ದಿನಸಿ ಮಳಿಗೆಯಾಗಿ ಪರಿವರ್ತನೆಗೊಳ್ಳುತ್ತಿದೆ ಕೆಫೆ ಕಾಫಿ ಡೇ

0
387

ಕಾಫಿ ಕಿಂಗ್ ದಿವಂಗತ ಸಿದ್ಧಾರ್ಥ ಅವರ ಕನಸಿನ ಕೂಸು ಕೆಫೆ ಕಾಫಿ ಡೇ ‘ಕಾಫಿ ಡೇ ಎಸೆನ್ಶಿಯಲ್ಸ್‌’ (ದಿನಸಿ ಮಾರಾಟ) ಮಳಿಗೆಗಳಾಗಿ ಬದಲಾಗುತ್ತಿದೆ. ಕಾಫಿ ಡೇ ಎಂಟರ್‌ಪ್ರೈಸಸ್‌ ಆರ್ಥಿಕ ಸಂಕಷ್ಟದಲ್ಲಿದ್ದು, ವ್ಯಾಪಾರವಿಲ್ಲದ ಕೆಫೆ ಕಾಫಿ ಡೇಗಳನ್ನು ಕಾಫಿ ಡೇ ಎಸೆನ್ಶಿಯಲ್ಸ್‌ ಆಗಿ ಪರಿವರ್ತಿಸುವತ್ತ ಗಮನ ಹರಿಸಿದೆ.

 

 

ಸಿದ್ಧಾರ್ಥ ಅವರ ನಿಧನದ ನಂತರ ಪತ್ನಿ ಮಾಳವಿಕಾ ಸಿದ್ಧಾರ್ಥ ಕಾಫಿ ಡೇ ಎಂಟರ್‌ಪ್ರೈಸಸ್‌ನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜಪಾನ್‌ನ ಖ್ಯಾತ ಕಂಪೆನಿಯೊಂದರ ಜೊತೆ ಸೇರಿ ಕೆಫೆ ಕಾಫಿ ಡೇ ಯನ್ನು ದಿನಸಿ ಮಳಿಗೆಯಾಗಿ ಬದಲಾಯಿಸುತ್ತಿದ್ದಾರೆ. ಕೆಲವೆಡೆ ಈಗಾಗಲೇ ಕೆಫೆಗಳನ್ನು ಪರಿವರ್ತಿಸಲಾಗಿದೆ.

 

 

ವ್ಯಾಪಾರ ಹಾಗೂ ಲಾಭ ಇಲ್ಲದ ಕಾಫಿ ಡೇ ಕೆಫೆಗಳನ್ನು ಕಾಫಿ ಡೇ ಎಸೆನ್ಶಿಯಲ್‌ ಮಳಿಗೆಗಳಾಗಿ ಪರಿವರ್ತಿಸಲಾಗುತ್ತಿದೆ. ಎರಡೂ ಕಂಪನಿಗಳದ್ದು ಶೇ 50:50 ಪಾಲುದಾರಿಕೆ ಇದೆ. ಬೆಂಗಳೂರಿನಲ್ಲಿ ಮೂರು ಕಡೆ ಮಳಿಗೆಗಳು ಆರಂಭವಾಗಿವೆ. ಮಳಿಗೆಗಳಲ್ಲಿ ದಿನಸಿ, ಪೇಯ ಇತ್ಯಾದಿ ಲಭ್ಯವಾಗಲಿವೆ.

 

 

ಉದ್ದಿಮೆ ಆರ್ಥಿಕ ಸಂಕಷ್ಟದಲ್ಲಿದೆ. ಕಾಫಿ ಡೇ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಘಟಾನುಘಟಿ ಉದ್ಯಮಿಗಳೊಂದಿಗೆ ಮಾತುಕತೆಯೂ ನಡೆದಿದೆ. ಸಿದ್ಧಾರ್ಥ ಒಡೆತನದ ಕಾಫಿಯೇತರ ಕಂಪನಿಗಳನ್ನು ಕೈಬಿಟ್ಟು ಅಥವಾ ಮಾರಾಟ ಮಾಡಿ, ಕಾಫಿ ಉದ್ದಿಮೆ ಮಾತ್ರ ನಡೆಸುವ ಚಿಂತನೆ ನಡೆದಿದೆ. ಬೆಳೆಗಾರರ ಬಾಕಿ ಪಾವತಿಸುವ ಬಗ್ಗೆಯೂ ಚರ್ಚೆ ನಡೆದಿದೆ.

ಚಿಕ್ಕಮಗಳೂರಿನ ಕಾಫಿ ಡೇ ಗ್ಲೋಬಲ್‌ ಘಟಕ (ಎಬಿಸಿ- ಅಮಾಲ್ಗಮೇಟೆಡ್‌ ಬೀನ್‌ ಕಂಪನಿ) ಸದ್ಯಕ್ಕೆ ಕಾಫಿ ಖರೀದಿಸುತ್ತಿಲ್ಲ. ಕಾಫಿ ಬೆಳೆಗಾರರಿಗೆ ನೀಡಬೇಕಿದ್ದ ಬಾಕಿಯನ್ನು ತೀರಿಸುವ ಕಾರ್ಯಗಳು ಭರದಿಂದ ಸಾಗುತ್ತಿದೆ. ಎಬಿಸಿ ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಕೆಫೆ ಕಾಫಿ ಡೇ ಸೇರಿ ಸಿದ್ಧಾರ್ಥ ಒಡೆತನದ ಸಂಸ್ಥೆಗಳು ನಷ್ಟಕ್ಕೆ ಸಿಲುಕಿದ್ದವು ಇದರಿಂದ ಮನನೊಂದಿದ್ದ ಸಿದ್ಧಾರ್ಥ ಜುಲೈನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

LEAVE A REPLY

Please enter your comment!
Please enter your name here