ಮದುವೆಯಾಗೋ ಹುಡುಗನ ಮೂಗು ಸೊಟ್ಟಗಿದೆ ಎಂದು ಹುಡುಗಿಯ ಕಂಪ್ಲೆಂಟ್ .!

0
157

ತಾನು ಮದುವೆಯಾಗುವ ಹುಡುಗನ ಮೂಗು ಸೊಟ್ಟಗಿದೆ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲಿಲ್ಲ ಎಂದು ಮದುವೆಯಾಗಲು ನಿರಾಕರಿಸಿ ವಂಚಿಸಿದ ವಧುವಿನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಯ್ಯೋ ಇದೇನಪ್ಪಾ ಇಂತಹ ಹುಡುಗಿಯರು ಇರ್ತಾರಾ ಎಂದ್ರಾ ? ಹೌದು, ಇದು ನಡೆದಿರುವುದು ನಮ್ಮ ರಾಜಧಾನಿ ಬೆಂಗಳೂರಿನಲ್ಲೇ. ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಪರಿಚಯವಾದ ಎಚ್ಎಸ್ಆರ್ ಲೇಔಟ್ನ ಯುವತಿ ಜತೆ ಕೋರಮಂಗಲದ ಯುವಕನ ಮದುವೆ ನಿಶ್ಚಯವಾಗಿತ್ತು. ಯುವಕ ಖಾಸಗಿ ಕಂಪನಿ ಉದ್ಯೋಗಿ. ಸೆಪ್ಟೆಂಬರ್ನಲ್ಲಿ ಯುವತಿ ಮನೆಯಲ್ಲೇ ವಿವಾಹ ನಿಶ್ಚಿತಾರ್ಥವಾಗಿತ್ತು.

 

ಆ ವೇಳೆ ಮೂರು ತಿಂಗಳ ನಂತರ ಮದುವೆ ಇಟ್ಟುಕೊಳ್ಳೋಣ. ಸದ್ಯ ಅಮೇರಿಕದಲ್ಲಿ ಕೆಲಸ ಇದೆ ಎಂದ ಯುವತಿ, ತಿರುಪತಿಯಲ್ಲೇ ಮದುವೆ ನಡೆಯಬೇಕು ಎಂದಿದ್ದಳು. ಅದರಂತೆ ಯುವಕನ ಪಾಲಕರು ಜನವರಿ 30ಕ್ಕೆ ಮದುವೆ ನಿಶ್ಚಯಿಸಿದ್ದರು. ಈ ಸಂಬಂಧ ತಿರುಪತಿಯ ಕರ್ನಾಟಕ ಅತಿಥಿ ಗೃಹದಲ್ಲಿ 40 ಹಾಗೂ ಟಿಟಿಡಿ ಅತಿಥಿ ಗೃಹದಲ್ಲಿ 70 ಕೊಠಡಿ ಬುಕ್ ಮಾಡಿ 1 ಲಕ್ಷ ರೂ. ಮುಂಗಡ ಕೊಟ್ಟಿದ್ದರು. ಸಮಾರಂಭದ ಇತರೆ ವೆಚ್ಚಕ್ಕೆ 4 ಲಕ್ಷ ರೂ. ಖರ್ಚು ಮಾಡಿದ್ದರು. ಅಕ್ಟೋಬರ್ನಲ್ಲಿ ವಧುವಿಗೆ ಕರೆ ಮಾಡಿ ಮದುವೆ ಸಿದ್ಧತೆ ಬಗ್ಗೆ ವರ ಚರ್ಚೆ ಸಹ ನಡೆಸಿದ್ದ. ಆ ವೇಳೆ ಆಕೆ, ನಿನ್ನ ಮೂಗು ಸೊಟ್ಟಗಿದೆ.

 

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಿ ಎಂದಿದ್ದಳು. ತಮಾಷೆಗೆಂದು ಆತ ಸುಮ್ಮನಾಗಿದ್ದ. ಮತ್ತೆ ಕರೆ ಮಾಡಿದಾಗಲೆಲ್ಲ, ಅದೇ ವಿಚಾರ ಮುಂದಿಟ್ಟುಕೊಂಡು ಬೇಸರದ ಮಾತುಗಳನ್ನಾಡಿದ್ದಳು. ಈ ವಿಚಾರವನ್ನು ವಧುವಿನ ಸಹೋದರಿ ಗಮನಕ್ಕೂ ತಂದಿದ್ದ. ಯುವತಿಯ ಸಹೋದರಿ ಇಬ್ಬರನ್ನೂ ಕಾನ್ಪರೆನ್ಸ್ ಕರೆ ಮೂಲಕ ಮಾತನಾಡಿಸಿದ್ದರು. ಈ ವೇಳೆ ಯುವತಿ ಮದುವೆ ಬಗ್ಗೆ ನಿರ್ಧರಿಸುವುದು ನನಗೆ ಬಿಟ್ಟದ್ದು. ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದಿದ್ದಳು.

 

ಮದುವೆ ಸಮೀಪಿಸುತ್ತಿದ್ದಂತೆ ವಧು ಮತ್ತು ಅವಳ ಪಾಲಕರು ಯುವಕನ ಸಂಪರ್ಕಕ್ಕೆ ಸಿಕ್ಕಿಲ್ಲ. ಮದುವೆ ಸಿದ್ಧತೆಗೆಂದು ಲಕ್ಷಾಂತರ ರೂ. ಖರ್ಚು ಮಾಡಿ ವಂಚನೆಗೆ ಒಳಗಾಗಿರುವ ಸಂಬಂಧ ವಧು, ಆಕೆಯ ಸಹೋದರಿ ಮತ್ತು ತಂದೆ ವಿರುದ್ಧ ವರ ದೂರು ನೀಡಿದ್ದಾನೆ. ಈಗ ಆ ಹುಡುಗಿ ಸ್ಟೇಷನ್ ಗೆ ಅಲಿಯುತ್ತಿದ್ದು ತಲೆ – ತಲೆ ಚಚ್ಚಿಕೊಳ್ಳುತ್ತಿದ್ದಾಳೆ.

LEAVE A REPLY

Please enter your comment!
Please enter your name here