ತೀವ್ರ ಆರ್ಥಿಕ ಬಿಕ್ಕಟ್ಟು : ಸರ್ಕಾರಿ ಸ್ವಾಮ್ಯದ 3 ಕಂಪನಿಗಳ ಮಾರಾಟಕ್ಕೆ ಮುಂದಾದ ಮೋದಿ ಸರ್ಕಾರ..!

0
250

ದೇಶದ ಆರ್ಥಿಕ ಬೆಳವಣಿಗೆ ತೀವ್ರವಾಗಿ ಕುಸಿಯುತ್ತಿರುವ ಮಧ್ಯೆ ಭಾರತ ದಿವಾಳಿ ಏಳುವ ಒಂದೊಂದೆ ಸೂಚನೆಗಳು ಗೋಚರಿಸುತ್ತಿವೆ. ಮೋದಿ ಸರ್ಕಾರ ತೆಗೆದುಕೊಂಡ ತಪ್ಪು ಆರ್ಥಿಕ ನಿರ್ಧಾರಗಳು ದೇಶದ ಆರ್ಥಿಕತೆಯನ್ನು ನೆಲಕಚ್ಚುವಂತೆ ಮಾಡಿವೆ. ಮೋದಿ ಸರ್ಕಾರ ಇದೀಗ ತಪ್ಪನ್ನು ಸರಿಪಡಿಸಲು ಎಷ್ಟೇ ಹೆಣಗಾಡುತ್ತಿದ್ದರು, ಸಾಧ್ಯವಾಗುತ್ತಿಲ್ಲ. RBI ಗವರ್ನರ್ ಕೂಡಾ ಆರ್ಥಿಕ ಪುನಶ್ಚೇತನ ಎಂಬುದು ಕೇವಲ ಭ್ರಮೆ ಎನ್ನುವ ಮೂಲಕ ಆರ್ಥಿಕ ಕುಸಿತವನ್ನು ಒಪ್ಪಿಕೊಂಡಿದ್ದಾರೆ.

ಈ ಮಧ್ಯೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸೇರಿದಂತೆ ಸರ್ಕಾರಿ ಸ್ವಾಮ್ಯದ ಮೂರು ಕಂಪನಿಗಳನ್ನು ಮಾರಾಟ ಮಾಡಲು ಮುಂದಾಗಿದೆ. 2020 ರ ಮಾರ್ಚ್ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ಮೂಲಕ ಕೇಂದ್ರ ಸರ್ಕಾರ ತನ್ನ ಆರ್ಥಿಕ ದಿವಾಳಿತನವನ್ನು ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ.

ಏರ್ ಇಂಡಿಯಾ ಜೊತೆಗೆ ಭಾರತ್ ಪೆಟ್ರೋಲಿಯಂ ಹಾಗೂ ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಮಾರಾಟಕ್ಕೆ ಚಿಂತನೆ ನಡೆದಿದೆ. ವಿದೇಶದ ಕಂಪನಿಗಳಿಗೆ ಇವುಗಳನ್ನು ಮಾರಾಟ ಮಾಡುವ ಮೂಲಕ 600 ಬಿಲಿಯನ್ ರೂಪಾಯಿ ಗಳಿಸುವ ಉದ್ದೇಶವನ್ನು ಮೋದಿ ಸರ್ಕಾರ ಹೊಂದಿದೆ. ಈ ಸಂಸ್ಥೆಗಳನ್ನು ಮಾರಾಟ ಮಾಡುವ ಕುರಿತು ಈಗಾಗಲೇ ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂರು ಕಂಪನಿಗಳ ಮಾರಾಟದಿಂದ ಕೇಂದ್ರ ಸರ್ಕಾರ ತನ್ನ ಆಸ್ತಿ ಮೌಲ್ಯವನ್ನು ಕಳೆದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ಹಲವು ಸರ್ಕಾರಿ ಸ್ವಾಮ್ಯದ ಕಂಪನಿಗಳು ಖಾಸಗಿ ಕಂಪನಿಗಳ ಪಾಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here