ಆರೋಗ್ಯ ವೃದ್ಧಿಗಾಗಿ ಬಳಸಿ ಕ್ಯಾಪ್ಸಿಕಂ.!

0
289

ದಿನನಿತ್ಯದ ಕೆಲಸದ ಒತ್ತಡಗಳಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೇ ಇಲ್ಲ.! ಕೆಲಸದ ಒತ್ತಡದಲ್ಲಿ ನಾವು ಮನೆ ಊಟ ಸೇವಿಸುವ ಬದಲು ಹೆಚ್ಚು ಹೋಟೆಲ್ ಊಟಗಳನ್ನು ಸೇವನೆ ಮಾಡಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಹಣವನ್ನು ನಾವೇ ಕೊಟ್ಟು ಆರೋಗ್ಯಕ್ಕೆ ಲಾಭಾಂಶ ಇಲ್ಲದಿರುವ ಪದಾರ್ಥಗಳನ್ನು ಸೇವಿಸಿ,ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ವೈದ್ಯರು ಹೇಳುವ ಪ್ರಕಾರ ಹಣ್ಣು-ಹಂಪಲು,ತರಕಾರಿ ಸೇವನೆ ದೇಹಕ್ಕೆ ಹೆಚ್ಚು ಪೋಷಕಾಂಶಗಳು, ವಿಟಮಿನ್, ಖನಿಜಾಂಶ ಒದಗಿಸುತ್ತದೆ.
ದಿನನಿತ್ಯದ ಅಡುಗೆಯಲ್ಲಿ ಕ್ಯಾಪ್ಸಿಕಂ ಬಳಸುವುದರಿಂದ
ದೇಹಕ್ಕೆ ಸಾಕಷ್ಟು ಲಾಭವನ್ನು ನೀಡುತ್ತದೆ. ಕ್ಯಾಪ್ಸಿಕಂ’ನಲ್ಲಿ ಕಬ್ಬಿಣಾಂಶ ಹೆಚ್ಚಿದ್ಧು, ಮಾರುಕಟ್ಟೆಯಲ್ಲಿ ಅಗ್ಗವಾಗಿ ದೊರೆಯಲಿದೆ. ಕ್ಯಾಪ್ಸಿಕಂ ತರಕಾರಿಯಿಂದ ದೇಹಕ್ಕೆ ಸಿಗುವ ಅನೇಕ ಲಾಭಗಳು ನಮ್ಮ ಜನಕ್ಕೆ ತಿಳಿದೇ ಇಲ್ಲ.! ಆರೋಗ್ಯಕ್ಕೆ ಸಿಗುವ ಹಲವು ಉಪಯುಕ್ತ ಅಂಶಗಳು ಇಲ್ಲಿವೆ ನೋಡಿ,
೧. ದಪ್ಪ ಮೆಣಸಿನಕಾಯಿ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಲ್ಲ ಸಾಮರ್ಥ್ಯವನ್ನು ಹೊಂದಿದೆ. ದಿನನಿತ್ಯದ ಅಡುಗೆಯಲ್ಲಿ ಕ್ಯಾಪ್ಸಿಕಂ ಬಳಸುವುದರಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಸಹಕಾರಿಯಾಗಲಿದೆ.

೨.ದಪ್ಪ ಮೆಣಸಿನಕಾಯಿಯಲ್ಲಿ ಕೊಬ್ಬಿನಾಂಶ ಕಡಿಮೆ ಇರುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭದಾಯಕ.

೩.ಇದರಲ್ಲಿ ಪೋಷಕಾಂಶಗಳು ಹೆಚ್ಚಿರುವ ಕಾರಣ ದೇಹದ ಹಲವು ಕಾಯಿಲೆಗಳನ್ನು ನಿವಾರಿಸುವಲ್ಲಿ ಪ್ರಮುಖವಾಗಿದೆ.

೪. ಕ್ಯಾಪ್ಸಿಕಂ’ನಲ್ಲಿ ವಿಟಮಿನ್ ಎ, ಸಿ ಮತ್ತು ಫೈಬರ್ ಅಂಶಗಳು ಹೆಚ್ಚಿರುತ್ತದೆ. ಜೊತೆಗೆ ಇದನ್ನು ಜ್ಯೂಸ್ ರೂಪದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭ ದೊರೆಯುತ್ತದೆ.

೫.ದಪ್ಪ ಮೆಣಸಿನಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಿರುವ ಕಾರಣ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ.

೬.ದಪ್ಪ ಮೆಣಸಿನಕಾಯಿಯನ್ನು ದಿನನಿತ್ಯ ಸೇವನೆ ಮಾಡಿದ್ದಲ್ಲಿ, ಯಾವ ರೀತಿಯ ಕ್ಯಾನ್ಸರ್ ರೋಗವನ್ನು ಕೂಡ ತಡೆಗಟ್ಟುವ ಶಕ್ತಿ ಇದಕ್ಕೆ ಇದೆ.

೭. ದೇಹದ ತೂಕವನ್ನು ಇಳಿಸಲು ದಪ್ಪ-ಮೆಣಸಿನಕಾಯಿ ಹೆಚ್ಚು ಸಹಕಾರಿ. ಯಾಕೆಂದರೆ ಇದರಲ್ಲಿ ಕ್ಯಾಲೊರಿ ಅಂಶ ಕಡಿಮೆ ಇರುತ್ತದೆ. ಜೊತೆಗೆ ದಿನನಿತ್ಯ ಕ್ಯಾಪ್ಸಿಕಂ ಉಪಯೋಗಿಸುವುದರಿಂದ ಜೀರ್ಣಕ್ರಿಯೆ ಕೂಡ ಸುಗಮವಾಗಲಿದೆ.

LEAVE A REPLY

Please enter your comment!
Please enter your name here