ಗುತ್ತಿಗೆ ನೌಕರರಿಗೆ ‘ದಸರಾ ಹಬ್ಬದ’ ಪ್ರಯುಕ್ತ ಕೇಂದ್ರ ಸರ್ಕಾರ ನೀಡಿದ ಕೊಡುಗೆ ಏನು ಗೊತ್ತಾ..?

0
344

ಕೇಂದ್ರ ಸರ್ಕಾರ ನೀಡಿರುವ ಆದೇಶದ ಮೇರೆಗೆ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ದಸರಾ ಹಬ್ಬದ ಮುನ್ನವೇ ದಸರಾದ ಉಡುಗೊರೆ ಬಂದು ಕೈ ಸೇರಿದೆ ಎನ್ನಬಹುದು. ಹೌದು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರಿಗೆ ಖಾಯಂ ನೌಕರಿಗೆ ದೊರೆಯುತ್ತಿದ್ದ ವೇತನವೇ ದೊರೆಯಲಿದೆ. ಈ ವಿಚಾರ ಪ್ರಸ್ತಾಪವಾದಂತೆ ಪ್ರಧಾನಿ ಕಛೇರಿಯ ಆಡಳಿತದಲ್ಲಿ ಇರುವ ತರಬೇತಿ ಇಲಾಖೆ ಈ ಮಹತ್ವ ಆದೇಶವನ್ನು ಹೊರಡಿಸಿದೆ. ಸಾಮಾನ್ಯವಾಗಿ ಸರ್ಕಾರಿ ಕಛೇರಿಗಳಲ್ಲಿ ಕುಳಿತು 8 ತಾಸು ಕೆಲಸ ನಿರ್ವಹಿಸುವ ನೌಕರರಿಗೆ ದೊರೆಯುವ ಸಂಬಳವೇ ಗುತ್ತಿಗೆ ನೌಕರರಿಗೆ ಸಿಗಲಿದೆ ಎಂದು ಅಧಿಕೃತವಾಗಿ ತಿಳಿಸಿದೆ.

ಈ ಹಿಂದೆ ಗುತ್ತಿಗೆ ನೌಕರರು ಆಯಾ ರಾಜ್ಯ ಸರ್ಕಾರ ನೀಡುತ್ತಿದ್ದ ಅನುಸಾರದ ಪ್ರಕಾರವೇ ಕನಿಷ್ಟ ವೇತನ ಪಡೆಯುತ್ತಿದ್ದರು. ಜೊತೆಗೆ ದೆಹಲಿ ಸರ್ಕಾರದ ಆದೇಶದಂತೆ ಕೌಶಲ್ಯ ರಹಿತ ಕಾರ್ಮಿಕರಿಗೆ ಕನಿಷ್ಟ 14,000 ರೂಪಾಯಿಗಳ ಸಂಬಳವನ್ನು ನೀಡಲು ಯೋಚಿಸಿದೆ. ಗುತ್ತಿಗೆ ಪಡೆದು ಆಯಾ ಸ್ಥಳದಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ನೌಕರರಿಗೂ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ದಸರಾ ಹಬ್ಬದ ಮುನ್ನವೇ ಸಿಕ್ಕಿರುವುದು ನೌಕರಿಗೆ ಮತ್ತಷ್ಟು ಖುಷಿ ತಂದಿದೆ ಎಂದೇ ಹೇಳಬಹುದು.

LEAVE A REPLY

Please enter your comment!
Please enter your name here