ಸಚಿವ ಸ್ಥಾನಕ್ಕೆ ಸಿಟಿ ರವಿ ರಾಜೀನಾಮೆ: ಖಾಲಿ ಸ್ಥಾನಕ್ಕಾಗಿ ಆಕಾಂಕ್ಷಿಗಳಿಂದ ಲಾಭಿ ಶುರು

0
104

ಬೆಂಗಳೂರು: ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ, ಪಕ್ಷದ ʼಒಬ್ಬರಿಗೆ ಒಂದು ಹುದ್ದೆʼ ನೀತಿಯಂತೆ ಸಿ ಟಿ ರವಿ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅದರೆ ಸಿ.ಟಿ ರವಿ ರಾಜೀನಾಮೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇನ್ನೂ ಅಂಗೀಕಾರ ಮಾಡಿಲ್ಲ.

ಪೂರ್ವ ನಿಶ್ಚಯದಂತೆ ರಾಜೀನಾಮೆ ಕೊಟ್ಟಿದ್ದೇನೆ

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆ ದೃಷ್ಟಿಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಇದು ಪೂರ್ವ ನಿಶ್ಚಯದಂತೆ ಕೊಟ್ಟ ರಾಜೀನಾಮೆ. ಇನ್ನು ಮುಂದಿನ ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದು. ಸಿಎಂ ಗೆ ನಿನ್ನೆ ರಾಜೀನಾಮೆ ಕೊಟ್ಟಿದ್ದೇನೆ. ವರಿಷ್ಠರ ಜತೆ ಚರ್ಚೆ ಮಾಡಿ ರಾಜೀನಾಮೆ ಸ್ವೀಕಾರ ಬಗ್ಗೆ ತಿಳಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ.‌ ಹೊಣೆ ಹೊತ್ಕೊಂಡ ಮೇಲೆ ಸಂಘಟನೆಗೆ ಹೆಚ್ಚಿನ ಸಮಯ ಕೊಡಬೇಕಾಗುತ್ತದೆ ಎಂದು ತಿಳಿಸಿದರು.

ಸುಂದರ ಹುಡುಗಿಯನ್ನು ಮದುವೆಯಾಗಬೇಕು ಎಂದು ಬಹಳ ಜನ ಬಯಸ್ತಾರೆ

ಆರ್ ಆರ್ ನಗರ ಚುನಾವಣಾ ಟಿಕೇಟ್ ಗೊಂದಲ ವಿಚಾರ ಕುರಿತು ಮಾತನಾಡಿದ ಅವರು, ಯಾವುದೇ ಗೊಂದಲ ಇಲ್ಲ, ಯಾರು ಗೊಂದಲ ಮಾಡಿದ್ದಾರೆ? ರಾಜಕೀಯ ಪಕ್ಷ ಅಂದರೆ ಆಕಾಂಕ್ಷಿಗಳು ಇರೋದು ಸಹಜ. ಸುಂದರ ಹುಡುಗಿಯನ್ನು ಮದುವೆಯಾಗಬೇಕು ಅಂತ ಬಹಳ ಜನ ಬಯಸ್ತಾರೆ. ಆದರೆ ಎಲ್ಲರೂ ಮದುವೆಯಾಗುವುದಕ್ಕೆ ಆಗತ್ತಾ?ಯಾರೊ ಒಬ್ಬರು ಕೈ ಹಿಡಿತಾರೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಇನ್ನೂ ಅಭ್ಯರ್ಥಿ ಆಯ್ಕೆ ಆಗಿಲ್ಲ

ಇನ್ನು ಶಿರಾ ಚುನಾವಣೆಯದ್ದೂ ಇನ್ನೂ ಹಂಚಿಕೆಯಾಗಿಲ್ಲ. ಯಾವ ಅಭ್ಯರ್ಥಿಯೂ ಇದುವರೆಗೆ ನಿಶ್ಚಯ ಆಗಿಲ್ಲ. ಮುಂದೆ ಮಸ್ಕಿ ಚುನಾವಣೆಯೂ ಬರಬಹುದು. ಆದರೆ ಎಲ್ಲಿಯೂ ಅಭ್ಯರ್ಥಿ ಯಾರೂ ಅಂತ ನಿಶ್ಚಯ ಆಗಿಲ್ಲ. ರಾಜ್ಯಾಧ್ಯಕ್ಷರಾಗಲಿ, ಸಿಎಂ ಆಗಲಿ, ಪಕ್ಷದ ವರಿಷ್ಟರಾಗಲಿ ಇದುವರೆಗೆ ಇವರೇ ಅಭ್ಯರ್ಥಿ ಅಂತ ಹೇಳಿಲ್ಲ ಎಂದು ಮಾಹಿತಿ ನೀಡಿದರು.

ಡ್ರ’ಗ್ಸ್ ವಿಚಾರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವ್ರಿಗೆ ತಿರುಗೇಟು ನೀಡಿದ ಸಿಟಿ ರವಿ, ಮಾಧ್ಯಮದಲ್ಲಿ ಕೆಲವು ಅಧಿಕೃತ ಸುದ್ದಿ, ಕೆಲವು ಅನಧಿಕೃತ ಸುದ್ದಿ ಬರುತ್ತಲೇ ಇರುತ್ತದೆ. ಅಧಿಕೃತ ಸುದ್ದಿಗೆ ಪ್ರತಿಕ್ರಿಯಿಸಬೇಕಾದ್ದು ಧರ್ಮ. ಅನಧಿಕೃತ ಸುದ್ದಿಗೆ ಪ್ರತಿಕ್ರಿಯೆ ನೀಡಬೇಕಾ ಎನ್ನೋದು ಮಾಜಿ ಸಿಎಂಗೆ ಗೊತ್ತಿರಬೇಕು.‌ ಅನಧಿಕೃತ ಸುದ್ದಿಗೆ ಬಹಳ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಋಷಿ ಮೂಲ ಕೆದಕಬಾರದು, ನದಿ ಮೂಲ ಹುಡುಕಬಾರದು. ಹೆಣ್ಣಿನ ಮೂಲವನ್ನೂ ಅರಿಯೋದಕ್ಕೆ ಆಗಲ್ಲ. ಹಾಗೆಯೇ ಸುದ್ದಿಮೂಲವನ್ನೂ ಕೆದಕಬಾರದು ಅನ್ನೋದ ಹೊಸ ಸೇರ್ಪಡೆ. ಕೆದಕಿಕೊಂಡು ಹೋಗುವ ಕೆಲಸ ಮಾಡಬಾರದು. ಸುಮ್ಮನೆ ಯಾಕೆ ಸುದ್ದಿ ಮೂಲ ಹುಡುಕುತ್ತ ಸಮಯ ಶ್ರಮ ವ್ಯರ್ಥ ಮಾಡಬಾರದು. ಕೆಲವೊಮ್ಮೆ ಮಾಧ್ಯಮಗಳ ಸಾರ್ವಭೌಮತ್ಯವನ್ನು ಪ್ರಶ್ನೆ ಮಾಡೋದಕ್ಕಾಗಲ್ಲ ಎಂದು ತಿಳಿಸಿದರು.

ಸಿ ಟಿ ರವಿ ಕನ್ನಡ, ಸಂಸ್ಕೃತಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಸಿ ಟಿ ರವಿ ಸಮುದಾಯದ ಪ್ರೀತಂ ಗೌಡ ಹಾಗೂ ಯೋಗೀಶ್ವರ್ ನಡುವೆ ಜೋರಾಗಿದೆ ಲಾಬಿ ಶುರುವಾಗಿದೆ. ಪ್ರೀತಂ ಗೌಡ ಹಾಸನ ಶಾಸಕ ಜೊತೆಗೆ ಚಿಕ್ಕಮಗಳೂರು ಜೊತೆ ಉತ್ತಮ ಬಾಂಧವ್ಯ ಇದೆ. ಹಾಗಾಗಿ ಖಾಲಿಯಾಗುವ ಸಿ.ಟಿ. ರವಿ ಸ್ಥಾನವನ್ನೂ ತಮಗೆ ನೀಡಿ ಎಂದು ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here