ಮುಂದಿನ ವರ್ಷ ಚಂದನ್-ನಿವೇದಿತಾ ವಿವಾಹ…ಮದುವೆ ಎಲ್ಲಿ,ಯಾವ ದಿನ…?

0
293

ಬಿಗ್ ಬಾಸ್ ಸೀಸನ್ 5 ನಿಜಕ್ಕೂ ವಿಶೇಷ ಎನ್ನಬಹುದು. ಈ ಸೀಸನ್‍ನಲ್ಲಿ ಭಾಗವಹಿಸಿದ್ದ ಬಹುತೇಕ ಸ್ಪರ್ಧಿಗಳು ಹೊರಬಂದ ಮೇಲೆ ಇತರ ಸೀಸನ್‍ಗಳ ಸ್ಪರ್ಧಿಗಳಿಗಿಂತ ಭಾರೀ ಖ್ಯಾತರಾದರು. ಅದರಲ್ಲಿ ಎಲ್ಲರ ಗಮನ ಸೆಳೆದದ್ದು ಚಂದನ್ ಹಾಗೂ ನಿವೇದಿತಾ.

 

 

ಈ ಜೋಡಿ ಹೊರಬಂದಿದ್ದೇ ತಡ ಬಹಳಷ್ಟು ಸಮಾರಂಭಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಇವರಿಬ್ಬರೂ ಪ್ರೀತಿಸುತ್ತಿರಬಹುದಾ ಎಂಬ ಅನುಮಾನ ಎಲ್ಲರಿಗೂ ಕಾಡತೊಡಗಿತು. ಆದರೆ ಇವರಿಬ್ಬರು ಮಾತ್ರ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎನ್ನುತ್ತಿದ್ದರು.

 

 

ಆದರೆ ಯುವದಸರಾ ವೇದಿಕೆ ಮೇಲೆ ಚಂದನ್ ಎಲ್ಲರ ಮುಂದೆ ನಿವೇದಿತಾಗೆ ಪ್ರಪೋಸ್ ಮಾಡಿದ್ದೂ ಆಯ್ತು, ಫಟಾಫಟ್ ಅಂತ ಇಬ್ಬರ ನಿಶ್ಚಿತಾರ್ಥ ಕೂಡಾ ಆಗಿ ಹೋಯ್ತು. ಇದೀಗ ಇವರ ಮದುವೆ ತಯಾರಿ ನಡೆಯುತ್ತಿದೆ. ನಿವೇದಿತಾ ಹಾಗೂ ಚಂದನ್ ಮುಂದಿನ ವರ್ಷ ಮದುವೆಯಾಗಲಿದ್ದಾರಂತೆ. ಅದರೂ ಕೂಡಾ ಫೆಬ್ರವರಿ ತಿಂಗಳಲ್ಲಿ. ಇವರಿಬ್ಬರೂ ಫೆಬ್ರವರಿ 14 ಪ್ರೇಮಿಗಳ ದಿನದಂದು ಮದುವೆಯಾಗಲಿದ್ದಾರ ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ.

 

 

ಆದರೆ ಹೊಸ ವರ್ಷದಂದು ತಮ್ಮ ಮದುವೆ ದಿನಾಂಕ, ಸ್ಥಳ ಹಾಗೂ ಇನ್ನಿತರ ವಿವರಗಳ ಬಗ್ಗೆ ಮಾಹಿತಿ ನೀಡಲಿದ್ದಾರಂತೆ ಈ ಜೋಡಿ. ಹೊಸವರ್ಷಕ್ಕೆ ಇನ್ನು 8 ದಿನಗಳಷ್ಟೇ ಬಾಕಿ ಇದ್ದು, ಇವರ ಮದುವೆ ಯಾವಾಗ ಎಂದು ತಿಳಿಯಲು ಅಭಿಮಾನಿಗಳು ಕೂಡಾ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here