1200 ಕೋಟಿ ಕೊಡ್ತೀನಿ ಅಂದ್ರು ತನ್ನ ಮಗಳನ್ನು ಮದುವೆಯಾಗಲು ಯಾರು ಬರುತ್ತಿಲ್ಲ : ಶ್ರೀಮಂತನ ರೋದನೆ ತೀರುವುದು ಯಾವಾಗ.?

0
1579

ತಂದೆ, ಮಗಳ ಸಂಬಂಧವನ್ನು ಬಣ್ಣಿಸಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳು ತಾಯಿಗಿಂತ ತಂದೆಯನ್ನೇ ಹೆಚ್ಚಾಗಿ ಹಚ್ಚಿಕೊಳ್ಳುತ್ತಾರೆ. ಅಂತೆಯೇ ಮಗಳ ಮೇಲೂ ತಂದೆಗೆ ಹೇಳಲಾರದ ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ. ಜೊತೆಗೆ ಮಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ತಾಯಿಗಿಂತ, ತಂದೆಯೇ ಹೆಚ್ಚಾಗಿ ತನ್ನ ಮಗಳಿಗೆ ಸ್ವತಂತ್ರ ನೀಡುತ್ತಾರೆ. ಅದಕ್ಕೇ ಅನಿಸುತ್ತದೆ ಹೆಣ್ಣು ಮಕ್ಕಳು ತನ್ನ ತಂದೆ ಎಂದರೆ ಪ್ರಾಣ ಬಿಡುವುದು.

 

 

ಹೆಣ್ಣು ಮಕ್ಕಳು ಜೀವನದಲ್ಲಿ, ತನ್ನ ಬಾಳ ಸಂಗಾತಿ ಅಥವಾ ಬೇರೆ ಹುಡುಗನ್ನು ಹತ್ತಿರದಿಂದ ನೋಡುವ ಮುಂಚೆ ತನ್ನ ಅಪ್ಪನ ಜೊತೆ ತುಂಬಾ ಕ್ಲೋಸ್ ಆಗಿರುತ್ತಾರೆ. ಅಲ್ಲದೇ  ತನ್ನ ಜೀವನದಲ್ಲಿ ಯಾವುದೇ ವಿಷಯ ನಡೆದರು ತನ್ನ ತಂದೆಯ ಬಳಿ ಸಿದಾ ಸಾದವಾಗಿ ಎಲ್ಲವನ್ನು ಹೇಳಿಕೊಂಡು ಅವರಿಂದ ಟಿಪ್ಸ್ ಗಳನ್ನು ಪಡೆದುಕೊಳ್ಳುತ್ತಾರೆ. ಯಾವ್ದೆ  ಹುಡುಗನನ್ನು ಹತ್ತಿರದಿಂದ ನೋಡುವ ಮುಂಚೆ, ಹೆಣ್ಣು ಮಕ್ಕಳು ತಂದೆ ಎಂಬ ಪುರುಷನನ್ನು ನೋಡುತ್ತಾರೆ. ತನ್ನ ತಂದೆ, ತಮ್ಮನ್ನು ಹೇಗೆ ನೋಡಿಕೊಳ್ಳುತ್ತಾರೆ. ತಮ್ಮನ್ನು ನೋಡಿ ಕೊಳ್ಳುವುದಕ್ಕೆ ಯಾವ ರೀತಿ ಕಷ್ಟ ಪಡುತ್ತಾರೆ ಅನ್ನೋದೆಲ್ಲಾ ನೋಡುತ್ತಾ ಬೆಳೆಯುತ್ತಾರೆ. ಇವೆನೆಲ್ಲಾ ನೋಡಿದ ಮಗಳ ಮೇಲೆ ತಂದೆ ಈ ರೀತಿಯಿಂದ ಪ್ರಭಾವ ಬೀರುತ್ತಾ ಹೋಗುತ್ತಾರೆ.

 

 

ಒಬ್ಬ ತಂದೆ ತಾನು ಬದುಕಿರುವವರೆಗೂ ತನ್ನ ಮಗಳಿಗೆ ಯಾವ ರೀತಿಯ ಕಷ್ಟ ಬರದಂತೆ ನೋಡಿಕೊಳ್ಳುತ್ತಾನೆ. ಅವನಿಗೆ ಅವಳ ಮಗಳೆ ಸರ್ವಸ್ವ, ತನ್ನ ಮಕ್ಕಳ ಸಂತೋಷಕ್ಕಾಗಿ ಏನು ಬೇಕಾದರು ಮಾಡುತ್ತಾನೆ. ತನಗೆ ಎಷ್ಟೆ ಕಷ್ಟಗಳಿದ್ದರು, ಅವುಗಳನ್ನು ಮಗಳಿಗೆ ತೋರಿಸದೆ ಮನೆಯ ರಾಣಿಯಂತೆ ನೋಡಿಕೊಳ್ಳುತ್ತಾರೆ. ಆಕೆಯ ಮದುವೆ ಮಾಡಿ ಒಳ್ಳೆಯ ಕುಟುಂಬ ಸೇರಿಸಲು ಹಗಲು- ರಾತ್ರಿ ಶ್ರಮಿಸುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬರು ತನ್ನ ಮಗಳನ್ನು ಮದುವೆಯಾಗುವುವವನಿಗೆ 1200 ಕೋಟಿ ಕೊಡುತ್ತೇನೆ ಎಂದು ಘೋಷಿಸಿದರು ಯಾರು ಮದುವೆಯಾಗಲು ಮುಂದೆ ಬರುತ್ತಿಲ್ಲ.!

 

ಸಿಸೀಲ್ ಚಾವ್ ಅವರು ಹಾಂಗ್ ಕಾಂಗ್ ನ ಬಿಲಿಯನೇಯರ್ ಅಗಿದ್ದು, ಚೀಕ್ ನಾಂಗ್ ಹೋಲ್ಡಿಂಗ್ಸ್ ಲಿಮಿಟೆಡ್ ನ ಮಾಲೀಕರಾಗಿದ್ದಾರೆ. ಸಾವಿರಾರು ಕೋಟಿಯ ಆಸ್ತಿಯನ್ನು ಹೊಂದಿರುವ ಇವರು, ಹಾಂಗ್ ಕಾಂಗ್ ನ ಟಾಪ್ 10 ಶ್ರೀಮಂತರಲ್ಲಿ ಇವರು ಕೂಡ ಒಬ್ಬರು. ಈ ಶ್ರೀಮಂತನಿಗೆ ಚಾವ್ ಎಂಬ ಮುದ್ಧಾದ ಮಗಳಿದ್ದಾಳೆ. ಆಕೆಗೆ ಒಳ್ಳೆಯ ಹುಡುಗನನ್ನು ಹಡುಕಿ, ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಮದುವೆ ಮಾಡಬೇಕು ಎಂಬುದು ತಂದೆ ಸಿಸೀಲ್ ಚಾವ್ ಅವರ ಆಸೆಯಾಗಿತ್ತು.! ಆದರೆ ತಾವು ಬಯಸಿದ್ದೆ ಒಂದು ಆಗಿದ್ದೆ ಒಂದು, ಸ್ವರ್ಗ ಲೋಕವನ್ನೆ ಧರೆಗಿಳಿಸುವಂತೆ ಮದುವೆ ಮಾಡಬೇಕೆಂದುಕೊಂಡಿದ್ದ ಸಿಸೀಲ್ ಚಾವ್ ಅವರಿಗೆ ಶಾಕಿಂಗ್ ಸುದ್ಧಿ ಕಾದಿತ್ತು.!

 

 

ಅದ್ಧೂರಿಯಾಗಿ ವಿವಾಹ ಮಾಡಬೇಕೆಂದುಕೊಂಡಿದ್ದ ತಂದೆಯ ಬಳಿ ಬಂದ ಗಿಗಿ ಚಾವ್, ಅಪ್ಪ ನಾನು ಲೆಸ್ಬಿಯನ್( ಸಲಿಂಗ ಕಾಮಿ) ನನಗೆ ಹುಡುಗನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನನ್ನ ಸಂಗಾತಿಯನ್ನು ನಾನೆ ಹುಡುಕಿ ಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ತಂದೆ ಸಿಸೀಲ್ ಚಾವ್ ತತ್ತರಿಸಿ ಹೋಗುತ್ತಾರೆ. ಈ ವಿಚಾರ ಎಲ್ಲೆಡೆ ಹರಡುತ್ತದೆ. ಆದರೆ ತನ್ನ ಮಗಳು ಚೆನ್ನಾಗಿ ಇರಬೇಕು, ವಿವಾಹ ಮಾಡಬೇಕು ಎಂದು ಆಸೆಯನ್ನು ಹೊಂದಿದ್ದ ಅವರು, ನನ್ನ ಮಗಳನ್ನು ವಿವಾಹವಾಗುವ ವರನಿಗೆ 400 ಕೋಟಿ ಕೊಡುತ್ತೇನೆ ಎಂದು ಘೋಷಿಸುತ್ತಾರೆ.

 

 

ಹೀಗೆ 400 ಕೋಟಿ ಕೊಡುತ್ತೇನೆ ಎಂದು ಘೋಷಿಸಿದರು, ಯಾರು ಕೂಡ ಮದುವೆಯಾಗಲು ಮುಂದೆ ಬರುವುದಿಲ್ಲ. ನಂತರ ಬಂಪರ್ ಆಫರ್ ನೀಡಿದ ಸಿಸೀಲ್ ಚಾವ್ 1200 ಕೋಟಿ ಕೊಡುತ್ತೇನೆ ಎಂದು ಘೋಷಿಸುತ್ತಾರೆ. ಯಾವುದಾದರು ಹುಡುಗ ತನ್ನ ಮಗಳನ್ನು ಮದುವೆಯಾದರೆ ಆಕೆಯ ಮನಸ್ಸು ಮತ್ತು ಆಲೋಚನೆಗಳು ಬದಲಾಗಿ ಮತ್ತೆ ಹುಡುಗಿಯಂತಾಗಬಹುದು ಎಂಬುದು ಅವರ ಆಶಯ.

 

 

ಸಿಸೀಲ್ ಚಾವ್ ಎಷ್ಟೇ ಪ್ರಯತ್ನ ಪಟ್ಟರು ಅವರ ಮಗಳನ್ನು ಮದುವೆಯಾಗಲು ಯಾರು ಮುಂದೇ ಬಂದಿಲ್ಲ. ಇದರ ಮಧ್ಯೆ ಗಿಗಿ ಚಾವ್ ತನ್ನ ತಂದೆಗೆ ಪತ್ರವನ್ನು ಬರೆಯುತ್ತಾಳೆ. ಪತ್ರದಲ್ಲಿ `ಅಪ್ಪ ನಾನು ಲೆಸ್ಬಿಯನ್ ಅನ್ನುವದನ್ನು ನೀವೂ ಒಪ್ಪಿಕೊಳ್ಳಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ತಂದೆ ಸಿಸೀಲ್ ಮಾತ್ರ ತನ್ನ ಮಗಳಿಗೆ ವರವನ್ನು ಹುಡುಕುವ ಕಾರ್ಯವನ್ನು ಮಾತ್ರ ಇನ್ನೂ ಬಿಟ್ಟಿಲ್ಲ. ವಿಪರ್ಯಾಸವೆಂದರೆ ಈಗಲೂ ಕೂಡ ಆ ಪ್ರಯತ್ನದಲ್ಲೇ ಇದ್ದಾರೆ.!

LEAVE A REPLY

Please enter your comment!
Please enter your name here