ನಮ್ಮ ದೇಸಿ ಪೇಯವೆಂದೇ ಹೆಸರಾದ ಚಹಾವನ್ನು ಭಾರತದ ರಾಷ್ಟ್ರೀಯ ಪಾನೀಯ ಎಂದು ಕರೆಯುವಲ್ಲಿ ತಪ್ಪಿಲ್ಲ. ಕಾರಣ ಸಾಮಾನ್ಯವಾಗಿ ನಾವೆಲ್ಲರೂ ದಿನಕ್ಕೆ ಒಂದೆರಡು ಬಾರಿಯಾದಾರೂ ಚಹಾ ಹೀರುತ್ತೇವೆ ಅಲ್ಲದೇವೆ. ಅದರಲ್ಲೂ ಕೊರೆಯುವ ಚಳಿಯಲ್ಲಿ ಟೀ ಕುಡಿಯುವ ಮಜಾನೇ ಬೇರೆ. ಹಾಗಾಗಿ ನಾವೆಷ್ಟು ಬ್ಯುಸಿ ಇದ್ದರೂ ಟೀ ಅಂಗಡಿ ಹುಡುಕಿ ಹೋಗುತ್ತೇವೆ.
ಅದೇ ಬಿಸಿ – ಬಿಸಿ ಚಹಾ ಎಲ್ಲಿ ಸಖತ್ ರುಚಿಯಾಗಿ ಸಿಗುತ್ತದೆ ಎಂಬುದನ್ನು ಪತ್ತೆ ಹಚ್ಚುತ್ತೇವೆ. ಅಂತಹ ಚಹಾವನ್ನು ಮಾರಟ ಮಾಡಿ ಕೋಟ್ಯಾಧಿಪತಿ ಆಗಿದ್ದಾರೆ ಎಂಬ ಸತ್ಯ ನಿಮಗೆ ಗೊತ್ತೇ. ಹೌದು ಇದು ಅಚ್ಚರಿಯಾದರೂ ನಿಜವೇ !. ಅದು ಅಮೆರಿಕ ಮಹಿಳೆ. ಅವರ ಹೆಸರು ಬ್ರೂಕ್ ಎಡ್ಡಿ.
ಅಂದರೆ 2002ರಲ್ಲಿ ಸುಮಾರು 17 ವರ್ಷಗಳ ಹಿಂದೆ ಬ್ರೂಕ್ ಎಡ್ಡಿ ಭಾರತಕ್ಕೆ ಬಂದಿದ್ದ ವೇಳೆ ಕುಡಿದ ಚಹಾ ಅವರಿಗೆ ಹೊಸ ಅನುಭವ ನೀಡಿತ್ತು. ಇದೇ ವಿಶಿಷ್ಟ ರುಚಿಯಿಂದ ಕೂಡಿದ ಟೀಗೆ ಎಡ್ಡಿ ಆಗಿದ್ದರು. ಭಾರತದಲ್ಲಿ 4 ವರ್ಷಗಳ ಕಾಲವಿದ್ದ ಎಡ್ಡಿ 2006ರಲ್ಲಿ ಅಮೇರಿಕಕ್ಕೆ ಮರಳಿದ್ದರು. ಆದರೆ ಭಾರತದ ಚಹಾ ರುಚಿ ಅದಾಗಲೇ ಅವರ ನಾಲಿಗೆಯನ್ನು ಆವರಿಸಿತ್ತು. ಹೀಗಾಗಿಯೇ ಅಮೆರಿಕದಲ್ಲೂ ಅದೇ ಸ್ವಾದದ ಚಹಾ ಸವಿಯಲು ಹಂಬಲಿಸಿದರು.
ಈ ಐಡಿಯಾ ಬಂದ ಬಳಿಕ ಸಣ್ಣ ಸ್ಥಳದಲ್ಲಿ ದೇಸಿ ಚಹಾ ಅಂಗಡಿ ಪ್ರಾರಂಭಿಸಲು ನಿರ್ಧರಿಸಿದರು. 2007 ರಲ್ಲಿ ಟೀ ಅಂಗಡಿ ಪ್ರಾರಂಭಿಸಿದ ಎಡ್ಡಿ ಅಮೆರಿಕದ ಎಲ್ಲಾ ಭಾಗಗಗಳಲ್ಲೂ ತಲುಪುವಂತೆ ಮಾಡಲು ಯೋಜನೆ ಹಾಕಿಕೊಂಡರು. ಅದರಂತೆ ಚಹಾ ಮಾರಾಟಕ್ಕೆ ದೇಸಿ ಟಚ್ ನೀಡಿ ಭಕ್ತಿ ಚಾಯ್ ಎಂಬ ಬ್ರ್ಯಾಂಡ್ ಸೃಷ್ಟಿಸಿದರು. ಆರಂಭದಲ್ಲಿದ್ದ ಟೀ ಅಂಗಡಿಯಲ್ಲಿ ಬಿಸಿನೆಸ್ ಜೋರಾಗಿಯೇ ನಡೆಯುತ್ತಿರುವುದು ಕಂಡ ಎಡ್ಡಿ ಕೆಫೆಗಳನ್ನು ಓಪನ್ ಮಾಡಲು ಪ್ರಾರಂಭಿಸಿದರು. ಹಾಗೆಯೇ ಕ್ರಮೇಣ ಮನೆ ಮನೆಗಳಲ್ಲೂ ಭಕ್ತಿ ಚಾಯ್ ಅಡಿಯಿಡಲು ಪ್ರಾರಂಭಿಸಿತು.
ಕೇವಲ ಒಂದು ಸಣ್ಣ ಅಂಗಡಿಯಿಂದ ಪ್ರಾರಂಭವಾದ ಕಂಪನಿಯಲ್ಲಿ ಇಂದು ನೂರಾರು ಜನರು ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಭಕ್ತಿ ಚಾಯ್ ಕಂಪೆನಿಯಿಂದ ಎಡ್ಡಿ 200 ಕೋಟಿ ಒಡೆತಿಯಾಗಿದ್ದಾರೆ. 2014 ರಲ್ಲಿ ಎಂಟರ್ಪ್ರೆನೂರ್ ನಿಯತಕಾಲಿಕೆಯ ವರ್ಷದ ಉದ್ಯಮಿ ಪಟ್ಟಿಯಲ್ಲಿ ಬ್ರೂಕ್ ಎಡ್ಡಿ ಟಾಪ್ 5 ರಲ್ಲಿ ಸ್ಥಾನ ಪಡೆದಿದ್ದರು.