ಡಿಸೆಂಬರ್ ೧ ರಿಂದ ಕೇಂದ್ರದ ಹೊಸ ನಿಯಮ : ಕಾರು,ಬೈಕು ಸವಾರರೇ ಹುಷಾರ್

0
879

ದೇಶದಲ್ಲಿ ಶೋರೂಮಿನಿಂದ ಹೊರಬರುವ ಆದಷ್ಟೋ ಗಾಡಿಗಳು ಸರಿಯಾದ ರಿಜಿಸ್ಟ್ರೇಷನ್ ಮಾಡಿಸದೆ ಅಥವಾ ಬೇಕು ಅಂತಾನೇ ನಂಬರ್ ಪ್ಲೇಟ್ ಹಾಕಿಸಿಕೊಳ್ಳದೇ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುತ್ತಿರುವುದು ಹೆಚ್ಚಿನ ಪ್ರದೇಶಗಲ್ಲಿ ಕಂಡುಬರುತ್ತಿದೆ. ಆದುದರಿಂದ ದ್ವಿಚಕ್ರ ವಾಹನಗಳಿಗೆ ಸರಿಯಾದ ಸಂಖ್ಯೆ ಹಾಕದೆ ಇರುವುದು ಅಷ್ಟೇ ಅಲ್ಲದೆ ಗಾಡಿಗಳ ಮೇಲೆ ಇಲ್ಲ ಸಲ್ಲದ ಸ್ಟಿಕ್ಕರ್ ಕಟ್ಟಿಂಗ್ ಹಾಗೂ ಪದಬಳಿಕೆ ಮಾಡುವಂತಲ್ಲ.ಹೌದು ಈಗಾಗಲೇ ಈ ನಯಮ ಆಂಧ್ರಪ್ರದೇಶದಲ್ಲಿ ಡಿಸೆಂಬರ್ ನಿಂದ ಆರಂಭವಾಗಲಿದ್ದು ಗಾಡಿಗಳ ಮೇಲೆ ಹೀರೊ ಹೀರೊಯಿನ್ ಚಿತ್ರ ಮತ್ತು ವಿಚಿತ್ರ ಸನ್ನೆ ಮಾಡುವ ಚಿತ್ರಗಳನ್ನು ಹಾಕುವತಿಂಲ್ಲ. ಅಕಸ್ಮಾತಾಗಿ ಹಾಕಿ ಸಿಕ್ಕಿದರೆ ಪೊಲೀಸರು ಗಾಡಿಗಳನ್ನು ಸೀಜ್ ಮಾಡುವ ಎಲ್ಲ ಅಧಿಕಾರ ಪೊಲೀಸರಿಗೆ ಇದೆ. ಅಷ್ಟೇ ಅಲ್ಲದೆ ಸರ್ಕಾರ ಗಾಡಿಯ ನಂಬರ್ ಪ್ಲೇಟ್ ಗಳಿಗೂ ಕಟ್ಟುನಿಟ್ಟಾದ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ!

ಈಗಾಗಲೇ ಟ್ರಾಫಿಕ್ ಉಲ್ಲಂಘನೆ ಮಾಡುವವರಿಗೆ ಹೊಸ ಪಟ್ಟಿ ಬಿಟ್ಟಿರುವುದು ತಮಗೆಲ್ಲರಿಗೂ ಗೊತ್ತಾಗಿದೆ .ಈಗ ಬೈಕ್ ಮತ್ತು ಕಾರ್ ಗಳ ಮೇಲೆ ಈ ರೀತಿಯ ಸ್ಟಿಕ್ಕರ್ ಕಟ್ಟಿಂಗ್ ಮತ್ತು ಬೇರೆ ಬೇರೆ ರೀತಿಯ ಚಿತ್ರಗಳನ್ನು ಹಾಕಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಈ ರೀತಿಯ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಅಷ್ಟೇ ಅಲ್ಲದೆ ಬೈಕ್ನಲ್ಲಿ ವೀಲಿಂಗ್ ಮತ್ತು ತ್ರಿಬಲ್ ರೈಡಿಂಗ್ ಮತ್ತು ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುವವರಿಗೆ ಮತ್ತು ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದವರ ಗಾಡಿಗಳನ್ನು ಸೀಜ್ ಮಾಡುವ ಎಲ್ಲ ಅಧಿಕಾರಿಗಳನ್ನು ಪೊಲೀಸರು ಹೊಂದಿರುತ್ತಾರೆ !

LEAVE A REPLY

Please enter your comment!
Please enter your name here