ, ಚಂದನವನದ ಸಂಗೀತ ಸಂಯೋಜಕ, ಗೀತಾರಚನೆಕಾರ ಮತ್ತು ಪಾಪ್ ಗಾಯಕ. ತನ್ನ ರ್ಯಾಪ್  ಹಾಡುಗಳಿಂದ ಲಕ್ಷಾಂತರ  ಅಭಿಮಾನಿಗಳನ್ನು ಗೆದ್ದಿರುವ ಈ ಹಾಸನದ ಹುಡುಗ, ಜೀವನದಲ್ಲಿ ಅನೇಕ ನೋವುಗಳನ್ನು ನೋಡಿ ಉನ್ನತ ಸ್ಥಾನಕ್ಕೇರಿದ್ದಾರೆ. ಯಾವ ಪಬ್ ಗೆ ಹೋದರು ಅಲ್ಲಿ ಕೇಳಿಸುವುದು ಇವರ ಗಾನಭಜಾನವೇ. ಎಲ್ಲಿ ರಸಸಂಜೆ ಕಾರ್ಯಕ್ರಮ ನಡೆದರು ಅಲ್ಲಿ ಇವರ ಹಾಡಿಗೆ ತಕದಿಮಿತ ವೇ.. ಇವರ ಅಲ್ಬಂಮ್ ಸಾಂಗ್ಸ್‌ ಗಾಗಿ ಪ್ರೇಕ್ಷಕರು ಕಾಯುತ್ತಿರುತ್ತಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ನೇತೃತ್ವದಲ್ಲಿ ಅಲೆಮಾರಿ ಚಿತ್ರಕ್ಕೆ ಗೀತರಚನೆಕಾರ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿ ಚಂದನ್ ಶೆಟ್ಟಿ 2012 ರಲ್ಲಿ ಸಂಗೀತ ಉದ್ಯಮಕ್ಕೆ ಪ್ರವೇಶಿಸಿದರು. ನಂತರ ಅವರು ವರದಾನಾಯಕ , ಪವರ್ , ಚಕ್ರವ್ಯೂಹ ಮತ್ತು ಭಜರಂಗಿ ಸೇರಿದಂತೆ ಹಲವಾರು ಚಲನಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಮತ್ತು “ಹಾಳಗೋದೇ”, “3 ಪೆಗ್”, “ಚಾಕೊಲೇಟ್ ಗರ್ಲ್”, “ಟಕಿಲಾ” ಮತ್ತು “ಫೈರ್” ನಂತಹ ಏಕ ಗೀತೆಗಳೊಂದಿಗೆ ಏಕವ್ಯಕ್ತಿ ಕಲಾವಿದನಾಗಿ ಖ್ಯಾತಿಯನ್ನು ಪಡೆದಿದ್ದಾರೆ. ಅಲ್ಲದೇ ದಕ್ಷಿಣ ಭಾರತದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ವಿಜೇತರಾಗಿ ಅಪಾರ ಜನಮನ್ನಣೆ ಪಡೆದುಕೊಂಡಿದ್ದಾರೆ. ಮತ್ತು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಜಡ್ಜ್ ಕೂಡ ಆಗಿದ್ದರು.

ಇನ್ನು ಬಿಗ್ ಬಾಸ್ ನಲ್ಲಿ ಚಂದನ್ ಶೆಟ್ಟಿ ಅವರ ಗಾನ ಬಜಾನವನ್ನು ಪ್ರೇಕ್ಷಕರು ಇನ್ನೂ ಕೂಡ ಮರೆತಿಲ್ಲ .ಅವರು ತಮ್ಮ ಪ್ರತಿಸ್ಪರ್ಧಿಗಳಿಗೆ ಬರೆಯುತ್ತಿದ್ದ ಹಾಡುಗಳು, ಕಿಚ್ಚನಿಗೆ ಬರೆಯುತ್ತಿದ್ದ ಹಾಡುಗಳು ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಇನ್ನು ಚಂದನ್ ಶೆಟ್ಟಿ ವಿವಾಹವಾದ ಬಳಿಕ  ಹೆಚ್ಚಾಗಿ ಟ್ರೋಲ್ ಗಳಲ್ಲೇ ಸುದ್ಧಿಯಲ್ಲಿರುತ್ತಿದ್ದಾರೆ. ಅವರ ನಸೀಬೆ ಸರಿಯಾಗಿಲ್ಲ ಅನಿಸುತ್ತದೆ. ಅವರು ಏನೇ ಮಾಡಿದರು ಒಂದಲ್ಲಾ ಒಂದು ರೀತಿಯಲ್ಲಿ ನೆಟ್ಟಿಗರ ಕೆಂಗಣ್ಣಿಗೆ ತುತ್ತಾಗಿರುತ್ತಾರೆ.  ಇದೀಗ  ರ್ಯಾಪ್ ಮಾಂತ್ರಿಕ  ದೊಡ್ಡ ಎಡವಟ್ಟೊಂದನ್ನ ಮಾಡಿಕೊಂಡಿದ್ದು,  ಮಲೆ ಮಹದೇಶ್ವರ ಸ್ವಾಮಿಯ ಭಕ್ತರ ಕೋಪಕ್ಕೆ ತುತ್ತಾಗಿದ್ದಾರೆ. ಇತ್ತೀಚಿಗಷ್ಟೆ ಚಂದನ್ ಶೆಟ್ಟೆ ಅವರು, ಖ್ಯಾತ ಜನಪದ ಹಾಡಾದ  ಕೋಲುಮಂಡೆ ಜಂಗಮ ದೇವರು ಹಾಡನ್ನು ರ್ಯಾಪ್ ಮಾಡಿ ಅಭಿನಯಿಸಿದ್ದರು.  ಚಂದನ್ ಶೆಟ್ಟಿ ಈ ಹಾಡಿನಲ್ಲಿ ಸಂಕವ್ವನನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸಿರುವುದು ಭಕ್ತರ ಮನಸ್ಸಿಗೆ ಬಹಳ ಬೇಸರವಾಗಿದ್ದು, ನಿಜಕ್ಕೂ ಈ ಮಣ್ಣಿನಲ್ಲಿ‌ ಹುಟ್ಟಿ ನಮ್ಮ ಜನರ ಭಾವನೆಗಳಿಗೆ ಬೆಲೆ ಕೊಡಬೇಕು ಅನ್ನೋ ಸಾಮಾನ್ಯ ಜ್ಞಾನವೂ ಈ ಮನುಷ್ಯನಿಗೆ  ಇಲ್ಲವಾಯಿತೆ?  ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ.

ಕೋಲು ಮಂಡೆ ಹಾಡನ್ನು ರ್ಯಾಪ್ ಮಾಡಿಕೊಂಡಿರುವುದಕ್ಕೆ ಭಕ್ತರಲ್ಲಿ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಚಂದನ್ ಶೆಟ್ಟಿ ಚಿತ್ರೀಕರಣ ಮಾಡಿರುವ ರೀತಿ ನಿಜಕ್ಕೂ ಕೋಪ ತರಿಸುವಂತಾಗಿದೆ. ಯಾಕೆಂದರೆ  ಸಂಕವ್ವ ತಾಯಿಯನ್ನು ಪೂಜಿಸುವ ದೊಡ್ಡ ಪ್ರಮಾಣದ ಭಕ್ತರ ಬಳಗವೇ ಇದೆ. ಮಲೆ ಮಹದೇಶ್ವರ ಸ್ವಾಮಿಯ  ಭಕ್ತರೆಲ್ಲರೂ ಕೂಡ ಸಂಕವ್ವ ತಾಯಿಯನ್ನು ಪೂಜ್ಯನೀಯ ಸ್ಥಾನದಲ್ಲಿಟ್ಟು ನೋಡುತ್ತಾರೆ ಹಾಗೂ ನಮಿಸುತ್ತಾರೆ. ಆದರೆ ರ್ಯಾಪ್ ಮಾಂತ್ರಿಕ ಎಂದು ಕರೆಸಿಕೊಳ್ಳುವ ಚಂದನ್ ಶೆಟ್ಟಿ‌ ಅವರು  ಮಾತ್ರ ತಮಗೆ ಹೇಗೆ ಇಷ್ಟ ಬರುತ್ತದೆಯೋ ಹಾಗೆ ಮನ ಬಂದಂತೆ ಸಂಕವ್ವ ನನ್ನು‌ ತೋರಿಸಿರುವುದು  ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.  ಭಕ್ತರ ಪ್ರಕಾರ ನಮ್ಮ ನೆಲದಲ್ಲಿ ಹುಟ್ಟಿದವರೇ  ನಮ್ಮ ಜಾನಪದ ಹಾಡನ್ನು ಈ ರೀತಿ‌ಯಲ್ಲಿ ಅಸಭ್ಯವಾಗಿ ತೋರಿಸಿ ಮತ್ತು ಬಿಂಬಿಸಿದರೆ ಮುಂದಿನ ಪೀಳಿಗೆಗಳು ಮತ್ತು ಮಕ್ಕಳು ಕೂಡ ಪೂಜ್ಯವಾಗಿ ಕಾಣಬೇಕಾದ ಹೆಣ್ಣನ್ನು  ಬೇರೆ ದೃಷ್ಟಿಯಲ್ಲಿ ಕಾಣುವಂತಾಗುತ್ತದೆ ಎಂದು ನೇರವಾಗಿಯೇ ಚಂದನ್ ಅವರಿಗೆ ಹರಿಹಾಯ್ದಿದ್ದಾರೆ. ಅದರಲ್ಲೂ ಅವರ ಮನೆ ಹೆಣ್ಣು ಮಕ್ಕಳನ್ನ ಈ ರೀತಿ ತೋರಿಸಲು ಚಂದನ್ ತಯಾರಿದ್ದಾರಾ? ಎಂದು ನೆಟ್ಟಿಗರು ಚಂದನ್ ಮಾಡಿರುವ ತಪ್ಪಿಗೆ ಪ್ರಶ್ನಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಚಂದನ್ ವಿರುದ್ಧ ದೊಡ್ಡ  ಮಟ್ಟದಲ್ಲಿಯೇ ಚರ್ಚೆಯಾಗುತ್ತಿದ್ದು,
‘ಕೇವಲ ಹಣ ಹಾಗೂ ಹೆಸರಿನ ಆಸೆಗೆ ನಮ್ಮ ಸಂಸ್ಕೃತಿಯನ್ನು ಹಾಳು ಮಾಡಬೇಡಿ,  ಹೊಸ ಹಾಡುಗಳನ್ನು ರಚಿಸಿಕೊಂಡು ನಿಮಗಿಷ್ಟವಾದಂತೆ ತುಂಡು ಬಟ್ಟೆ ತೊಟ್ಟು ಚಿತ್ರೀಕರಣ ಮಾಡಿಕೊಳ್ಳಿ.  ಆದರೆ ಈ ರೀತಿ ಭಕ್ತಿ ತುಂಬಿದ ಜಾನಪದ ಹಾಡುಗಳನ್ನು ಮತ್ತು ಭಕ್ತರ ಭಾವನೆಗೆ ಧಕ್ಕೆ ಬರುವಂತೆ  ಈ ರೀತಿ ಅಸಭ್ಯವಾಗಿ ಚಿತ್ರೀಕರಿಸಿ‌ ಇದರಿಂದ ಹೆಸರು ಸಂಪಾದನೆ ಮಾಡಬೇಕಾ? ನಮ್ಮ ಮಣ್ಣಿನ ಸಂಸ್ಕೃತಿ ನಮ್ಮ ಹೆಣ್ಣಿನ ಗೌರವವನ್ನು ಎತ್ತಿ ತೋರುವ ಹಾಡುಗಳನ್ನು ಮಾಡಲು ನಿಮಗೆ ಮನಸ್ಸು ಒಪ್ಪುವುದಿಲ್ಲವಾ? ಇಂತದ್ದು‌ ಮಾತ್ರ ನಿಮ್ಮ ತಲೆಯಲ್ಲಿ ಓಡುವುದಾ?’ ಎಂದು ಹರಿಹಾಯುತ್ತಿದ್ದಾರೆ..

ಇನ್ನೂ ಸಂಕವ್ವನನ್ನು ತಾಯಿ ಎಂದು ನಂಬಿರುವ ಭಕ್ತರ ಮುಂದೆ ಈ ರೀತಿ ಕೆಟ್ಟ ದೃಷ್ಟಿಯಿಂದ ಕಾಣುವ ಸರ ಮಾರಲು ಬಂದವನ ಪಾತ್ರದಲ್ಲಿ ಖುದ್ದು ಚಂದನ್ ಶೆಟ್ಟಿ ಅವರೇ ಕಾಣಿಸಿಕೊಂಡಿರುವುದು ವಿಪರ್ಯಾಸವೇ ಸರಿ. ನಿಜಕ್ಕೂ ಇದು ನಾಚಿಕೆ ಗೇಡಿನ ಸಂಗತಿಯಾಗಿದ್ದು ಈ‌ ಕೂಡಲೇ ಹಾಡನ್ನು ಡಿಲೀಟ್ ಮಾಡಿಸಿ ಕ್ಷಮೆ ಕೇಳಿ ಎಂದು ಮಾದಪ್ಪನ  ಭಕ್ತರು  ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ..

LEAVE A REPLY

Please enter your comment!
Please enter your name here