ಬಿಎಸ್ಎನ್ ಎಲ್ ಬಿಡುಗಡೆಗೊಳಿಸಿದ ಹೊಸ ಪ್ಲಾನ್ ಗೆ ಟೆಲಿಕಾಂ ಸಂಸ್ಥೆಗಳು ಶಾಕ್ !

0
654

ಸರ್ಕಾರದ ದೂರಸಂಪರ್ಕ ಸೇವಾ ಸಂಸ್ಥೆ ಭಾರತೀಯ ಸಂಚಾರಿ ನಿಗಮ ಲಿಮಿಟೆಡ್ ತನ್ನ ಗ್ರಾಹಕರಿಗಾಗಿ ಎರಡು ವಿನೂತನ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಹೊಸದಾಗಿ ಪರಿಚಯಿಸುವ ಸಲುವಾಗಿ ಪ್ಲಾನ್ಗಳನ್ನು ಬಿಡುಗಡೆಮಾಡಿದೆ. ಅದೇ 299 ಹಾಗೂ 491 ರೂಪಾಯಿಗಳಿಂದ ಪ್ರಾರಂಭಗೊಳ್ಳುವ ಈ ಯೋಜನೆಗಳಲ್ಲಿ ಗ್ರಾಹಕರಿಗೆ ಅನಿಯಮಿತ ಸೌಲಭ್ಯಗಳು ಈ ಪ್ಯಾಕ್ ನಿಂದ ಲಭ್ಯವಾಗಲಿವೆ.
6 ತಿಂಗಳ ವ್ಯಾಲಿಡಿಟಿ ಪ್ಯಾಕೇಜ್ ಇದಾಗಿದ್ದು ಇದರಲ್ಲಿ ಗ್ರಾಹಕರಿಗೆ 20ಎಂಬಿಪಿಎಸ್ ವೇಗದ ಇಂಟರ್ನೆಟ್ ಸೌಲಭ್ಯ ಲಭಿಸಲಿದೆ.

ಅಲ್ಲದೇ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರಿಗೆ ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ಮೂಲಕ ಯಾವುದೇ ನೆಟ್ ವರ್ಕ್ ಗಳಿಗೆ ಅನಿಯಮಿತ ಕರೆಗಳನ್ನು ಮಾಡುವ ಸೌಲಭ್ಯ ಲಭಿಸಲಿದೆ. ಡಿಸೆಂಬರ್ 27ರಿಂದ ಈ ಯೋಜನೆಯನ್ನು ಗ್ರಾಹಕರಿಗೆ ಪರಿಚಯಿಸಲಾಗಿದೆ.299 ರೂಪಾಯಿಗಳ ಯೋಜನೆಯಲ್ಲಿ 20 ಎಂಬಿಪಿಎಸ್ ವೇಗದ 50 ಜಿಬಿ ಡಾಟಾ ಮತ್ತು ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ನಿಂದ ಅನಿಯಮಿತ ಕರೆಗಳ ಸೌಲಭ್ಯವನ್ನು ನೀಡಲಾಗುತ್ತಿದೆ.

ಇನ್ನು 491 ಬ್ರಾಡ್ ಬ್ಯಾಂಡ್ ಯೋಜನೆಯಲ್ಲಿ 120 ಜಿಬಿ ಎಫ್.ಯು.ಪಿ. ಲಿಮಿಟ್ ಡಾಟಾ ಸಿಗಲಿದೆ ಹಾಗೂ ಅನಿಯಮಿತ ಕರೆ ಸೌಲಭ್ಯ ಸಹ ನಿಮ್ಮ ಪಾಕೆಟ್ ಗೆ ಸಿಗಲಿದೆ.BSNL 777 ರೂಪಾಯಿಗಳ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಅನ್ನು ಮರುಪರಿಚಯಿಸಿದೆ. ಇದರಲ್ಲಿ 50 ಎಂಬಿಪಿಎಸ್ ವೇಗದ 500 ಜಿಬಿ ಗ್ರಾಹಕರಿಗೆ ಲಭ್ಯವಾಗಲಿದೆ.
ಹೊಸ ಸಂಪರ್ಕವನ್ನು ಪಡೆದಕೊಳ್ಳಲು ಬಯಸುವ ಗ್ರಾಹಕರಿಗೆ ಸೆಕ್ಯುರಿಟಿ ಡಿಪಾಸಿಟ್ ರೂಪದಲ್ಲಿ 500 ರೂಪಾಯಿಗಳನ್ನು ನಿಗದಿ ಮಾಡಲಾಗಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here