ಪ್ರಪಂಚದ ದುಬಾರಿ ಆಂಟಿಕ್ ಕಳ್ಳರೆಲ್ಲ ಬುದ್ಧನ ಹಲ್ಲಿನ ಹಿಂದೆ ಬಿದ್ದಿದ್ಯಾಕೆ..?

0
199

ನಿಮ್ಮಗೆಲ್ಲಾ ಬುದ್ಧನ ಬಗ್ಗೆ ಚೆನ್ನಾಗಿಯೇ ಗೊತ್ತು. ಆದರೆ ಆತನ ಹಲ್ಲಿನ ಹಿಂದೆ ಇರುವ ರೋಚಕ ಕಥೆಯ ಬಗ್ಗೆ ನಿಮಗೆ ತಿಳಿದಿಲ್ಲ. ಇವತ್ತು ಭೂಗತ ಜಗತ್ತಿನಲ್ಲಿ ಭಾರಿ ಬೇಡಿಕೆಯಲ್ಲಿರುವಂತಹ ಆಂಟಿಕ್ ವಸ್ತು ಅಂದರೆ ಅದು ಬುದ್ಧನ ಹಲ್ಲು. ಇವತ್ತು ಕುಖ್ಯಾತ ಅಂತರರಾಷ್ಟ್ರೀಯ ಆಂಟಿಕ್ ಕಳ್ಳರ ಕೆಂಗಣ್ಣು ಈ ಬುದ್ಧನ ಹಲ್ಲಿನ ಮೇಲೆ ಇದೆ. ಅಷ್ಟಕ್ಕೂ ಏನಿದು ಬುದ್ಧನ ಹಲ್ಲಿನ ಕಥೆ ಗೊತ್ತಾ..?
ಶ್ರೀಲಂಕದ ಕೊಲಂಬೋದ ಕ್ಯಾಂಡಿ ಎಂಬ ಬೌದ್ದ ಮಂದಿರವು ವಿಶ್ವ ಪ್ರಸಿದ್ಧ ಬೌದ್ದ ದೇವಾಲಯ. ಇಲ್ಲಿನ ಶ್ರೀದಳದ ಮ್ಯೂಸಿಯಂನಲ್ಲಿ ಹಲವು ಪ್ರಾಚೀನ ಬೌದ್ಧ ಧರ್ಮದ ಪುರಾವೆಗಳ ಜೊತೆ ಬುದ್ಧನ ನಿಜವಾದ ದಂತ ಎಂದು ನಂಬಲಾದ ಹಲ್ಲೊಂದನ್ನ ಸಂರಕ್ಷಿಸಿಡಲಾಗಿದೆ. ಇದನ್ನ ನೋಡಲು ದೂರದ ಊರುಗಳಿಂದ ಜನ ಮುಗಿಬಿದ್ದು ಬರುತ್ತಾರೆ. ಈ ದಂತಕ್ಕೆ ಕೈಮುಗಿದು ಪೂಜೆ ಮಾಡಿ ಹೋಗುತ್ತಾರೆ. 1998 ರಲ್ಲಿ ಈ ದೇವಾಲಯಕ್ಕೆ ಎಲ್ಟಿಟಿಈ ಉಗ್ರರ ದಾಳಿಯಿಂದಾಗಿ ಮಂದಿರ ಹಾಗೂ ಮ್ಯೂಸಿಯಂಗೆ ಭದ್ರವಾದ ಸೆಕ್ಯೂರಿಟಿಯನ್ನು ಏರ್ಪಡಿಸಿ ಸಿಸಿಟಿವಿಯನ್ನ ಅಳವಡಿಸಲಾಗಿದೆ. ಬುದ್ಧನ ನಿರ್ವಾಣದ ಬಳಿಕ ಅವರದೇ ಆಶಯದಂತೆ ಅವರ ದೇಹವನ್ನ ಸುಡಲಾಯಿತು. ನಂತರ ಅವರ ದಿನ ಬಳಕೆಯ ವಸ್ತುಗಳನ್ನ ಅವರ ಆಪ್ತ ಅನುಯಾಯಿಗಳು ವಶಕ್ಕೆ ಪಡೆದು ರಕ್ಷಿಸಿದರು.


ಅದೇ ರೀತಿ ಚಿತೆಯಲ್ಲಿ ಬೂದಿಯಾಗಿದೆ ಉಳಿದ ಅವರ ದವಡೆ ಹಲ್ಲನ್ನು ಸಹ ಅವನ ನೆನಪಿಗಾಗಿ ಸಂರಕ್ಷಿಸಿದ್ದಾರಂತೆ. ಬುದ್ಧನ ನಿರ್ವಾಣದ ಬಳಿಕ ಇನ್ನೂರು-ಮುನ್ನೂರು ವರ್ಷಗಳ ತರುವಾಯ ಅವನು ಹುಟ್ಟು ಹಾಕಿದ ಧರ್ಮದಲ್ಲಿ ಬಿರುಕು ಮೂಡಿತ್ತು. ಹೀನಾಯಾನ ಮಹಾಯಾನಗಳೆಂಬ ಕವಲುಗಳು ಒಡೆಯುತ್ತಿದ್ದಂತೆ ಬುದ್ಧನ ಮೂಲ ಆರಾಧಕರು ತನ್ನ ನಂತರ ಬಂದ ವಿಗ್ರಹದೊಂದಿಗೆ ಹೊಂದಿಕೊಳ್ಳಲಾಗದೆ ದೂರಾದರು. ಈ ರೀತಿ ದೂರದ ಮೂಲ ಆರಾಧಕರ ಗುಂಪೇ ಮುಂದೆ ನೇರವಾದಿಗಳು ಎಂಬ ಪಂಥವಾಗಿ ಗುರುತಿಸಿಕೊಂಡರು. ಮುಂದೆ ಎಷ್ಟೋ ವರ್ಷಗಳವರೆಗೂ ಬುದ್ಧನ ಹಲ್ಲು ಹಾಗೂ ಇತರ ಅವರ ವಸ್ತುಗಳು ಇವರ ಹತ್ತಿರವಿದ್ದವು. ಆಮೇಲೆ ಆ ಹಲ್ಲಿಗಾಗಿ ಹಲವು ಧಾರ್ಮಿಕ ಘರ್ಷಣೆಗಳು ನಡೆದು ಹೋದವು. ಚರಿತ್ರೆಯಲ್ಲಿ ಕ್ರಿ.ಶ 1 ರಿಂದ ಹಿಡಿದು ಕ್ರಿ.ಶ 15 ರವರೆಗೂ ಈ ಒಂದು ದಂತಕಾಗಿ ಜರುಗಿದ ರಕ್ತ ಪಾತಗಳು, ಹಿಂಸೆಗಳು, ಯುದ್ಧಗಳು ಅನೇಕ.

ಈ ಕಾಲಾವಧಿಯಲ್ಲಿ ಈ ದಂತ ಒಬ್ಬರಿಂದ ಇನ್ನೊಬ್ಬರಿಗೆ, ಸಾಮ್ರಾಜ್ಯದಿಂದ ಸಾಮ್ರಾಜ್ಯಕ್ಕೆ, ದೇಶದಿಂದ ದೇಶಕ್ಕೆ, ಮನೆತನದಿಂದ ಮನೆತನಕ್ಕೆ ಪ್ರಯಾಣಿಸಿದ ಯಾನ ಬಹಳ ದೀರ್ಘವಾಗಿತ್ತು. ಶ್ರೀಲಂಕಾ ಒಂದರಲ್ಲೇ ಸುಮಾರು 6-7 ಶತಮಾನಗಳ ಕಾಲ ಈ ದಂತ ಅಲ್ಲಿನ ಪ್ರಮುಖ ಮನೆತನಗಳ ದೊರೆಗಳ ಒಡೆತನದಲ್ಲಿತ್ತು. ಮತ್ತೆ ಅವರಿಂದ ರಾಜೋಚಿತ ಪೂಜೆಯನ್ನು ಪಡೆಯುತ್ತಿತ್ತಂತೆ. ಈ ದಂತ ಯಾರ ವಶದಲ್ಲಿ ಇರುತ್ತೋ ಅವನೇ ಶಕ್ತಿಶಾಲಿ ದೊರೆ ಹಾಗೂ ಅವನಿಗೆ ಕೀರ್ತಿ ಅನ್ನುವ ನಂಬಿಕೆಗಳು ಬೆಳೆದ ದೆಸೆಯಲ್ಲಿ ಈ ದಂತಕ್ಕಾಗಿ ಶುರುವಾದ ದಂಡಯಾತ್ರೆಗಳು ವಾಸ್ತವ. ಶ್ರೀಲಂಕಾ ಕೆಲ ಗುಹಾಂತರ ದೇವಾಲಯಗಳಲ್ಲಿ ಈ ದಂತವನ್ನ ಅಂದಿನ ರಾಜರು ಗೌರವಿಸುತ್ತಿದ್ದರು. ಬೌದ್ದ ಮೆರವಣಿಗೆ ಮಾಡುತ್ತಿದ್ದಂತಹ ಚಿತ್ರ ಲಿಪಿಗಳು, ಕೆತ್ತನೆಗಳು ಸಹ ಅನೇಕ ಲಭ್ಯವಿದೆ.


ಇದು ಪಕ್ಕದ ಬೂತಾನಿನ ರಾಜಮನೆತನದವರ ಕೈಗೂ ಸಿಕ್ಕಿದೆ ಎಂಬ ಅಪರೂಪದ ವಿವರಗಳಿವೆ. ಈಗ ಲಂಕೆಯ ದೇವಾಲಯದ ಬಳಿಯಿರುವ ಮ್ಯೂಸಿಯಂನಲ್ಲಿರುವುದು ಇದೆ ದಂತ ಎಂಬ ಸಾಂಪ್ರದಾಯಿಕ ನಂಬಿಕೆ ಇದೆ. ಆದರೆ ಅದನ್ನು ನೋಡುವ ಯಾವುದೇ ಪ್ರಜ್ಞಾವಂತನು ಈ ನಂಬಿಕೆಗೆ ಸೋಲಲಾರ ಕಾರಣ ಈ ದಂತ ಸುಮಾರು ಮೂರು ಇಂಚು ಉದ್ದವಿದೆ. ಮಾನವನ ದವಡೆ ಇಷ್ಟು ಉದ್ದವಿರಲು ಸಾಧ್ಯವೇ? ಇದು ಯಾವುದೋ ಮೂಳೆಯ ಚೂರು ಇರಬೇಕೆಂಬ ಅನಿಸಿಕೆ ಉಂಟಾಗುವುದಂತು ಸುಳ್ಳಲ್ಲ. ಇಷ್ಟೇ ಅಲ್ಲ ಕ್ರಿ.ಶ 15 ನೇ ಶತಮಾನದಲ್ಲಿ ಒಮ್ಮೆ ಒರ್ವ ಕ್ರೈಸ್ತ ಪಾದ್ರಿಗೆ ಇದು ಸಿಕ್ಕಿ ಅವನು ಅದನ್ನು ಜಜ್ಜಿ ಪುಡಿ ಮಾಡಿ ಸಮುದ್ರಕ್ಕೆಸೆದು ನಾಶಮಾಡಿದನು ಎಂಬ ಉಲ್ಲೇಖವೂ ಕೂಡ ಚರಿತ್ರೆಯಲ್ಲಿದೆ.

ಮತ್ತೊಂದು ಸೋಜಿಗದ ಸಂಗತಿಯೆಂದರೆ ಇವತ್ತು ನಾಲ್ಕು ರಾಷ್ಟ್ರಗಳು ತಮ್ಮ ಬಳಿ ಈ ಹಲ್ಲು ಇರುವುದಾಗಿ ವಾದಿಸುತ್ತಿದೆ. ತೈವಾನ್, ಭೂತಾನ್, ಶ್ರೀಲಂಕಾ ಹಾಗೂ ಜಪಾನ್ ಈ ನಾಲ್ಕು ರಾಷ್ಟ್ರಗಳಲ್ಲಿ ಒಂದೊಂದು ಹಲ್ಲಿದೆ. ಎಲ್ಲರೂ ತಮ್ಮದೇ ನಿಜವಾದ ಹಲ್ಲೆಂದು ವಾದಿಸುತ್ತಿದೆ. ಇದು ಇಂದಿನ ಭೂಗತ ಜಗತ್ತಿನಲ್ಲಿ ಭಾರಿ ಬೇಡಿಕೆ ಹಾಗೂ ಅತಿ ಹೆಚ್ಚು ಬೆಲೆ ಇರುವಂತಹ ಆಂಟಿಕ್ ವಸ್ತು ಅಂತ ಅನಿಸಿದೆ. ಅಲ್ಲದೆ ಹಲವು ಕುಖ್ಯಾತ ಅಂತರಾಷ್ಟ್ರಿಯ ಕಳ್ಳರ ಕೆಂಗಣ್ಣು ಇದರ ಮೇಲಿದೆ.

– ಸುಷ್ಮಿತಾ

ನಿರಂತರ ಸಂಶೋಧನೆ ಹಾಗೂ ಕಠಿಣ ಪರಿಶ್ರಮದಿಂದ ಶ್ರೀ ರವಿಶಂಕರ್ ಗುರೂಜಿಯವರು ತಯಾರಿಸಿರುವ ‘ಶಂಕರಾಮೃತ’ ಅನೇಕ ಸಮಸ್ಯೆಗಳಿಗೆ ಮದ್ದು. 16 ವರ್ಷ ಮೇಲ್ಪಟ್ಟ ವಯಸ್ಸಿನವರು ಈ ಶಂಕರಾಮೃತವನ್ನು ಸೇವಿಸಬಹುದು. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಡಯಾಬಿಟಿಸ್, ಶೀತ, ಕೆಮ್ಮು ಸೇರಿದಂತೆ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ‘ಶಂಕರಾಮೃತ’ ರಾಮಬಾಣ. ಏಕೆಂದರೆ ಅಶ್ವಗಂಧ, ನೆಲ್ಲಿಕಾಯಿ, ಅಮೃತಬಳ್ಳಿ, ಶತಾವರಿ, ಬಾಲ, ಮಂಜಿಷ್ಟ, ಕಾಪಿಕಚ್ಚು ಸೇರಿದಂತೆ ಬಹೋಪಯೋಗಿ ಗಿಡಮೂಲಿಕೆಗಳನ್ನು ಬಳಸಿ ಶಂಕರಾಮೃತವನ್ನು ತಯಾರಿಸಲಾಗಿದೆ. ಇದನ್ನು ಬೆಳಗ್ಗೆ ತಿಂಡಿಗೂ ಮುನ್ನ 15 ಮಿಲಿ ರಾತ್ರಿ ಊಟಕ್ಕೂ ಮುನ್ನ 15 ಮಿಲಿ ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹದಲ್ಲಾಗುವ ಬದಲಾವಣೆಯನ್ನು ಗಮನಿಸಬಹುದು.

LEAVE A REPLY

Please enter your comment!
Please enter your name here