2021 ರ ಜನಗಣತಿಗೆ ತಯಾರಿಗಳು ಆರಂಭವಾಗಿದೆ , ಪ್ರಪ್ರಥಮ ಬಾರಿಗೆ ಪ್ರತಿ ಮನೆಯ ಸದಸ್ಯರು ಹೊಂದಿರುವ ಸ್ಮಾರ್ಟ್ಫೋನ್ , ಎಲೆಕ್ಟ್ರಿಕಲ್ ಸಾಮಾಗ್ರಿಗಳು, ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ಸಂಗ್ರಹಿಸಲು ನಿರ್ಧರಿಸಿದೆ. ಹಾಗೂ ಡಿಟಿಎಚ್ ಅಥವಾ ಸಂಪರ್ಕ ಸ್ವಂತ ಮನೆ ಅಥವಾ ಬಾಡಿಗೆ ಮನೆಯೆ ಇಂಟರ್ನೆಟ್ ಸಂಪರ್ಕ , ನೀರಿನ ಬಗ್ಗೆ ಸೌರವಿದ್ಯುತ್ ವಿವರಗಳನ್ನು ಸಂಗ್ರಹಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ 2020 ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಜನಗಣತಿಯ ಮಾಹಿತಿಯನ್ನು ಸಂಗ್ರಹಿಸಲಾಗುವುದು ಒಟ್ಟು 34 ಅಂಶಗಳ ಕುರಿತು ಮಾಹಿತಿಯನ್ನು ಸಂಗ್ರಹಿಸುವುದು, ಗಂಡು ಮತ್ತು ಹೆಣ್ಣು ಎಂಬ ವರ್ಗೀಕರಣ ಇರುವುದಿಲ್ಲ ಎಂದು ತಿಳಿದುಬಂದಿದೆ.
ಈ ರೀತಿಯ ಕ್ರಮಗಳನ್ನು ಇದೇ ಮೊದಲ ಬಾರಿಗೆ ಸರ್ಕಾರ ಜನಗಣತಿಯಲ್ಲಿ ವಿಭಿನ್ನ ಕ್ರಮಗಳನ್ನು ಅನುಸರಿಸುತ್ತಿದೆ. ಜಾತಿಯ ವಿವರಗಳನ್ನು ಸರ್ಕಾರ ಸಂಗ್ರಹಿಸದಿರಲು ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ. 2011ರ ಜನಗಣತಿಯ ವೇಳೆ ಸಂಗ್ರಹಿಸಿದ್ದ ಜಾತಿ ಗಣತಿಯನ್ನು ಇದುವರೆಗೂ ಬಹಿರಂಗಪಡಿಸಿಲ್ಲ , ಅಧಿಕಾರಿಗಳ ಪ್ರಕಾರ ಧರ್ಮ ಜಾತಿ ಉಪಜಾತಿಗಳನ್ನು ಸೇರಿದಂತೆ 40ಲಕ್ಷ ಬಗೆಯ ವಿಧಗಳು ಕಂಡುಬಂದಿದ್ದು ಇಂದಿಗೂ ಸಾಮಾಜಿಕ ನ್ಯಾಯ ಸಚಿವಾಲಯದ ಅಧಿಕಾರಿಗಳು ಮಾಹಿತಿಯ ತಪ್ಪು-ಒಪ್ಪುಗಳನ್ನು ಸರಿಪಡಿಸಲು ಪರೆದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. 2021 ರ ಮಾರ್ಚ್ ಒಂದರಂದು ಜನಗಣತಿಯ ವಿವರಣೆಗಳು ಪ್ರಕಟಣೆ ಗೊಳ್ಳುವುದು ಎಂದು ಸರ್ಕಾರ ತಿಳಿಸಿದೆ.
ಜನರು ಅಯ್ಯೋ ಮೊಬೈಲ್ ಗಳ ಬಗೆಗೆ ಏನು ಮಾಹಿತಿ ಸಂಗ್ರಹಿಸುತ್ತಾರೆ .ಕೇಂದ್ರ ಸರ್ಕಾರದ ಬಗೆಗೆ ಕೆಲವರು ಚಿಂತೆಗೆ ಒಳಗಾದರೆ . 2021 ರಲ್ಲಿ ಭಾರತದಲ್ಲಿ ಜನರಿಗಿಂತ ಒಂದೆರಡು ಪಟ್ಟು ಜಾಸ್ತಿ ಮೊಬೈಲ್ ಸಂಖ್ಯೆಗಳು ಇರಬಹುದು ಎಂದು ಜನರು ಅಂದಾಜು ಹಾಕುತ್ತಿದ್ದಾರೆ.