ಉಪ ಚುನಾವಣೆ ಹಿನ್ನೆಲೆ ಹೈ ಅಲರ್ಟ್: 144 ಸೆಕ್ಷನ್ ಜಾರಿ, ಮದ್ಯ ನಿಷೇಧ

0
57

ಬೆಂಗಳೂರು: ಆರ್ ಆರ್ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಹಿನ್ನಲೆಯಲ್ಲಿ ಮಧ್ಯ ನಿಷೇಧಿಸಿ, 144 ಸೆಕ್ಷನ್ ನ್ನು ಜಾರಿ ಮಾಡಲಾಗಿದೆ. ಇಂದು ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧ ಮಾಡುವುದರ ಜೊತೆಗೆ 4ನೇ ತಾರೀಖಿನವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹೊರಗಡೆಯಿಂದ ಬಂದವರು ಕ್ಷೇತ್ರದಲ್ಲಿ ಇರಬಾರದು. ಯಾರಾದರೂ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಚುನಾವಣೆ ಹಿನ್ನಲೆಯಲ್ಲಿ ಎಲ್ಲೆಡೆ ಸಂಪೂರ್ಣ ಬಂದೋಬಸ್ತ್ ಮಾಡಲಾಗಿದೆ.

ಹೇಗಿದೆ ಸಿದ್ದತೆ..?

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭಿಗಿ ಬಂದೋಬಸ್ತ್ ನ್ನು ಮಾಡಲಾಗಿದೆ. ಭದ್ರತೆ 2563 ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆರ್ ಆರ್ ನಗರ ಸೂಕ್ಷ್ಮ ಕ್ಷೇತ್ರವಾಗಿರುವುದರಿಂದ ಅತಿ ಹೆಚ್ಚು ಬಂದೋಬಸ್ತ್ ಕಲ್ಪಿಸಲಾಗುತ್ತಿದೆ. ಮೊಬೈಲ್ ಸ್ಕ್ವಾಡ್ ನಿಯೋಜನೆ ಮಾಡಲಾಗಿದ್ದು, ಎಲ್ಲಾ ಬೂತ್ ಗಳಿಗೆ ತೆರಳಿ ಸೂಪರ್ ವೈಸ್ ಕೆಲಸವನ್ನು ಅವರು ಮಾಡುತ್ತಾರೆ.

ಇನ್ನು ಕಾನೂನು ಸುವ್ಯವಸ್ಥೆ ಸಲುವಾಗಿ 36 ಪಿಎಸ್ಐಗಳನ್ನು ನೇಮಕ ಮಾಡಲಾಗಿದೆ. 21 ಮಂದಿ ಇನ್ಸ್ಪೆಕ್ಟರ್ಗಳನ್ನು ನೇಮಿಸಲಾಗಿದೆ. ಮೂರು ಕಂಪನಿ 3 ಸಿ ಆರ್ ಪಿ ಎಫ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 19 ಕೆ ಎಸ್ ಆರ್ ಪಿ ತುಕಡಿಯನ್ನು, 20 ಸಿಎಆರ್ ತುಕಡಿಯನ್ನು ನಿಯೋಜಿಸಲಾಗಿದೆ. ಅಲ್ಲದೇ 32 ಹೊಯ್ಸಳ ವಾಹನಗಳು, 91 ಚೀತಾ ವಾಹನಗಳನ್ನು ನಿಯೋಜನೆ ಮಾಡಲಾಗಿದೆ.

ಇನ್ನು, ಒಟ್ಟು 678 ಮತಗಟ್ಟೆಗಳಿದ್ದು, 82 ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಇಲ್ಲಿ 3 ಡಿಸಿಪಿ, 8 ಎಸಿಪಿಗಳು, 30 ಜನ ಇನ್ಸ್ಪೆಕ್ಟರ್ಗಳನ್ನು ಈಗಾಗಲೇ ಆರ್ ಆರ್ ನಗರದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ದಾಖಲಾದ ಪ್ರಕರಣಗಳೆಷ್ಟು..?

ಇಲ್ಲಿಯವರೆಗೂ ಚುನಾವಣೆ ಸಂಬಂಧ ರಕ್ಷಣಾ ನಿಯಮ ಉಲ್ಲಂಘನೆ 174 ಕೇಸ್, 12 ಅಬಕಾರಿ ಕೇಸ್, 13 ಎಫ್ ಐಆರ್, ಕೇಸ್ ಮತ್ತು 41 ಎನ್ ಸಿ ಆರ್ ಪ್ರಕರಣ ದಾಖಲಾಗಿದೆ.

ಸೋಂಕಿತರಿಗೂ ಮತದಾನಕ್ಕೆ ಅವಕಾಶ

ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರಗಳಿಗೆ ಚುನಾವಣೆ ಇರುವ ಹಿನ್ನಲೆಯಲ್ಲಿ ಆ ಕ್ಷೇತ್ರದ ಕೋವಿಡ್19 ಸೋಂಕಿತರಿಗೆ ಮತದಾನಕ್ಕೆ ಅವಕಾಶವಿದೆ. ಸಂಜೆ 5 ರಿಂದ 6 ರ ವರೆಗೆ ಅವಕಾಶ ಮಾಡಿಕೊಟ್ಟಿದ್ದು, ಆಸ್ಪತ್ರೆಯಲ್ಲಿ ಇದ್ದವರಿಗೆ ಹಾಗೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ ಮತ ಗಟ್ಟೆಗೆ ಆಗಮಿಸಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

LEAVE A REPLY

Please enter your comment!
Please enter your name here