ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಲವಧು’ ಧಾರಾವಾಹಿಯಲ್ಲಿ ‘ರಚನಾ’ ಪಾತ್ರದಲ್ಲಿ ನಟಿಸುತ್ತಿದ್ದ “ದಿಶಾ ಮದನ್” ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜುಲೈ ೨೭ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ದಿಶಾ ಮದನ್ ಅವರು ಮಗುವಿನ ಫೋಟೋಗೆ ‘Bubba.V’ ಎಂಬ ಟೈಟಲ್ ನೀಡುವ ಮೂಲಕ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.ಇದಕ್ಕೆ ಅವರ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ಹಾಗೂ ಕಾಮೆಂಟ್ ಗಳನ್ನು ವ್ಯಕ್ತಪಡಿಸಿದ್ದಾರೆ.ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸಿಂಗ್ ಸ್ಟಾರ್ ಮನರಂಜನೆ ಕಾರ್ಯಕ್ರಮ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದ ದಿಶಾ ಮದನ್, ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದ ವಿಜೇತರಾದರು. ಬಳಿಕ ಕುಲವಧು ಧಾರಾವಾಹಿಯಲ್ಲಿ ವಚನ ಎಂಬ ನೆಗೆಟಿವ್ ರೋಲ್ನಲ್ಲಿ ನಟಿಸಿ ಧಾರಾವಾಹಿ ಪ್ರೇಕ್ಷಕರಿಗೆ ಚಿರಪರಿಚಿತರಾದರು. ೨೦೧೭ ರಲ್ಲಿ ತಮ್ಮ ಗೆಳೆಯ ಶಶಾಂಕ್ ಅವರೊಡನೆ ಹಸೆಮಣೆ ಏರಿದ ದಿಶಾ ಮದನ್ ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ದಿಶಾ ಅವರ ಮನೆಗೆ ಹೊಸ ಎಂಟ್ರಿ ಆಗಿರುವುದು ಕುಟುಂಬದವರಲ್ಲಿ ಸಂಭ್ರಮದ ಛಾಯೆ ಮೂಡಿಸಿದೆ ಎಂದೇ ಹೇಳಬಹುದು.