ಹೊಸ ದಾಖಲೆ ಬರೆಯಲು ಸಜ್ಜಾಗುತ್ತಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಪೋಸ್ಟರ್!

0
241

ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ‘ರಾಬರ್ಟ್’ ಮೂವಿ ಪ್ರೇಕ್ಷಕರಿಗೆ 2020ರ ಹೊಸ ವರ್ಷದ ಉಡುಗೊರೆ ಎಂಬೋಣ. ದರ್ಶನ್ ರ ಫ್ಯಾನಸ್ ಗಳಿಗೆ ಕ್ರಿಸ್ ಮಸ್ ಹಬ್ಬದ ಉಡುಗೊರೆಯಾಗಿ ‘ರಾಬರ್ಟ್’ ಸಿನಿಮಾದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು.

 

ಇದೇ ಪೋಸ್ಟರ್ ಇದೀಗ 1 ಮಿಲಿಯನ್ ವೀಕ್ಷಣೆ ಮಾಡಿ ಹೊಸ ದಾಖಲೆ ಸೃಷ್ಟಿಸಿದೆ. ಹೌದು, ಸ್ಯಾಂಡಲ್ವುಡ್ನಲ್ಲಿ 1 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದ ಮೊಷನ್ ಪೋಸ್ಟರ್ ಎಂಬ ಹೆಗ್ಗಳಿಕೆ ರಾಬರ್ಟ್ ಪಾತ್ರವಾಗಿದೆ. ಇವೆಲ್ಲದಕ್ಕಿಂತ ಪ್ರಮುಖವಾಗಿ ರಾಬರ್ಟ್ ಪೋಷನ್ ಪೋಸ್ಟರ್ನಲ್ಲಿ ಬರುವ ಜೀಪಿನ ಕೆಳಗೆ ಬಾಸ್ ಎಂದು ಬರೆದಿರುವುದು ಅಭಿಮಾನಿಗಳ ಕ್ಯೂರಿಯಾಸಿಟಿ ತರಿಸುತ್ತಿದೆ.

 

ತಮ್ಮ ಹಿಂದಿನ ಮಿಕ್ಕೆಲ್ಲಾ ಚಿತ್ರಗಳಿಗಿಂತ ಭಿನ್ನವಾಗಿ ರಾಬರ್ಟ್’ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಂಡಿದ್ದು, ಅವರ ಹೊಸ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಭಿನ್ನ ಶೈಲಿಯಲ್ಲಿ ಡಿಬಾಸ್ ಈ ಬಾರಿ ಕಾಣಿಸಿಕೊಂಡಿದ್ದಾರೆ ಎಂದು ಹಲವರು ಕಮೆಂಟ್ ಬರೆದಿದ್ದಾರೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿ ಬರುವ ‘ರಾಬರ್ಟ್’ ಸಿನಿಮಾ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ಹೈಪ್ ಕ್ರಿಯೆಟ್ ಆಗಿದೆ.

 

2019ರಲ್ಲಿ ದಾಸ ಮೂರು ಸಿನಿಮಾಗಳಲ್ಲಿ ನಟಿಸಿ ಅಬ್ಬರಿಸಿದ್ದರು. ‘ಕುರುಕ್ಷೇತ್ರ’, ‘ಯಜಮಾನ’, ‘ಒಡೆಯ’ ಸಿನಿಮಾದ ಮೂಲಕ ಅಭಿಮಾನಿಗಳೆದುರು ಬಂದಿದ್ದರು. 2020ಕ್ಕೆ’ರಾಬರ್ಟ್’ ಸಿನಿಮಾದ ಮೂಲಕ ಬರಲು ಸಿದ್ಧರಾಗಿದ್ದಾರೆ. ಅಭಿಮಾನಿಗಳಂತೂ ದರ್ಶನ್ ಅವರ ‘ರಾಬರ್ಟ್’ ಹೊಸ ಲುಕ್ ಗೆ ಹಪಹಪಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here