ದರ್ಶನ್ ಅವರಿಗೆ ಎಚ್ಚರಿಕೆ ಕೊಟ್ಟ ಪೈಲ್ವಾನ್ ನಿರ್ಮಾಪಕಿ !

0
464

ದರ್ಶನ್ ಅವರು ಇಂದು ಬೆಳಿಗ್ಗೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ, ನನ್ನ ಅಭಿಮಾನಿಗಳನ್ನು ಕೆಣಕಬೇಡಿ ಎಂದು ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದರು. ಇದಲ್ಲದೆ ಅವರು ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಪ್ರಚೋದಿಸಲು ಬರದಿರಿ ಎನ್ನುವ ಸಂದೇಶವನ್ನು ದರ್ಶನ್ ರವಾನೆ ಮಾಡಿದ್ದರು.

ಹೀಗೆ ದರ್ಶನ್ ಅವರು ಟ್ಟಿಟ್ ಮಾಡಿದ ಕೆಲವೇ ನಿಮಿಷದಲ್ಲಿ ಪರೋಕ್ಷವಾಗಿ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ದರ್ಶನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಈ ವಿಷಯ ಇದೀಗ ಸ್ಯಾಂಡಲ್‍ವುಡ್ ನಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಸ್ವಪ್ನ ಕೃಷ್ಣ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ನಿಮ್ಮ ಬೆದರಿಕೆಗೆ ಜಗ್ಗೊನಲ್ಲ ನಮ್ಮ ಪೈಲ್ವಾನ, ಕಾಲ್ ಏಳೆಯೋಕೆ ಬಂದವರ ಸ್ಥಾನ ಕಾಲ್ ಕೆಳಗೆನೇ” ಎಂದು ಬರೆದುಕೊಂಡಿದ್ದಾರೆ. ಇದರಿಂದ ಚಂದನವನದಲ್ಲಿ ಭಾರಿ ಕೋಲಾಹಲ ಉಂಟಾಗಿದೆ. ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಕಾಮೆಂಟ್ ನಲ್ಲಿ ಒಬ್ಬರಿಗೊಬ್ಬರು ಪ್ರತ್ಯುತ್ತರ ಕೊಡುತ್ತಿದ್ದು, ಈ ಸ್ಟಾರ್ ವಾರ್ ನಿಲ್ಲುವಂತೆ ಕಾಣುತ್ತಿಲ್ಲ

LEAVE A REPLY

Please enter your comment!
Please enter your name here