ಪಾಪಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ , ಭಾರತೀಯ ಯೋಧ ಹುತಾತ್ಮ

0
111

ಮಂಗಳವಾರ ಸುಂದರ್ ಬಾನಿ ವಲಯದಲ್ಲಿ ಪಾಕಿಸ್ತಾನ ಸೈನಿಕರಿಂದ ಕದನ ವಿರಾಮವನ್ನು ಉಲ್ಲಂಘಿಸಿದ್ದು ಭಾರತೀಯ ಸೇನೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಪಾಕ್ ತಂಗಧರ್ ಮತ್ತು ಕೆರಾನ್ ವಲಯಗಳಲ್ಲಿಯೂ ಕದನವಿರಮಾ ಉಲ್ಲಂಘಿಸಿದ್ದು ಭಾರತೀಯ ಸೇನೆಯು ಇಬ್ಬರು ಪಾಕ್ ಸೈನಿಕರನ್ನು ಹತ್ಯೆ ಮಾಡಿದೆ .
ಪಾಕ್ ನಿರಂತರವಾಗಿ ದಾಳಿ ಮಾಡುತ್ತದೆ ಬಾಲಾಕೋಟ್ ದಾಳಿಯ ಬಳಿಕ ಪಾಕ್ ಅಟ್ಟಹಾಸ ಹೆಚ್ಚಾಗಿದೆ ಭಾನುವಾರ ಪೂಂಚ್ ನ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಹಳ್ಳಿಗಳಲ್ಲಿ ನಡೆದ ಗುಂಡಿನ ದಾಳಿಗೆ ಮಹಿಳೆ 15 ತಿಂಗಳು ಮಗು ಸೇರಿ ಮೂವರು ಮೃತಪಟ್ಟಿದ್ದಾರೆ.

ಪಾಕ್ ನಿಂದ ಗಡಿಭಾಗದಲ್ಲಿನ ಜನರು ರೋಧಿಸುತ್ತಿರುವ ಸ್ಥಿತಿ ಮುಂದುವರೆಯುತ್ತಲೇ ಇದೆ. ಭಾರತೀಯ ಸೈನಿಕರ ಪರೀಕ್ಷೆಯಂತಾಗಿದೆ .
ದಾಳಿಗೆ ಪ್ರತಿ ದಾರಿಗಳು ಭಾರತೀಯ ಸೇನೆ ನಡೆಸಿದರು ದುಷ್ಕೃತ್ಯಕ್ಕೆ ಕೊನೆಯಿಲ್ಲದಂತಾಗಿದೆ. ಉಗ್ರರ ಪೋಷಣೆಯ ಜೊತೆಗೆ ಪಾಕ್ ಭಾರತಕ್ಕೆ ಮಾರಿ ಯಾಗಿದ್ದು ಮುಂದೊಂದು ದಿನ ಜಗತ್ತಿಗೆ ಕಂಟಕವಾಗುವ ದಿನ ಸಮೀಪದಲ್ಲೇ ಇರಬಹುದು.

ತಮ್ಮ ಸ್ವಾರ್ಥಕ್ಕಾಗಿ ಪರರನ್ನು ಕೊಲ್ಲುವ ಕೃತ್ಯವನ್ನು ತಡೆಯಲು ಇನ್ನು ಸಾಧ್ಯವಾಗದೇ ಇರುವುದು ಅಸಾಯಕತೆಯ ಪರಿಸ್ಥಿತಿಯಂತೆ ಕಾಣುತ್ತದೆ. ಪ್ರತಿಬಾರಿಯೂ ರಾಷ್ಟ್ರೀಯ ನಾಯಕರ ಭರವಸೆ ಹುಸಿಯಾಗುವುದು ನಾಡಿಗಾಗಿ ಸೇವೆಸಲ್ಲಿಸುವ ಸೈನಿಕರ ಮನೆಮಂದಿ ಎಲ್ಲರಿಗೂ ಸದಾ ನೋವಿನ ಔತಣಗಳಿಗೆ ಭಾರತೀಯ ವ್ಯವಸ್ಥೆಯೆ ಕಾರಣವಾ !ಎನ್ನುವ ಅನುಮಾನ ಕಾಡುತ್ತದೆ .

LEAVE A REPLY

Please enter your comment!
Please enter your name here