ಈ ರಹಸ್ಯ ಮುಚ್ಚಿಟ್ಟು ವ್ಯಾಪಕ ಟೀಕೆಗೆ ಗುರಿಯಾದ ಬ್ರಿಟನ್ ರಾಜ ಕುಡಿ ಪ್ರಿನ್ಸ್ ವಿಲಿಯಂ..!

0
81

ಕೊರೋನ ಸೊಂಕಿನ ವಿಚಾರವಾಗಿ ದೇಶಕ್ಕೆ ಮುಂಜಾಗ್ರತೆ ನೀಡಬೇಕಾಗಿದ್ದ ಬ್ರಿಟನ್ ರಾಜಮನೆತನದ ಕುಡಿ ಪ್ರಿನ್ಸ್ ವಿಲಿಯಂ ಏಪ್ರೀಲ್ ತಿಂಗಳಿನಲ್ಲಿಯೇ ಕೊರೋನಾ ಸೊಂಕಿಗೆ ತುತ್ತಾಗಿದ್ದರೂ ಕೂಡ ಈ ವಿಚಾರವನ್ನು ರಹಸ್ಯವಾಗಿಟ್ಟಿದ್ದರು ಎಂದು ತಿಳಿದು ಬಂದಿದೆ. ಈ ವಿಚಾರವನ್ನು ಮುಚ್ಚಿಟ್ಟಿದ್ದು ಏಕೆ ಎಂಬ ವಿಚಾರ ಈಗ ತೀರ್ವ ಚರ್ಚೆಗೆ ಗುರಿಯಾಗಿದ್ದು ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ.

ಪ್ರಸ್ತುತ ಅಮೇರಿಕಾ ಸೇರಿದಂತೆ ಬ್ರಿಟನ್ ನಲ್ಲಿಯೂ ಕೊರೋನಾ ಅಟ್ಟಹಾಸ ಹೆಚ್ಚಾಗಿದ್ದು, ಕೋರೋನಾವನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರಗಳು ಹರಸಾಹಸ ಪಡುತ್ತಿವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ಜನರಿಗೆ ಕೊರೋನಾ ವಿಚಾರವಾಗಿ ಧೈರ್ಯತುಂಬಿ ಅದರ ತಡೆಗಟ್ಟುವಿಕೆಗೆ ಮುಂದಾಗ ಬೇಕಾಗಿತ್ತು ಆದರೇ ಪ್ರಿನ್ಸ್ ವಿಲಿಯಂ ಸೊಂಕಿನ ವಿಚಾರವನ್ನೇ ಮುಚ್ಚಿಟ್ಟಿದ್ದು ಏಕೆ? ಇದು ಅವರು ಜಗತ್ತಿಗೆ ನೀಡಿದ ಸಂದೇಶವೇನು? ಎಂಬ ಟೀಕೆಗಳು ಹರಿದು ಬರುತ್ತಿವೆ.


ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೇ ನೀಡಿರುವ ಬ್ರಿಟನ್ ರಾಜಮನೆತನದ ಕುಡಿ ಪ್ರಿನ್ಸ್ ವಿಲಿಯಂ ‘ನಾನು ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ಬ್ರಿಟನ್‍ನಲ್ಲಿ ಕೆಲವು ಪ್ರಮುಖ ಚಟುವಟಿಕೆಗಳು ನಡೆಯುತ್ತಿದ್ದವು, ಅವುಗಳಿಗೆ ಧಕ್ಕೆಯಾಗಬಾರದು ನನ್ನ ಸೊಂಕಿನ ವಿಚಾರ ಬೇರೆ ಗೊಂದಲಗಳಿಗೆ ಕಾರಣಗಬಾರದು ಎಂಬ ಒಂದೇ ಕಾರಣಕ್ಕಾಗಿ ನಾನು ಸೊಂಕಿಗೆ ತುತ್ತಾದ ವಿಚಾರವನ್ನು ಮುಚ್ಚಿಟ್ಟು ಚಿಕಿತ್ಸೆ ಪಡೆಯಬೇಕಾಯಿತು. ಪ್ಯಾಲೆಸ್‍ನಲ್ಲಿಯೇ ಪ್ರತ್ಯೇಕವಾಗಿದ್ದುಕೊಂಡು ಅರಮನೆ ವೈದ್ಯರಿಂದ ಚಿಕಿತ್ಸೆ ಪಡೆದು ಗುಣಮುಖನಾಗಿ ಹೊರಬಂದೆ ಇದರಲ್ಲಿ ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಸನ್ ನ್ಯೂಸ್ ಪೇಪರ್‍ಗೆ ಹೇಳಿದ್ದಾರೆ.

ಇನ್ನು ಇದನ್ನು ಮುಂಚೆ ಪ್ರಿನ್ಸ್ ವಿಲಿಯಂ ತಂದೆ ಬ್ರಿಟನ್ ರಾಜಮನೆತದ ಪ್ರಿನ್ಸ್ ಚಾಲ್ರ್ಸ್ ಅವರು ಮಾರ್ಚ್ ತಿಂಗಳಿನಲ್ಲಿ ಕೋರೋನಾ ಮಾರಿಗೆ ತುತ್ತಾಗಿದ್ದರು. ಬಳಿಕ ಸ್ಕಾಟ್ಲೆಂಟ್ ಅರಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿದ್ದುಕ್ಕೊಂಡು 7 ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದರು. ಈ ವಿಚಾರದಲ್ಲಿ ಪ್ರಿನ್ಸ್‍ವಿಲಿಯಂ ಕೂಡ ತಮ್ಮ ಸೊಂಕಿನ ವಿಚಾರವನ್ನು ಬಹಿರಂಗ ಪಡಿಸಬೇಕಿತ್ತೆಂಬುದು ಕೆಲವರ ವಾದವಾಗಿದೆ.

ಕೊರೋನಾ ಸೊಂಕು ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ವ್ಯಾಕಸೀನ್ ಸಿಗದೆ ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಾಪಿಸುತ್ತಲೇ ಇದೆ. ಬಡವನಿಂದ ಇಡಿದು ಶ್ರೀಮಂತನವರೆಗೂ ಯಾರನ್ನು ಬಿಡದೇ ಕಾಡುತ್ತಿದೆ, ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನಮ್ ಘೆಬ್ರೆಯೆಸಸ್ ಕೂಡ ಸ್ವಯಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೇತರಿಸಿಕೊಂಡು ಹೊರಬಂದು ಮುಂದಿನ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಕಳೆದ ವರ್ಷಾಂತ್ಯದಲ್ಲಿ ಚೀನಾದಲ್ಲಿ ಹೊರ ಹೊಮ್ಮಿದ ಈ ಮಾರಕ ಕೊರೋನಾ ವೈರಸ್ ಇಲ್ಲಿಯವರೆಗೂ ಸುಮಾರು 12 ಲಕ್ಷ ಜನರನ್ನು ಬಲಿ ಪಡೆದಿದ್ದು, ವಿಶ್ವದಾದ್ಯಂತ ಸುಮಾರು 4 ಕೋಟಿ 60 ಲಕ್ಷಕ್ಕೂ ಹೆಚ್ಚ ಜನರು ಈ ಸೊಂಕಿಗೆ ತುತ್ತಾಗಿದ್ದರೇ. ವಿಶ್ವದ ಹಲವಾರು ಸಂಸ್ಥೆಗಳು ಕೊರೋನಾಗೆ ಲಸಿಕೆ ಕಂಡು ಹಿಡಿಯುವಲ್ಲಿ ಮುಂದಾಗಿದ್ದು ಮುಂದಿನ ವರ್ಷಾರಂಭದಲ್ಲಿ ಲಸಿಕೆ
ದೊರಕಿವ ವಿಶ್ವಾಸ ವ್ಯಕ್ತಪಡಿಸಿವೆ.

LEAVE A REPLY

Please enter your comment!
Please enter your name here