ನಟಿ ಇಶಾ ಗುಪ್ತಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಉದ್ಯಮಿ

0
291

ಹೋಟೆಲ್ ಮಾಲೀಕರೊಬ್ಬರು ನನ್ನನ್ನು ಕಣ್ಣಲ್ಲೆ ರೇಪ್ ಮಾಡುವಂತೆ ಕಾಮುಕ ಕಣ್ಣುಗಳಿಂದ ನೋಡುತ್ತಿದ್ದರು ಎಂದು ಆರೋಪಿಸಿದ್ದ ಬಾಲಿವುಡ್ ನಟಿ ಇಶಾ ಗುಪ್ತಾ ವಿರುದ್ಧ ಉದ್ಯಮಿ ಕ್ರಿಮಿನಲ್ ಮಾನಹಾನಿ ಕೇಸ್ ದಾಖಲಿಸಿದ್ದಾರೆ.
ಹೋಟೆಲ್ ಉದ್ಯಮಿ ರೋಹಿತ್ ವಿಗ್ ಅವರು ತಮ್ಮ ವಕೀಲ ವಿಕಾಸ್ ಪಹ್ವಾರ್ ಅವರ ಮೂಲಕ ಇಶಾ ಗುಪ್ತಾ ಅವರ ವಿರುದ್ಧ ಸಾಕೇತ್ ಕೋರ್ಟ್ ನಲ್ಲಿ ಕ್ರಿಮಿನಲ್ ಮಾನಹಾನಿ ಕೇಸ್ ದಾಖಲಿಸಿದ್ದಾರೆ. ಕೋರ್ಟ್ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 28ಕ್ಕೆ ನಿಗದಿಪಡಿಸಿದೆ.
ನಟಿಯ ಆರೋಪದಿಂದಾಗಿ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದ ನಿತ್ಯ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ. ಇದರಿಂದ ನನ್ನ ಮತ್ತು ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರೋಹಿತ್ ವಿಗ್ ಅವರು ಕೋರಿದ್ದಾರೆ.
ಇತ್ತೀಚಿಗಷ್ಟೇ ಇಶಾ ಗುಪ್ತಾ ಅವರು, ರೆಸ್ಟೋರೆಂಟ್ ಮಾಲೀಕ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡರು ಎಂದು ಸಾಮಾಜಿಕ ಜಾಲತಾಣದಲ್ಲಿ ದುಖಃ ತೋಡಿಕೊಂಡಿದ್ದರು.
ರೋಹಿತ್ ಕಣ್ಣುಗಳಲ್ಲಿಯೇ ನನ್ನನ್ನು ಅತ್ಯಾಚಾರವೆಸಗಿದ್ದಾನೆ. ಅಂತಹ ಕೆಟ್ಟ ಅನುಭವ ನನಗೆ ಆಗಿದೆ. ಇದನ್ನು ನಾನು ರೇಪ್ ಎಂದೇ ಹೇಳಲು ಬಯಸುತ್ತೇನೆ. ಅವರು ನನ್ನ ಜೊತೆ ನಡೆದುಕೊಂಡಿದ್ದು ನನಗೆ ಕ್ರೂರವಾಗಿ ಕಂಡಿತು. ಒಂದು ಕ್ಷಣ ನನಗೆ ಅಭದ್ರತೆ ಕಾಡಿತು ಎಂದು ಇಶಾ ಟ್ವೀಟ್ ಮಾಡಿದ್ದರು.

LEAVE A REPLY

Please enter your comment!
Please enter your name here